ದಿಗ್ಗಜ ಕಂಪನಿಗಳು ಒಂದರ ಮೇಲೊಂದರಂತೆ ಶಾಕ್ ನೀಡುತ್ತಿದೆ. ಇದೀಗ ಡಿಹೆಚ್ಎಲ್ ಉದ್ಯೋಗ ಕಡಿತ ಮಾಡುತ್ತಿದೆ. ಬರೋಬ್ಬರಿ 8,000 ಉದ್ಯೋಗಿಗಳ ಕಡಿತ ಮಾಡುತ್ತಿದೆ.

ನವದೆಹಲಿ(ಮಾ.06) ದೇಶ ವಿದೇಶದಲ್ಲಿ ಉದ್ಯೋಗ ಕಡಿತ ಹೆಚ್ಚಾಗುತ್ತಿದೆ. ಇದರ ಜೊತೆಗೆ ಆತಂಕವೂ ಹೆಚ್ಚಾಗುತ್ತಿದೆ. ರಿಲಯನ್ಸ್ ರಿಟೇಲ್ ಈಗಾಗಲೇ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಜಿಯೋ ಸ್ಟಾರ್ ಉದ್ಯೋಗ ಕಡಿತ ಆರಂಭಗೊಂಡಿದೆ. ಇನ್ನು ಹಲವು ಐಟಿ ದಿಗ್ಗಜ ಕಂಪನಿಗಳು ಉದ್ಯೋಗ ಕಡಿತ ಆರಂಭಿಸಿದೆ. ಇದರ ನಡುವೆ ಇದೀಗ ವಿಶ್ವದ ಅತೀ ದೊಡ್ಡ ಲಾಜಿಸ್ಟಿಕ್ ಕಂಪನಿ ಡಿಹೆಚ್ಎಲ್ ಉದ್ಯೋಗ ಕಡಿತ ಆರಂಭಿಸಿದೆ. ಡಿಹೆಚ್ಎಲ್ ವಾರ್ಷಿಕ ಆದಾಯ ಶೇಕಡಾ 7.2ರಷ್ಟು ಕುಸಿತ ಕಂಡಿದೆ. ಇದರ ಪರಿಣಾಮ ಇದೀಗ ಉದ್ಯೋಗ ಕಡಿತಕ್ಕೆ ಮುಂದಾಗಿದೆ.

ಡಿಹೆಚ್ಎಲ್ ಇದೀಗ ಬರೋಬ್ಬರಿ 8000 ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ಮೂಲಕ 2027ರ ವೇಳೆ 1 ಬಿಲಿಯನ್ ಯೋರೋಸ್ ಉಳಿಸಲು ಮುಂದಾಗಿದೆ. ಇಷ್ಟೇ ಅಲ್ಲ ಭಾರಿ ಕುಸಿತ ಕಂಡಿರುವ ಆದಾಯವನ್ನು ಸರಿದೂಗಿಸುವ ಪ್ರಯತ್ನದಲ್ಲಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಡಿಹೆಚ್ಎಲ್ ಲಾಜಿಸ್ಟಿಕ್ ಸರ್ವೀಸ್ ಲಭ್ಯವಿದೆ. ಇದೀಗ ಉದ್ಯೋಗ ಕಡಿತ ಘೋಷಣೆ ಆತಂಕ ಹೆಚ್ಚಿಸಿದೆ. 220 ದೇಶಗಳಲ್ಲಿ ಡಿಹೆಚ್ಎಲ್ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಒಟ್ಟು 602,000 ಉದ್ಯೋಗಿಗಳು ಡಿಹೆಚ್ಎಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಜರ್ಮನಿ ಒಂದರಲ್ಲೇ 190,000 ಉದ್ಯೋಗಿಗಳನ್ನು ಹೊಂದಿದೆ.

