ಇಸ್ಲಾಮಾಬಾದ್(ನ.7)​: ಪಾಕಿಸ್ತಾನದ ಎಲ್ಲ ಪ್ರಮುಖ ಬ್ಯಾಂಕ್​ಗಳಿಗೆ ಸೇರಿದ ಡೇಟಾಗಳನ್ನು ಹ್ಯಾಕರ್​ಗಳು ಕಳವು ಮಾಡಿದ್ದಾರೆ.

ವಿಶ್ವದ ಮತ್ತೊಂದು ಪ್ರಮುಖ ಹ್ಯಾಕ್​ ಪ್ರಕರಣ ಇದಾಗಿದ್ದು, ಪಾಕಿಸ್ತಾನದ ಸೈಬರ್​ ಕ್ರೈಮ್​ ವಿಭಾಗಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಪಾಕಿಸ್ತಾನದ ಬಹುತೇಕ ಬ್ಯಾಂಕ್​ಗಳ ದತ್ತಾಂಶ ಕಳುವಾಗಿರುವ ಕುರಿತು ಮಾಹಿತಿ ಬಂದಿರುವುದಾಗಿ ಫೆಡರಲ್​ ಇನ್ವೆಸ್ಟಿಗೇಶನ್​ ಏಜೆನ್ಸಿಯ ನಿರ್ದೇಶಕ ಮೊಹ್ಮದ್  ಶೋಹಿಬ್​ ಒಪ್ಪಿಕೊಂಡಿದ್ದಾರೆ. 

ಇನ್ನು ಈ ಪ್ರಕರಣದಿಂದ ಪಾಕಿಸ್ತಾನದಲ್ಲಿ ಸೈಬರ್​ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ಬಹಿರಂಗಗೊಳಿಸಿದ್ದು, ಇಮ್ರಾನ್ ಖಾನ್ ಸರ್ಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿದೆ.

ಆದರೆ ಪಾಕಿಸ್ತಾನದ ಪ್ರಮುಖ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಈ ವರದಿಯನ್ನು ಅಲ್ಲಗಳೆದಿದ್ದು, ತನ್ನ ಬ್ಯಾಂಕ್‌ನ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಸ್ಪಷ್ಟೀಕರಣ ಬಿಡುಗಡೆ ಮಾಡಿರುವ ಎಸ್‌ಬಿಪಿ, ಬ್ಯಾಂಕ್‌ನ ಎಲ್ಲಾ ಮಾಹಿತಿ ಸುರಕ್ಷಿತವಾಗಿದೆ ಎಂದು ತಿಳಿಸಿದೆ.