Asianet Suvarna News Asianet Suvarna News

ಆಧಾರ್‌ ಸಂಖ್ಯೆ ಬದಲಾವಣೆ ಸಾಧ್ಯವೇ?: ಕೇಂದ್ರಕ್ಕೆ ಕೋರ್ಟ್‌ ಪ್ರಶ್ನೆ!

* ಹಾಲಿ ಆಧಾರ್‌ ಸಂಖ್ಯೆ ಅಕ್ರಮ ಬಳಕೆ ಆಗಿದೆ

 * ಆಧಾರ್‌ ಸಂಖ್ಯೆ ಬದಲಾವಣೆ ಸಾಧ್ಯವೇ?: ಕೇಂದ್ರಕ್ಕೆ ಕೋರ್ಟ್‌ ಪ್ರಶ್ನೆ

* ಹೊಸ ಆಧಾರ್‌ ಸಂಖ್ಯೆ ನೀಡಬೇಕು

* ಉದ್ಯಮಿಯೊಬ್ಬರಿಂದ ಅರ್ಜಿ ಸಲ್ಲಿಕೆ

* ಇದಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದ ಕೋರ್ಟ್

Delhi High Court seeks response from Centre UIDAI on petition seeking new number for existing Aadhaar holder pod
Author
Bangalore, First Published Jul 14, 2021, 8:28 AM IST

ನವದೆಹಲಿ(ಜು.14): ಈಗಾಗಲೇ ಆಧಾರ್‌ ಪಡೆದಿರುವ ನಾಗರಿಕರು, ಆಧಾರ್‌ ಸಂಖ್ಯೆಯನ್ನು ಬದಲಾಯಿಸಿ ಹೊಸ ಆಧಾರ್‌ ಪಡೆಯಲು ಅವಕಾಶ ನೀಡಬೇಕು ಎಂದು ದಿಲ್ಲಿ ಹೈಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಆಧಾರ್‌ ಪ್ರಾಧಿಕಾರದಿಂದ ಹೈಕೋರ್ಟ್‌ ಪ್ರತಿಕ್ರಿಯೆ ಬಯಸಿ ನೋಟಿಸ್‌ ಜಾರಿ ಮಾಡಿದೆ.

ಉದ್ಯಮಿ ರಾಜನ್‌ ಅರೋರಾ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ‘ನನ್ನ ಆಧಾರ್‌ ಸಂಖ್ಯೆಯು ನನ್ನ ಅನುಮತಿ ಇಲ್ಲದೇ ವಿದೇಶೀ ಕಂಪನಿಗಳ ಜತೆ ಅಕ್ರಮವಾಗಿ ಸಂಯೋಜಿತವಾಗಿದೆ. ಇದರಿಂದಾಗಿ ನನ್ನ ಗುರುತು, ಭದ್ರತೆ, ದತ್ತಾಂಶಗಳಿಗೆ ಅಪಾಯ ಎದುರಾಗಿದ್ದು, ಆಧಾರ್‌ ಸಂಖ್ಯೆಯನ್ನು ಬದಲಾಯಿಸಿ, ಹೊಸ ಆಧಾರ್‌ ಸಂಖ್ಯೆ ಪಡೆದುಕೊಳ್ಳಲು ಅವಕಾಶ ನೀಡುವಂತೆ ಆದೇಶಿಸಬೇಕು. ಖಾಸಗಿತನದ ಭದ್ರತೆಗೆ ಧಕ್ಕೆ ಬರಕೂಡದು ಎಂದು ಸರ್ಕಾರಕ್ಕೆ ಆದೇಶಿಸಬೇಕು’ ಎಂದು ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಆಧಾರ್‌ ಪ್ರಾಧಿಕಾರದ ವಕೀಲರು, ‘ಈಗಿನ ಮಟ್ಟಿಗೆ ವ್ಯಕ್ತಿಯೊಬ್ಬರಿಗೆ ಒಮ್ಮೆ ಆಧಾರ್‌ ಸಂಖ್ಯೆ ನೀಡಿದರೆ ಅದು ಜೀವನಪರ‍್ಯಂತ ಅನ್ವಯಿಸುತ್ತದೆ. ಮತ್ತೆ ಬದಲಾವಣೆಗೆ ನಿಯಮದಲ್ಲಿ ಅವಕಾಶವಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್‌. ‘ಹಾಗಿದ್ದರೆ ಈ ನಿಯಮ ಬದಲಾಗಬೇಕಿದೆ’ ಎಂದು ಅಭಿಪ್ರಾಯಪಟ್ಟನ್ಯಾಯಪೀಠ, ಈ ಸಂಬಂಧ ಉತ್ತರ ನೀಡುವಂತೆ ಕೇಂದ್ರ ಹಾಗೂ ಆಧಾರ್‌ ಪ್ರಾಧಿಕಾರಕ್ಕೆ ಸೂಚಿಸಿ, ಸೆ.9ರಂದು ವಿಚಾರಣೆ ಮುಂದೂಡಿತು.

Follow Us:
Download App:
  • android
  • ios