ಸಾವಿರಾರು ಕೋಟಿ ರೂ ನಷ್ಟದ ಬೆನ್ನಲ್ಲೇ ಶಾಕ್ ಕೊಟ್ಟ ಮುಕೇಶ್ ಅಂಬಾನಿ, ತಟ್ಟಲಿದೆ ಬಿಸಿ

ಸದ್ಯ ಈ ಉದ್ಯೋಗ ಕಡಿತ ಜರ್ಮನಿಯ ಪೋಸ್ಟ್ ಆ್ಯಂಡ್ ಪಾರ್ಸೆಲ್ ವಿಭಾಗದಲ್ಲಿ ಮಾಡಲಾಗುತ್ತಿದೆ. ಒತ್ತು ಉದ್ಯೋಗಿಗಳ ಪೈಕಿ ಶೇಕಡಾ 1 ರಷ್ಟು ಉದ್ಯೋದ ಕಡಿತ ಮಾಡಲಾಗುತ್ತಿದೆ. ಡಿಹೆಚ್ಎಲ್ 2026ರ ವೇಳೆಗೆ 360 ಮಿಲಿಯನ್ ಯೂರೋ ಹೊರೆಯಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ. ಇವೆಲ್ಲನ್ನು ಸರಿದೂಗಿಸಲು ಹಾಗೂ ಆದಾಯ ಕುಸಿತ ತಡೆಯಲು ಇದೀಗ ಉದ್ಯೋಗ ಕಡಿತವಲ್ಲದೆ ಬೇರೆ ಮಾರ್ಗವಿಲ್ಲ ಎಂದಿದೆ.

ಉದ್ಯೋಗ ಕಡಿತ ಭೂತ ಮತ್ತ ವಕ್ಕರಿಸುತ್ತಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಉದ್ಯೋಗ ಕಡಿತ ನಡೆಯುತ್ತಿದೆ. ಪ್ರತಿಷ್ಠಿಕ ಕಂಪನಿಗಳೇ ಉದ್ಯೋಗ ಕಡಿತ ಮಾಡುತ್ತಿದೆ. ಕೆಲ ಐಟಿ ಕಂಪನಿಗಳ ಉದ್ಯೋಗ ಕಡಿತ ವಿವಾದಕ್ಕೂ ಕಾರಣವಾಗಿದೆ. 2025 ಫೆಬ್ರವರಿ ಅತ್ಯಂತ ಕೆಟ್ಟ ತಿಂಗಳುಗಳಲ್ಲಿ ಒಂದಾಗಿದೆ. ಕಳೆದ ತಿಂಗಳು ಮೆಟಾ, ಎಚ್‌ಪಿ, ವರ್ಕ್‌ಡೇ ಮುಂತಾದ ಟೆಕ್ ದೈತ್ಯ ಕಂಪನಿಗಳು ಅನೇಕ ಉದ್ಯೋಗಿಗಳನ್ನು ವಜಾ ಮಾಡಿವೆ.

ಫೆಬ್ರವರಿಯಲ್ಲಿ 46 ಕಂಪನಿಗಳು 15,994 ಉದ್ಯೋಗಿಗಳನ್ನು ವಜಾ ಮಾಡಿವೆ ಎಂದು ವರದಿಯಾಗಿದೆ. ಜನವರಿಯೊಂದಿಗೆ ಹೋಲಿಸಿದರೆ, ಫೆಬ್ರವರಿಯಲ್ಲಿ ವಜಾಗೊಳಿಸುವಿಕೆ ಹೆಚ್ಚಾಗಿದೆ. ಜನವರಿಯಲ್ಲಿ 25 ಕಂಪನಿಗಳಲ್ಲಿ 5641 ಉದ್ಯೋಗಿಗಳು ಕೆಲಸ ಕಳೆದುಕೊಂಡರು.ಮತ್ತೊಂದು ಟೆಕ್ ದೈತ್ಯ ಎಚ್‌ಪಿ ಫೆಬ್ರವರಿ 27 ರಂದು, ನಡೆಯುತ್ತಿರುವ ಪುನರ್ರಚನೆ ಯೋಜನೆಯ ಭಾಗವಾಗಿ 2,000 ಜನರನ್ನು ಕಡಿತಗೊಳಿಸುವುದಾಗಿ ಘೋಷಿಸಿತು. ಪ್ರಸ್ತುತ ಎಚ್‌ಪಿ 59 ದೇಶಗಳಲ್ಲಿ ಸುಮಾರು 58,000 ಉದ್ಯೋಗಿಗಳನ್ನು ಹೊಂದಿದೆ. ಈ ಕಡಿತದಿಂದ 2025 ರ ಅಕ್ಟೋಬರ್ ಅಂತ್ಯದ ವೇಳೆಗೆ ಸುಮಾರು 300 ಮಿಲಿಯನ್ ಡಾಲರ್ ಉಳಿತಾಯವಾಗಬಹುದು ಎಂದು ಎಚ್‌ಪಿ ನಿರೀಕ್ಷಿಸುತ್ತದೆ. 

AI ಮೇಲೆ ಗೂಗಲ್ ಭಾರಿ ಹೂಡಿಕೆ, ಉದ್ಯೋಗಿಗಳ ಭವಿಷ್ಯಕ್ಕಿದೆಯಾ ಆತಂಕ?