street food vendor income: ಇಲ್ಲೊಬ್ಬರು ಬೀದಿ ಬದಿ ಮೊಮೊ ಮಾರುವ ಯುವಕನೋರ್ವ ದಿನಕ್ಕೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ. ವೀಡಿಯೋ ನೋಡಿದವರು ಅವರ ಆದಾಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ದಿನಕ್ಕೆ ಒಂದು ಲಕ್ಷ ರೂ ಸಂಪಾದಿಸುವ ಮೊಮೊ ಮಾರುವ ಯುವಕ
ಇವತ್ತು ತಿಂಗಳಾಂತ್ಯಕ್ಕೆ ಸಂಬಳ ಪಡೆಯುವ ಕಾಯಂ ನೌಕರಿ ಮಾಡುವ ಉದ್ಯೋಗಿಗಳಿಗಿಂತ ಹೆಚ್ಚು ಆದಾಯವನ್ನು ಸ್ವಂತವಾಗಿ ಉದ್ಯಮವನ್ನು ಇಟ್ಟುಕೊಂಡು ದುಡಿಮೆ ಮಾಡುವ ಬೀದಿ ಬದಿ ವ್ಯಾಪಾರಸ್ಥರು ಗಳಿಕೆ ಮಾಡುತ್ತಾರೆ. ಪಾನಿಪುರ ಗೋಲ್ಗಪ್ಪ ಮಾರುವವಂತಹ ಬೀದಿ ಬದಿ ವ್ಯಾಪಾರಸ್ಥರೇ ದಿನಕ್ಕೆ ಸಾವಿರಾರು ರೂಪಾಯಿ ಸಂಪಾದನೆ ಮಾಡುವ ಬಗ್ಗೆ ಹೇಳಿಕೊಂಡಿದ್ದು, ಈ ಹಿಂದೆ ವೈರಲ್ ಆಗಿತ್ತು. ಅದೇ ರೀತಿ ಇಲ್ಲೊಬ್ಬರು ಬೀದಿ ಬದಿ ಮೊಮೊ ಮಾರುವ ಯುವಕನೋರ್ವ ದಿನಕ್ಕೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ.
ಸಂಜೆ 5 ರಿಂದ 10 ಗಂಟೆಯವರೆಗೆ ಮಾತ್ರ ವ್ಯಾಪಾರ
cassiusclydepereira(Cassy Pereira) ಎಂಬ ಇನ್‌ಫ್ಲುಯೆನ್ಸರ್ ಒಬ್ಬರು ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಅವರು ರಸ್ತೆಬದಿ ಮೊಮೊ ಮಾರಾಟ ಮಾಡುತ್ತಿರುವವನಿಗೆ ಸಹಾಯ ಮಾಡುತ್ತಿರುವ ದೃಶ್ಯವಿದೆ. ಮೊಮೊ ಶಾಪ್ ಆರಂಭಿಸುವುದಕ್ಕೆ ಇದು ಸಮಯ ಎಂದು ಬರೆದು ಅವರು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಅವರು ಹೇಳುವಂತೆ ಇಬ್ಬರು ಸೇರಿ ಒಂದು ದಿನದಲ್ಲಿ 950 ಪ್ಲೇಟಗಳಷ್ಟು ಮೊಮೊಗಳನ್ನು ಮಾರಾಟ ಮಾಡಿದ್ದಾರೆ. ಒಂದು ಪ್ಲೇಟ್‌ಗೆ 110 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಹಾಗೂ ಆತ ಒಂದು ದಿನದಲ್ಲಿ 1,04,500 ರೂಪಾಯಿ ಸಂಪಾದನೆ ಮಾಡಿದ್ದಾರೆ. ಹಾಗೂ ಈ ಸ್ಟಾಲ್ ಕೇವಲ ಸಂಜೆ 5ರಿಂದ 10 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ ಎಂದು ಅವರು ಹೇಳಿದ್ದಾರೆ.
ನೆಟ್ಟಿಗರ ಕಾಮೆಂಟ್ ಏನು?
