Asianet Suvarna News Asianet Suvarna News

ಟ್ರಕ್ ನಲ್ಲಿ ಸೌತ್ ಇಂಡಿಯನ್ ಫುಡ್ ಮಾರಿ ಕೋಟಿ ಗಳಿಸ್ತಿರುವ ದಂಪತಿ

ಅನೇಕ ಬಾರಿ ಕೆಲಸ ನೀಡದ ನೆಮ್ಮದಿಯನ್ನು ವ್ಯಾಪಾರ ನೀಡುತ್ತದೆ. ಜನರಿಗೆ ಅಗತ್ಯವಿರುವ ವಸ್ತುವನ್ನು ನೀಡುವ ಜೊತೆಗೆ ಉದ್ಯಮದಲ್ಲಿ ಯಶಸ್ವಿಯಾಗೋದು ಅನೇಕರ ಕನಸು. ಇದನ್ನು ಈ ದಂಪತಿ ಮಾಡಿ ತೋರಿಸಿದ್ದಾರೆ.
 

Delhi Couple Food Truck Business How To Earn Crores India roo
Author
First Published Dec 2, 2023, 1:09 PM IST

ವಿದೇಶದಲ್ಲಿ ಒಳ್ಳೆ ಕೆಲಸದಲ್ಲಿದ್ದು, ಕೈತುಂಬ ಸಂಬಳ ಬರ್ತಿದ್ದರೆ ಕಷ್ಟಪಡೋಕೆ ಯಾರು ಇಷ್ಟಪಡ್ತಾರೆ. ಒಳ್ಳೆ ನೌಕರಿ ಬಿಟ್ಟು ಭಾರತಕ್ಕೆ ಬರೋದು ಬಹಳ ಅಪರೂಪ. ಬಂದ್ಮೇಲೂ ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡುವ ಬದಲು ಬ್ಯುಸಿನೆಸ್ ಅದ್ರಲ್ಲೂ ಫುಡ್ ಬ್ಯುಸಿನೆಸ್ ಶುರು ಮಾಡಿ, ಬೀದಿ ಬದಿಯಲ್ಲಿ ಆಹಾರ ಮಾರಾಟ ಮಾಡೋದು ಅಸಾಧ್ಯವಾದ ಕೆಲಸ. ಅದನ್ನು ಈ ಜೋಡಿ ಮಾಡಿ ತೋರಿಸಿದ್ದಾರೆ. ಜ್ಯೋತಿ ಗಣಪತಿ ಹಾಗೂ ಸತ್ಯ ಆಹಾರೋದ್ಯಮಕ್ಕೆ ಕಾಲಿಟ್ಟು ಅದ್ರಲ್ಲಿ ಯಶಸ್ವಿಯಾಗಿದ್ದಾರೆ. ವಾರ್ಷಿಕವಾಗಿ ಮೂರು ಕೋಟಿಗೂ ಹೆಚ್ಚು ರೂಪಾಯಿ ಸಂಪಾದನೆ ಮಾಡ್ತಿದ್ದಾರೆ.

ಜ್ಯೋತಿ ಗಣಪತಿ ಹಾಗೂ ಸತ್ಯ, ಹೊಟೇಲ್ (Hotel) ಅಥವಾ ರೆಸ್ಟೋರೆಂಟ್ ತೆರೆಯುವಲ್ಲಿ ಆಸಕ್ತಿ ಹೊಂದಿರಲಿಲ್ಲ. ಹೊಸ ವಿಧಾನದಲ್ಲಿ ಜನರಿಗೆ ಆಹಾರ (food) ತಲುಪಿಸುವುದು ಅವರ ಗುರಿಯಾಗಿತ್ತು. ಇದೇ ಕಾರಣಕ್ಕೆ ಫುಡ್ ಟ್ರಕ್ (Food Truck) ಮಾದರಿಯನ್ನು ಅಳವಡಿಸಿಕೊಂಡರು. ಅವರ ಇನ್ನೊಂದು ವಿಶೇಷವೆಂದ್ರೆ ದಕ್ಷಿಣ ಭಾರತದ ಆಹಾರವನ್ನು ಅವರು ದೆಹಲಿಯ ಜನರಿಗೆ ನೀಡ್ತಿದ್ದಾರೆ. ಈಗ ಅವರು ಮೂರಕ್ಕಿಂತಲೂ ಹೆಚ್ಚು ಟ್ರಕ್ ಗಳನ್ನು ಹೊಂದಿದ್ದು, ಅದ್ರಲ್ಲಿ ಆಹಾರ ತಯಾರಿಸುತ್ತಾರೆ. ಇಪ್ಪತ್ತಕ್ಕಿಂತಲೂ ಹೆಚ್ಚು ಜನರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ.  

