ರಿಲಯನ್ಸ್ ಜಿಯೋ ₹601ಕ್ಕೆ ವಾರ್ಷಿಕ 5G ಪ್ಲಾನ್‌ ಅನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಏರ್‌ಟೆಲ್ ಸಹ ತನ್ನದೇ ಆದ ಲೆಕ್ಕಾಚಾರದಲ್ಲಿ ಟಕ್ಕರ್ ಪ್ಲಾನ್‌ ಪರಿಚಯಿಸಿದೆ. ಎರಡೂ ಪ್ಲಾನ್‌ಗಳ ವ್ಯತ್ಯಾಸಗಳು ಇಲ್ಲಿವೆ.

ನವದೆಹಲಿ: ದೇಶದ ಎಲ್ಲಾ ಟೆಲಿಕಾಂ ಕಂಪನಿಗಳು ಹೊಸ ವರ್ಷಕ್ಕೆ ನೂತನ ಡೇಟಾ ಮತ್ತು ಕಾಲಿಂಗ್ ಆಫರ್ ಬಿಡುಗಡೆಗೊಳಿಸುತ್ತಿವೆ. ಇದೇ ಭಾಗವಾಗಿ ರಿಲಯನ್ಸ್ ಜಿಯೋ 601 ರೂಪಾಯೊಯ ಪ್ಲಾನ್ ಪರಿಚಯಿಸುವ ಮೂಲಕ ಟೆಲಿಕಾಂ ಅಂಗಳದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಇಡೀ ವರ್ಷ 5G ಡೇಟಾ ಆಫರ್ ಮಾಡಲಾಗಿದೆ. ಇದೀಗ ಇದೇ ರೇಂಜ್‌ನಲ್ಲಿ ಏರ್‌ಟೆಲ್ ಟಕ್ಕರ್ ಪ್ಲಾನ್ ಬಿಡುಗಡೆ ಮಾಡಿದೆ. ಹಾಗಾದ್ರೆ ಜಿಯೋ ಮತ್ತು ಏರ್‌ಟೆಲ್ ಬಿಡುಗಡೆ ಮಾಡಿರುವ ಪ್ಲಾನ್‌ಗಳ ವಿವರವಾದ ಮಾಹಿತಿ ನೋಡೋಣ ಬನ್ನಿ. 

ರಿಲಯನ್ಸ್ ಜಿಯೋ 601 ರೂಪಾಯಿಯ 5G ಪ್ಲಾನ್
ಮೊದಲು ರಿಲಯನ್ಸ್ ಜಿಯೋ ನೀಡುತ್ತಿರುವ 5G ಡೇಟಾ ಪ್ಲಾನ್ ಬಗ್ಗೆ ತಿಳಿದುಕೊಳ್ಳೋಣ. ಈ ಪ್ಲಾನ್‌ನಲ್ಲಿ ಗ್ರಾಹಕರು ಅನಿಯಮಿತವಾಗಿ 5G ಡೇಟಾ ಬಳಕೆ ಮಾಡಬಹುದು. ಆದ್ರೆ ಈ ಡೇಟಾ ಬಳಕೆ ಮೇಲೆ ಜಿಯೋ ಷರತ್ತು ವಿಧಿಸಿದೆ. ಈ ಪ್ಲಾನ್‌ ಲಾಭ ಸಿಗಬೇಕಾದ್ರೆ ಗ್ರಾಹಕರು ಮೊದಲು ಪ್ರತಿದಿನ 1.5GB ಡೇಟಾ ಆಫರ್ ಇರೋ ಪ್ರಿಪೇಯ್ಡ್ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕು. ಇದಾದ ಬಳಿಕವೇ ಗ್ರಾಹಕರಿಗೆ 5G ಡೇಟಾ ಪ್ಲಾನ್ ಆಕ್ಟಿವೇಟ್ ಆಗುತ್ತದೆ.

ಇದನ್ನೂ ಓದಿ: 10 ರೂ ರೀಚಾರ್ಜ್, 365 ದಿನ ವ್ಯಾಲಿಡಿಟಿ; TRAI ಹೊಸ ನಿಯಮಗಳಿಗೆ ಕೋಟ್ಯಂತರ ಮೊಬೈಲ್ ಬಳಕೆದಾರರು ಹ್ಯಾಪಿ ಹ್ಯಾಪಿ

ಈ ಪ್ಲಾನ್‌ನಡಿ ಗ್ರಾಹಕರಿಗೆ 601 ರೂಪಾಯಿಯಲ್ಲಿ 12 ಅಪ್‌ಗ್ರೇಡ್ ವೋಚರ್ ಸಿಗುತ್ತವೆ. ಪ್ರತಿ ತಿಂಗಳು ಒಂದೊಂದು ವೋಚರ್‌ನ್ನು ಬಳಕೆದಾರರು ರಿದೀಮ್ ಮಾಡಿಕೊಳ್ಳಬೇಕು. ವೋಚರ್ ಆಕ್ಟಿವೇಟ್ ಬಳಿಕವೇ ಅನ್‌ಲಿಮಿಟೆಡ್ 5G ಡೇಟಾ ಪ್ಲಾನ್ ಆಕ್ಟಿವೇಟ್ ಆಗಿ ಸಬ್‌ಸ್ಕ್ರಿಪ್ಷನ್ ಸಿಗುತ್ತದೆ. 

ಏರ್‌ಟೆಲ್‌ನಿಂದ 649 ರೂಪಾಯಿಯ ಪ್ಲಾನ್
ರಿಲಯನ್ಸ್ ಜಿಯೋ 651 ರೂಪಾಯಿಯಲ್ಲಿ 5G ಡೇಟಾ ಪ್ಲಾನ್ ನೀಡಿದ್ರೆ, ಏರ್‌ಟೆಲ್ 649 ರೂ.ಗಳಲ್ಲಿ ನೀಡುತ್ತಿದೆ. ಈ 649 ರೂಪಾಯಿ ಪ್ಲಾನ್‌ನಲ್ಲಿ 5G ನೆಟ್‌ವರ್ಕ್ ಜೊತೆಯಲ್ಲಿ ಪ್ರತಿದಿನ 2GB ಡೇಟಾ ಸಹ ಲಭ್ಯವಾಗುತ್ತದೆ. ಇದೇ ಪ್ಲಾನ್‌ನಲ್ಲಿಯೇ ಗ್ರಾಹಕರಿಗೆ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು 100 ಎಸ್‌ಎಂಎಸ್ ಸೌಲಭ್ಯವನ್ನು ಸಹ ನೀಡುತ್ತಿದೆ. ಆದ್ರೆ ಈ ಪ್ಲಾನ್ ವ್ಯಾಲಿಡಿಟಿ ಕೇವಲ 56 ದಿನಗಳಾಗಿವೆ. 

ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ವರ್ಷವಿಡಿ ಅನ್‌ಲಿಮಿಟೆಡ್ 5ಜಿ ಗಿಫ್ಟ್ ವೋಚರ್ ಕೊಡುಗೆ, ಕೇವಲ 601 ರೂ!