ಆದರೆ ಈ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವೀಡಿಯೋ ಬಗ್ಗೆ ಹಾಗೂ ಅವರ ಸಂಪಾದನೆಯ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ಅನೇಕರು ಇಷ್ಟೊಂದು ದುಬಾರಿ ಹಣ ನೀಡಿ ರಸ್ತೆಬದಿ ಯಾರು ಮೊಮೊ ತಿನ್ನುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬಹುತೇಕ ಎಲ್ಲರೂ ಕೂಡ ಕಾರ್ಪೋರೇಟ್ ಉದ್ಯೋಗಿಗಳಿಗಿಂತ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇವರ ಒಂದು ದಿನದ ಸಂಪಾದನೆಯನ್ನು ನಾನು ಇಡೀ ವರ್ಷ ದುಡಿದರು ಗಳಿಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು 8 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಲೆಕ್ಕಾಚಾರ ಹಾಕಿ ಇದು ಸಾಧ್ಯವಿಲ್ಲ ಎಂದ ನೆಟ್ಟಿಗರು:
ಒಬ್ಬರು ಇದು ದೊಡ್ಡ ಸುಳ್ಳು, ಒಂದು ಪ್ಲೇಟ್ ಮೊಮೊಗೆ 110 ರೂ ಕೊಡಲಾಗದು ಹಾಗೂ ಆತ 900 ಪ್ಲೇಟ್‌ಗೂ ಅಧಿಕ ಮೊಮೊ ಮಾರಾಟ ಮಾಡುವುದು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಪ್ರತಿಯೊಬ್ಬರು ಓರ್ವ ಬಿಕಾಂ ಪದವಿಧರನಿಗಿಂತಲೂ ಹೆಚ್ಚು ಸಂಪಾದನೆ ಮಾಡ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅವನು ಓರ್ವ ಕಸ್ಟಮರ್ ಜೊತೆ 1 ನಿಮಿಷ ಕಳೆದರು 900 ಪ್ಲೇಟ್ ಸರ್ವ್ ಮಾಡುವುದಕ್ಕೆ 900 ನಿಮಿಷ ಬೇಕು ಇದಕ್ಕೆ ಕನಿಷ್ಠ ಎಂದರು 15 ಗಂಟೆಗಳು ಬೇಕು. ಅದರಲ್ಲೂ ಆತ ಯಾವುದೇ ವಿರಾಮ ತೆಗೆದುಕೊಳ್ಳದೇ ಮಾಡಿದರಷ್ಟೇ ಇದು ಸಾಧ್ಯ. ಹೀಗಾಗಿ ಇದೊಂದು ದೊಡ್ಡ ಸುಳ್ಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಹಾಗೆಯೇ ಮತ್ತೊಬ್ಬರು ಆತ ನಿಜವಾಗಿಯೂ 1 ಗಂಟೆಯಲ್ಲಿ 118 ಪ್ಲೇಟ್ ಮೊಮೊಗಳನ್ನು ಮಾರುತ್ತಿದ್ದಾನಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಲೆಕ್ಕಾಚಾರ ಹಾಕಿದರೆ ಈ ವಿಚಾರ ಸುಳ್ಳು, ಒಂದು ಗಂಟೆಗೆ ಕೇವಲ 60 ನಿಮಿಷ ಮಾತ್ರವಿದೆ. 5 ಗಂಟೆ ಎಂದರೆ 300 ನಿಮಿಷ ಮಾತ್ರ. ಆದರೆ 300 ನಿಮಿಷದಲ್ಲಿ 900 ಪಲೇಟ್ ಮಾರಾಟ ಮಾಡ್ತಾನೆ ಅಂದ್ರೆ ಆತ ಪ್ರತಿ 20 ಸೆಕೆಂಡ್‌ಗೆ ಒಂದು ಪ್ಲೇಟ್ ಮಾರಬೇಕು. ಪ್ಲೇಟ್‌ಗಳ ಸಾಲನ್ನು ಹೊಂದಿದ್ದರೂ ಸಹ, ನೀವು 20 ಸೆಕೆಂಡುಗಳಲ್ಲಿ 5 ಗಂಟೆಗಳ ಕಾಲ ನಿರಂತರ ಮಾರಲು ಸಾಧ್ಯವಾಗುವುದಿಲ್ಲ. ಆದರಿಂದ ಇದೊಂದು ಸುಳ್ಳೇನಿಸುತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಸೀರೆಯ ವಿಚಾರಕ್ಕೆ ಜಗಳ: ಹಸೆಮಣೆ ಏರಬೇಕಾದ ವಧು ಮಸಣಕ್ಕೆ
ಇದನ್ನೂ ಓದಿ: ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿಯಾಗಿ ಬೆಂಕಿಗಾಹುತಿಯಾದ ಮೆಕ್ಕಾ ಯಾತ್ರಿಕರ ಬಸ್: 42 ಭಾರತೀಯ ಯಾತ್ರಿಕರ ಸಾವು
