ನವದೆಹಲಿ (ನ. 12): ಮುಂಬೈ ಮೂಲದ ಪಂಜಾಬ್ ಹಾಗೂ ಮಹಾರಾಷ್ಟ್ರ ಸಹ ಕಾರಿ ಬ್ಯಾಂಕ್ (ಪಿಎಂಸಿ)ನ ಆರ್ಥಿಕ ಬಿಕ್ಕಟ್ಟಿನಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಯಾವುದೇ ಬ್ಯಾಂಕುಗಳಲ್ಲಿ ಗ್ರಾಹಕರು ಇಡುವ ಹಣದ ಮೇಲಿನ ವಿಮಾ ಭದ್ರತೆಯನ್ನು ಹಾಲಿ 1 ಲಕ್ಷ ರು.ನಿಂದ ಕನಿಷ್ಠ 2 ಲಕ್ಷ ರು.ಗೆ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ.

ಗಮನಿಸಿ.. ನವೆಂಬರ್ 30 ರಿಂದ LIC ಈ ಪಾಲಿಸಿಗಳು ಬಂದ್!

ಯಾವುದೇ ಬ್ಯಾಂಕ್ ದಿವಾಳಿಯಾದರೆ, ಅದರಲ್ಲಿ ಗ್ರಾಹಕ ಎಷ್ಟೇ ಹಣ ಇಟ್ಟಿದ್ದರೂ ಆತನಿಗೆ ಖಚಿತವಾಗಿ ಸಿಗುವುದು ಗರಿಷ್ಠ 1 ಲಕ್ಷ ರು. ಮಾತ್ರ. ಇದಕ್ಕೆ ಠೇವಣಿ ವಿಮೆ ಹಾಗೂ ಸಾಲ ಖಾತ್ರಿ ನಿಗಮ (ಡಿಐಸಿಜಿಸಿ) ರಕ್ಷಣೆಯನ್ನು ಒದಗಿಸಿರುತ್ತದೆ. ಈ ಮೊದಲು ಠೇವಣಿ ಮೇಲೆ 30 ಸಾವಿರ ರು. ವಿಮೆ ಇತ್ತು.

2020 ರಲ್ಲಿ ಸಂಬಳ ಶೇ. 10 ರಷ್ಟು ಏರಿಕೆ: ಮೋದಿ ಪ್ಲಾನ್ ತಿಳಿಯಬೇಕೇ?

ಅದನ್ನು 1993 ರಲ್ಲಿ 1 ಲಕ್ಷ ರು.ಗೆ ಹೆಚ್ಚಳ ಮಾಡಲಾಗಿತ್ತು. ಇದೀಗ 1 ಲಕ್ಷ ರು. ವಿಮೆಯನ್ನು ಕನಿಷ್ಠ 2 ಲಕ್ಷ ರು.ಗೆ ಹೆಚ್ಚಳ ಮಾಡಲು ಸರ್ಕಾರ ಚಿಂತನೆಯಲ್ಲಿದೆ ಎಂದು ಆಂಗ್ಲದೈನಿ ಕವೊಂದು ವರದಿ ಮಾಡಿದೆ. ಉಳಿತಾಯ ಖಾತೆಯಲ್ಲಿನ ಹಣ, ನಿಶ್ಚಿತ ಠೇವಣಿ, ಚಾಲ್ತಿ ಹಾಗೂ ಆರ್‌ಡಿ ಖಾತೆಯಲ್ಲಿನ ಮೊತ್ತಕ್ಕೆ ವಿಮೆ ಅನ್ವಯವಾಗುತ್ತದೆ.