ಕೇವಲ 11 ರೂಗೆ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 13, ಗ್ರಾಹಕರ ದಾರಿ ತಪ್ಪಿಸಿತಾ ಜಾಹೀರಾತು?
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಜಾಹೀರಾತು ಭಾರಿ ಹಂಗಾಮ ಸೃಷ್ಟಿಸಿದೆ. ಕಾರಣ ಫ್ಲಿಪ್‌ಕಾರ್ಟ್ ಪ್ರಕಟಿಸಿದ ಈ ಜಾಹಿರಾತಿನಲ್ಲಿ ಐಫೋನ್ 13 ಬೆಲೆ ಕೇವಲ 11 ರೂಪಾಯಿ.
ಬೆಂಗಳೂರು(ಸೆ.24) ಭಾರತದಲ್ಲಿ ಇ ಕಾಮರ್ಸ್ ದೈತ್ಯ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಪೈಪೋಟಿಗೆ ಬಿದ್ದು ಹಬ್ಬಗಳು, ವಿಶೇಷ ದಿನಗಳಲ್ಲಿ ವಿಶೇಷ ಮಾರಾಟ ಆಯೋಜಿಸುತ್ತದೆ. ಈ ವೇಳೆ ಭಾರಿ ರಿಯಾಯಿತಿ, ಕೊಡುಗೆ ಸೇರಿದಂತೆ ಹಲವು ಆಫರ್ ನೀಡುತ್ತದೆ. ಇದೀಗ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಆರಂಭಗೊಂಡಿದೆ. ಇದರ ಅಂಗವಾಗಿ ಫ್ಲಿಪ್‌ಕಾರ್ಟ್ ನೀಡಿದ ಜಾಹೀರಾತಿನಿಂದ ಗ್ರಾಹಕರು ಮುಗಿ ಬಿದ್ದಿದ್ದಾರೆ. ಕಾರಣ ಫ್ಲಿಪ್‌ಕಾರ್ಟ್ ತನ್ನ ಜಾಹೀರಾತಿನಲ್ಲಿ ಕೇವಲ 11 ರೂಪಾಯಿಗೆ ಐಫೋನ್ 13 ಎಂದಿದೆ. ಆದರೆ ಈ ಜಾಹೀರಾತು ಮೂಲಕ ಗ್ರಾಹಕರನ್ನು ತಪ್ಪುದಾರಿಗೆ ಎಳೆಯುತ್ತಿದೆ ಅನ್ನೋ ಆರೋಪಗಳು ಕೇಳಿಬಂದಿದೆ.
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಅಂಗವಾಗಿ ಸೆಪ್ಟೆಂಬರ್ 22ರ ರಾತ್ರಿ 11 ಗಂಟೆಗೆ ಐಫೋನ್ 13 ಖರೀದಿಸುವ ಗ್ರಾಹಕರಿಗೆ ಕೇವಲ 11 ರೂಪಾಯಿ ಫೋನ್ ಲಭ್ಯವಿದೆ ಎಂದು ಜಾಹೀರಾತು ನೀಡಿದೆ. ಗ್ರಾಹಕರು ಸೆಪ್ಟೆಂಬರ್ 22ರಂದು ರಾತ್ರಿ 11 ಗಂಟೆಗೆ ಭಾರಿ ಸಂಖ್ಯೆಯಲ್ಲಿ ಐಫೋನ್ 13 ಖರೀದಿಸಲು ಜನರು ಮುಂದಾಗಿದ್ದಾರೆ. ಆದರೆ ಕ್ಲಿಕ್ ಮಾಡಿದ ಬಹುತೇಕರಿಗೆ ಸೋಲ್ಡ್ ಔಟ್ ಮೇಸೇಜ್ ತೋರಿಸಿ ಮಂಗ ಮಾಡಿದೆ ಎಂದು ಹಲವು ಗ್ರಾಹಕರು ಆರೋಪಿಸಿದ್ದಾರೆ.
