ವಿಚ್ಚೇದನ ಗಲಾಟೆ ಉದ್ಯಮದಲ್ಲೂ ಕಲಹ: ಸಾವಿಗೆ ಶರಣಾದ ಬ್ಯುಸಿನೆಸ್‌ ಮ್ಯಾನ್

ದೆಹಲಿಯಲ್ಲಿ ಉದ್ಯಮಿ ಪುನೀತ್ ಖುರಾನಾ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆತ್ಮ*ಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ. ಪತ್ನಿ ಜೊತೆಗಿನ ದಾಂಪತ್ಯ ಕಲಹ ಮತ್ತು ವ್ಯವಹಾರದ ವಿಚಾರದಲ್ಲಿನ ಮನಸ್ತಾಪ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.

Delhi businessman Punnet Khurana ends his life due to divorce dispute

ನವದೆಹಲಿ: ದೆಹಲಿಯ ಉದ್ಯಮಿಯೊಬ್ಬರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ದೆಹಲಿಯ ಖ್ಯಾತ ಕೆಫೆಯೊಂದರ ಸಹ ಸಂಸ್ಥಾಪಕರಾಗಿರುವ ಪುನೀತ್ ಖುರಾನಾ ಅವರೇ ಸಾವಿಗೆ ಶರಣಾದ ಉದ್ಯಮಿ. ದೆಹಲಿಯ ಕಲ್ಯಾಣ್ ವಿಹಾರ್ ಪ್ರದೇಶದ ಮಾಡೆಲ್ ಟೌನ್‌ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಖುರಾನಾ ಹಾಗೂ ಅವರ ಪತ್ನಿ ಮನಿಕಾ ಜಗದೀಶ್ ಪಹ್ವಾ ಅವರ ನಡುವೆ ದಾಂಪತ್ಯ ಕಲಹವಿತ್ತು. ಹೀಗಾಗಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿತ್ತು. ಇಬ್ಬರು ನಗರದಲ್ಲಿದ್ದ ತಮ್ಮ ವುಡ್‌ಬಾಕ್ಸ್ ಕೆಫೆಯ ಮಾಲೀಕತ್ವ ಹೊಂದಿದ್ದು, ವ್ಯವಹಾರದ ವಿಚಾರಕ್ಕೆ ಸಂಬಂಧಿಸಿದಂತೆಯೇ ಇಬ್ಬರ ಮಧ್ಯೆ ಮನಸ್ತಾಪ ಏರ್ಪಟ್ಟಿತ್ತು.  ಖುರಾನಾ ಕುಟುಂಬದ ಪ್ರಕಾರ ಆತನಿಗೆ ಪತ್ನಿ ಮೇಲೆ ಅಸಮಾಧಾನವಿತ್ತು. ಇವರಿಬ್ಬರು 2016ರಲ್ಲಿ ಮದುವೆಯಾಗಿದ್ದರು. 

ಈ ಮಧ್ಯೆ ಆಂಗ್ಲ ಮಾಧ್ಯಮವೊಂದಕ್ಕೆ ಇಬ್ಬರು ನಡುವಿನ 16 ನಿಮಿಷಗಳ ಮಾತುಕತೆಯ ಆಡಿಯೋ ಲಭ್ಯವಾಗಿದ್ದು, ಅದರ ಪ್ರಕಾರ, ಪುನೀತ್ ಖುರಾನಾ ಹಾಗೂ ಪತ್ನಿ ಮನೀಕಾ ಜಗದೀಶ್ ಉದ್ಯಮದ ಆಸ್ತಿಗೆ ಸಂಬಂಧಿಸಿದಂತೆ ಕಿತ್ತಾಡಿಕೊಂಡಿದ್ದರು. ನಾವಿಬ್ಬರು ವಿಚ್ಚೇದನ ಪಡೆದುಕೊಳ್ಳುತ್ತೇವೆ. ಆದರೆ ನಾನು ವಿಚ್ಚೇದನ ನಂತರವೂ ವ್ಯವಹಾರದ ಪಾಲುದಾರನಾಗಿರುತ್ತೇನೆ. ನೀವು ನನ್ನ ಬಾಕಿ ಸಾಲವನ್ನು ಪೂರ್ಣಗೊಳಿಸಬೇಕು ಎಂದು ಖುರಾನಾ ಪತ್ನಿ ಮನಿಕಾ ಆಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ಪೊಲೀಸರು ಖುರಾನಾ ಪತ್ನಿಯ ಫೋನನ್ನು ವಶಕ್ಕೆ ಪಡೆದಿದ್ದು, ಆಕೆಯನ್ನು ವಿಚಾರಣೆಗೆ ಕರೆದಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದ ಅತುಲ್ ಸುಭಾಷ್ ಪತ್ನಿಯ ಕಿರುಕುಳಕ್ಕೆ ಬೇಸೆತ್ತು ಸಾವಿಗೆ ಶರಣಾಗಿದ್ದರು. ಸಾವಿಗೂ ಮೊದಲು ಅತುಲ್ ಸುಭಾಷ್ ಅವರು 24 ಪುಟಗಳ ಡೆತ್‌ನೋಟನ್ನು ಬರೆದಿದ್ದು, ಅತುಲ್ ಸುಭಾಷ್ ಸಾವು ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದಲ್ಲದೇ ಅನೇಕರು ಏಕಪಕ್ಷೀಯವಾಗಿರುವ ಕೌಟುಂಬಿಕ ವಿವಾಹ ಕಾಯ್ದೆಯ ಬಗ್ಗೆ ಚರ್ಚೆ ನಡೆಸುವಂತೆ ಮಾಡಿತ್ತು. ಅತುಲ್ ಸುಭಾಷ್ ಸಾವಿನ ನಂತರ ಅವರ ಪತ್ನಿ  ನಿಖಿತಾ ಸಿಂಘಾನಿಯಾ ಆಕೆಯ ತಾಯಿ ಹಾಗೂ ಸೋದರನನ್ನು ಪೊಲೀಸರು ಬಂಧಿಸಿ 14 ದಿನಗಳ ನ್ಯಾಯಾಂಗ ಕಸ್ಟಡಿಯಲ್ಲಿರಿಸಿದ್ದು, ತನಿಖೆ ಮುಂದುವರೆದಿದೆ. 

Latest Videos
Follow Us:
Download App:
  • android
  • ios