ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆ! ಎಥೆನಾಲ್ ಘಟಕ ಆರಂಭದ ಬಳಿಕ ಸಮಸ್ಯೆ ಪರಿಹಾರ! ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯ! ಕೃಷಿ ತ್ಯಾಜ್ಯದಿಂದ ಇಂಧನ ಉತ್ಪಾದನೆ ಸಾಧ್ಯ ಎಂದ ಸಚಿವ! ಬಯೋ ಇಂಧನ ಉತ್ಪತ್ತಿಗೆ ಕೇಂದ್ರ ಸರ್ಕಾರ ಯೋಜನೆ
ರಾಯಪುರ್(ಸೆ.11): ಭಾರತದಲ್ಲಿ ಎಥೆನಾಲ್ ಘಟಕಗಳು ಆರಂಭಗೊಂಡ ಬಳಿಕ ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 55 ರೂ. ಹಾಗೂ ಡೀಸೆಲ್‌ಗೆ ಪ್ರತಿ ಲೀಟರ್‌ಗೆ 50 ರೂ.ನಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ದೇಶದಲ್ಲಿ ಒಟ್ಟು 5 ಎಥೆನಾಲ್ ಉತ್ಪಾದನಾ ಘಟಕಗಳನ್ನು ತೆರೆಯಲಿದ್ದು, ಇವುಗಳು ಕಾರ್ಯಾರಂಭಗೊಂಡ ಬಳಿಕ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಲಿವೆ ಎಂದು ಗಡ್ಕರಿ ಭರವಸೆ ನೀಡಿದ್ದಾರೆ.
ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಿಂದ ಈ ಘಟಕಗಳಲ್ಲಿ ಇಂಧನ ಉತ್ಪತ್ತಿ ಮಾಡಲಾಗುವುದು ಸಚಿವರು ತಿಳಿಸಿದ್ದಾರೆ. ಭತ್ತ ಹಾಗೂ ಗೋಧಿಯ ಹುಲ್ಲು, ಕಬ್ಬು ಇನ್ನಿತರ ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪತ್ತಿ ಮಾಡಬಹುದಾಗಿದೆ ಎಂದು ಗಡ್ಕರಿ ನುಡಿದಿದ್ದಾರೆ.
ಆದಿವಾಸಿ, ರೈತರು ಅರಣ್ಯವಾಸಿಗಳ ಸಹಾಯದಿಂದ ಎಥೆನಾಲ್, ಮೆಥೆನಾಲ್, ಬಯೋ ಇಂಧನಗಳನ್ನು ಉತ್ಪತ್ತಿ ಹೆಚ್ಚು ಅವಕಾಶಗಳಿವೆ. ವಿಮಾನ ಹಾರಾಟಕ್ಕೂ ಎಥೆನಾಲ್ ಬಳಕೆ ಮಾಡಬಹುದಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
ಪ್ರಸ್ತುತ ಭಾರತ 8 ಲಕ್ಷ ಕೋಟಿ ರೂ. ಮೌಲ್ಯದ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಡಾಲರ್ ಎದುರು ರೂಪಾಯಿ ಕುಸಿಯುತ್ತಿರುವುದರಿಂದ ಇಂಧನ ಬೆಲೆ ಏರುತ್ತಿದೆ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