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್, ಸ್ಮಾರ್ಟ್‌ಫೋನ್ ಮೇಲೆ ಶೇ.50 ರಷ್ಟು ಡಿಸ್ಕೌಂಟ್!
ಇದು ಇ ಕಾಮರ್ಸ್ ನಡೆಸಿದ ಮಾರ್ಕೆಂಟಿಂಗ್ ಗಿಮಿಕ್ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಈ ರೀತಿ ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಿಸಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಫ್ಲಿಪ್‌ಕಾರ್ಟ್ ಸೈಟ್ ಅಥವಾ ಆ್ಯಪ್ ಕ್ಲಿಕ್ ಮಾಡುವಂತೆ, ಯಾವುದಾದರು ಒಂದು ವಸ್ತು ಖರೀದಿಸುವಂತೆ ಮಾಡುವುದೇ ಇದರ ಉದ್ದೇಶ. ಆದರೆ ಈ ರೀತಿ ಗ್ರಾಹಕರನ್ನು ಮೋಸ ಮಾಡುತ್ತಿರುವ ಇ ಕಾಮರ್ಸ್ ಆಟಾಟೋಪಗಳಿಗೆ ಕಡಿವಾಣ ಹಾಕಲು ಜನರು ಆಗ್ರಹಿಸಿದ್ದಾರೆ.
ಬಿಗ್ ಬಿಲಿಯಡನ್ ಡೇಸ್ ಸೇಲ್ ಜನಪ್ರಿಯಗೊಳಿಸಲು, ಮಾರಾಟ ಹೆಚ್ಚಿಸಲು ಫ್ಲಿಪ್‌ಕಾರ್ಟ್ ಪ್ರಕಟಿಸಿದ ತಪ್ಪು ಜಾಹೀರಾತು ಇದೀಗ ಇಕಾಮರ್ಸ್‌ಗೆ ಮುಳುವಾಗಿದೆ. ಫ್ಲಿಪ್‌ಕಾರ್ಟ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಜಾಹೀರಾತನ್ನೇ ಸುಳ್ಳಾಗಿದೆ. ಹೀಗಾಗಿ ನೀವು ನೀವು ನಕಲಿ ಉತ್ಪನ್ನ ನೀಡಿ ಮತ್ತೆ ಗ್ರಾಹಕರನ್ನು ಮೋಸ ಮಾಡುವ ಎಲ್ಲಾ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Flipkar ads
ಸುಳ್ಳು ಜಾಹೀರಾತಿನಿಂದ ಗ್ರಾಹಕರ ಸೆಳೆಯಲು ಯತ್ನಿಸಿದ ಫ್ಲಿಪ್‌ಕಾರ್ಟ್ ವಿರುದ್ದ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಯಾರಾದರೂ 11 ರೂಪಾಯಿ ಐಫೋನ್ 13 ಖರೀದಿಸಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಈ ಜಾಹೀರಾತು ನೋಡಿ ಫೋನ್ ಖರೀದಿಸಲು ಮುಂದಾದ ಬಹುತೇಕ ಗ್ರಾಹಕರು ಸೋಲ್ಡ್ ಔಟ್ ಬೋರ್ಡ್ ತೋರಿಸುತ್ತಿದ್ದಾರೆ. ಒಬ್ಬರೂ 11 ರೂಪಾಯಿ ಐಫೋನ್ ಖರೀದಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಶೋರೂಮ್‌ಗೆ ಹೋಗೋದೇ ಬೇಡ, ಫ್ಲಿಪ್‌ಕಾರ್ಟ್‌ನಲ್ಲಿ ಬುಕ್ ಮಾಡಿದ್ರೆ ಮನೆಗೆ ಬರುತ್ತೆ ಬೈಕ್, ಆಫರ್‌ಗಳೂ ಭರ್ಜರಿ!