ಜನರಲ್ ಮೋಟಸರ್ಸ್ ಗೆ ಭಾರತೀಯ ಸಂಜಾತೆ ಸಿಎಫ್‌ಓಚೆನೈ ಮೂಲದ ದಿವ್ಯಾ ಸೂಯರ್ಯದೇವರ ಸಿಎಫ್‌ಓ ಆಗಿ ನೇಮಕಆಟೋಮೊಬೈಲ್ ಕ್ಷೇತ್ರದ ಮೊದಲ ಮಹಿಳಾ ಸಿಎಫ್‌ಓ 

ಬೆಂಗಳೂರು(ಜೂ.15): ಅಮೆರಿಕದ ಪ್ರಸಿದ್ಧ 'ಜನರಲ್ ಮೋಟಾರ್ಸ್‌'ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಇಂಡೋ- ಅಮೆರಿಕನ್ ಮಹಿಳೆ ದಿವ್ಯಾ ಸೂರ್ಯದೇವರ ಆಯ್ಕೆಯಾಗಿದ್ದಾರೆ. ಪ್ರಸಕ್ತ ಕಂಪನಿಯ ಕಾರ್ಪೋರೇಟ್‌ ಫೈನಾನ್ಸ್‌ನ ಉಪಾಧ್ಯಕ್ಷರಾಗಿ ದಿವ್ಯಾ ಕಾರ್ಯನಿರ್ವಹಿಸುತ್ತಿದ್ದರು. 

ಇನ್ನು ಕಲವೇ ದಿನಗಳಲ್ಲಿ ಜನರಲ್‌ ಮೋಟಾರ್ಸ್‌ ಎಸ್‌&ಪಿ ಯ ಟಾಪ್‌ 500 ಕಂಪನಿಯಲ್ಲಿ ಸ್ಥಾನ ಪಡೆದುಕೊಳ್ಳಲಿದೆ. ಹರ್ಷೆ & ಅಮೆರಿಕನ್‌ ವಾಟರ್‌ ವರ್ಕ್ಸ್‌‌ ಕಂಪನಿಯಲ್ಲೂ ಮಹಿಳಾ ಸಿಇಒ ಹಾಗೂ ಸಿಎಫ್‌ಒಗಳಿದ್ದು, ಈ ಕಂಪನಿಗಳು ಟಾಪ್‌ 500 ರಲ್ಲಿ ಸ್ಥಾನ ಪಡೆದುಕೊಳ್ಳಲಿವೆ. 

ಚೆನ್ನೈನ ಮೂಲದವರಾದ ದಿವ್ಯಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿ, ನಂತರ ತಮ್ಮ 22ನೇ ವರ್ಷದಲ್ಲಿ ಅಮೆರಿಕಾಕ್ಕೆ ತೆರಳಿ ಅಲ್ಲಿನ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿಯನ್ನು ಪಡೆದಿದ್ದಾರೆ. ದಿವ್ಯಾ ಚಾರ್ಟರ್ಡ್ ಫೈನಾನ್ಷಿಯಲ್ ಅನಲಿಸ್ಟ್ ಮತ್ತು ಅಕೌಂಟೆಂಟ್ ಆಗಿಯೂ ಕಾರ್ಯನಿರ್ವಹಣೆ ಮಾಡಿದ ಅನುಭವ ಹೊಂದಿದ್ದಾರೆ.