ಆಟದಲ್ಲಿ ಮಾತ್ರವಲ್ಲ ಇನ್ವೆಸ್ಟ್‌ಮೆಂಟ್‌ನಲ್ಲೂ ಕಿಂಗ್‌ ನಮ್ಮ ಕೊಹ್ಲಿ!

ಸತ್ಯ  ಎಂಜಿನಿಯರಿಂಗ್ ನಂತರ ಮಾಸ್ಟರ್ಸ್ ಮಾಡಲು ಯುಎಸ್‌ಗೆ ಹೋಗಿದ್ದರು. ವಿದ್ಯಾಭ್ಯಾಸಕ್ಕೆಂದು ಒಂದಷ್ಟು ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಪಾರ್ಟ್‌ಟೈಮ್‌ ಕೆಲಸ ಮಾಡ್ತಿದ್ದ ಅವರು, ಅಮೇರಿಕಾದಲ್ಲಿ  ಎಲ್ಲಾ ಕೆಲಸಗಳನ್ನು ಅವರೇ ಮಾಡಿಕೊಳ್ತಿದ್ದರು. ಆಗ ಜೀವನವೇನು ಎಂಬುದು ಅವರಿಗೆ ಅರ್ಥವಾಗಿತ್ತು. ಹಣದ ಮೌಲ್ಯಗೊತ್ತಾಗಿತ್ತು.. ವಿದ್ಯಾಭ್ಯಾಸ ಮುಗಿಸಿ  ಇ-ಕಾಮರ್ಸ್ ವಲಯದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದ ಸತ್ಯ 2008 ರಲ್ಲಿ ಜ್ಯೋತಿಯವರನ್ನು ವಿವಾಹವಾದ್ರು. ಮದುವೆಯ ನಂತರ ಭಾರತಕ್ಕೆ ವಾಪಸ್ ಆದರು. ಜ್ಯೋತಿ ಅವರ ತಂದೆ ಉದ್ಯಮಿಯಾಗಿದ್ದು, ಲಾಜಿಸ್ಟಿಕ್ಸ್ ವಲಯದಲ್ಲಿ ಕೆಲಸ ಮಾಡುತ್ತಿದ್ದರಿಂದ ಜ್ಯೋತಿ ಅವರಿಗೆ ಸಾರಿಗೆ, ಬಸ್ ಮತ್ತು ಟ್ರಕ್‌ಗಳ ಉತ್ತಮ ಮಾಹಿತಿ ಇತ್ತು. ಭಾರತಕ್ಕೆ ಬಂದ ನಂತರ ಜ್ಯೋತಿ ಕೆಲಸ ಮಾಡುತ್ತಿದ್ದ ಕಂಪನಿಯ ಕಚೇರಿ ಬಳಿ  ಯಾವುದೇ ಆಹಾರದ ಅಂಗಡಿಗಳು ಇರಲಿಲ್ಲ. ದಕ್ಷಿಣ ಭಾರತದ ಆಹಾರ ಸಿಗ್ತಾನೆ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಜ್ಯೋತಿ ಹಾಗೂ ಸತ್ಯ ಅದ್ರ ಮೇಲೆ ಸಾಕಷ್ಟು ಅಧ್ಯಯನ ಮಾಡಿದ್ರು. ನಂತ್ರ ತಮ್ಮದೆ ಆದ ಆಹಾರ ಟ್ರಕ್ ಅನ್ನು ಪ್ರಾರಂಭಿಸಿದ್ರು. 

ಬ್ಯೂಟಿ ವಿತ್‌ ಬ್ರೈನ್‌, 16ನೇ ವಯಸ್ಸಿನಲ್ಲಿ ಬಿಸಿನೆಸ್ ಆರಂಭಿಸಿ 1000 ಕೋಟಿಯ ಉದ್ಯಮ ಕಟ್ಟಿದ ಚೆಲುವೆ

2012 ರಲ್ಲಿ ಅವರ ಮೊದಲ ಆಹಾರ ಟ್ರಕ್ ಶುರುವಾಗಿತ್ತು.  ಸೆಕೆಂಡ್ ಹ್ಯಾಂಡ್ ಟ್ರಕ್ ಖರೀದಿಸಿ, ಅದರ ಒಳಾಂಗಣ ಬದಲಿಸಿದ್ದರು. ಓಖ್ಲಾದಲ್ಲಿಯೇ ಆಹಾರ ಟ್ರಕ್  ಸ್ಥಾಪಿಸಲಾಗಿತ್ತು. ಅದರಲ್ಲಿ ದಕ್ಷಿಣ ಭಾರತದ ಆಹಾರ ಮಾತ್ರ ಸಿಗ್ತಾಯಿತ್ತು. ಮೊದಲ ದಿನದಿಂದ ವ್ಯಾಪಾರ ಚೆನ್ನಾಗಿ ನಡೆಯತೊಡಗಿತ್ತು. ಆದ್ರೆ ಎರಡು ತಿಂಗಳು ಚೆನ್ನಾಗಿ ನಡೆದ ವ್ಯಾಪಾರ ಇದ್ದಕ್ಕಿದ್ದಂತೆ ಕಡಿಮೆಯಾಯ್ತು.   

ಕೆಲಸ ಬಿಟ್ಟಿದ್ದ ಜ್ಯೋತಿ, ವ್ಯಾಪಾರದಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡರು. ಈ ಮಧ್ಯೆ ಗಣಪತಿ ಅವರ ಮಾರ್ಗದರ್ಶನದ ಪ್ರಕಾರ, ತಮ್ಮ ಬಳಿ ಹೋಟೆಲ್ ಅಥವಾ ರೆಸ್ಟೋರೆಂಟ್ ಇಲ್ಲ. ಇದು  ಆಹಾರದ ಟ್ರಕ್. ಗ್ರಾಹಕರು ನಮ್ಮ ಬಳಿಗೆ ಬರದಿದ್ದರೆ ನಾವೇ ಗ್ರಾಹಕರ ಬಳಿ ಹೋಗಬೇಕು ಎಂಬುದನ್ನು ಅರಿತ ಇವರು ಈ ರೂಲ್ಸ್ ಫಾಲೋ ಮಾಡಲು ಶುರು ಮಾಡಿದ್ರು. ಭಾನುವಾರ ಫುಡ್ ಟ್ರಕ್‌ನೊಂದಿಗೆ ಅವರ ಅಪಾರ್ಟ್ಮೆಂಟ್ ತಲುಪಿದ್ರು. ಮೂರು ಗಂಟೆಗಳಲ್ಲಿ ಎಲ್ಲ ಆಹಾರ ಖಾಲಿಯಾಗಿತ್ತು. ಇದ್ರ ನಂತ್ರ ಜ್ಯೋತಿ ಹಾಗೂ ಸತ್ಯ ತಿರುಗಿ ನೋಡ್ಲಿಲ್ಲ. ಅವರ ಟ್ರಕ್ ನಲ್ಲಿ ರವಾ ದೋಸೆ, ಟೊಮೇಟೊ ಈರುಳ್ಳಿ ಉತ್ತಪಂ, ಮದ್ದೂರ್ ವಡಾ, ಫಿಲ್ಟರ್ ಕಾಫಿ, ಮಲಬಾರ್ ಪರಾಠ ಮುಂತಾದ ಪದಾರ್ಥಗಳು ಸಿಗುತ್ತವೆ.  ಇದಲ್ಲದೆ ಇವರು ಸಣ್ಣಪುಟ್ಟ ಸಮಾರಂಭಗಳಿಗೆ ಫುಡ್ ಆರ್ಡರ್ ತೆಗೆದುಕೊಂಡು ಆ ಸೇವೆಯನ್ನೂ ನೀಡ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಆನ್ಲೈನ್ ಆರ್ಡರ್ ತೆಗೆದುಕೊಳ್ಳಲು ಇವರು ಶುರು ಮಾಡಿದ್ದರು.    
 

Latest Videos
Follow Us:
Download App:
  • android
  • ios