Asianet Suvarna News Asianet Suvarna News

ಬೌನ್ಸ್ ಬೈಕ್ ದರ್ಬಳಕೆ: ಒಂದೊಳ್ಳೆ ಚಿಂತನೆಗೆ ಪ್ರತಿಕ್ರಿಯೆ ಹೀಗೇಕೆ?

ಮೂರು ಯುವ ಮನಸ್ಸುಗಳು ಕೂಡಿ ಕಟ್ಟಿದ ಅಪರೂಪದ ಉದ್ಯಮ| ಸಂಕಷ್ಟದಲ್ಲಿ ವಿನೂತನ ದ್ವಿಚಕ್ರ ವಾಹನ ಸೇವೆಯ ಉದ್ಯಮ| ಅಗ್ಗದ ದರದಲ್ಲಿ ದ್ವಿಚಕ್ರ ವಾಹನ ಸೇವೆ ಒದಗಿಸುವ ಬೌನ್ಸ್ ಬೈಕ್ ಉದ್ಯಮ| ಕೀ ರಹಿತ ತಂತ್ರಜ್ಞಾನದ ನೆರವಿನಿಂದ ಸ್ಕೂಟರ್’ಗಳ ಬಾಡಿಗೆ| ಗ್ರಾಹಕರಿಗೆ ನೀಡಿದ ಸೌಲಭ್ಯವೇ ಬೌನ್ಸ್ ಬೈಕ್ ಉದ್ಯಮಕ್ಕೆ ಮುಳುವಾಯ್ತು| ಬೌನ್ಸ್ ಬೈಕ್ ಮೇಲೆ ಕಡಿವಾಣ ಹಾಕುವ ನಿರ್ಧಾರಕ್ಕೆ ಬಂದ ಪೊಲೀಸ್ ಇಲಾಖೆ| ಬಿಡಿ ಭಾಗಗಳನ್ನು ಕದ್ದು ಬೈಕ್ ಬಿಟ್ಟು ಹೋಗುವ ಗ್ರಾಹಕರು| ಎಲ್ಲೆಂದರಲ್ಲಿ ಪಾರ್ಕ್ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ| ಗ್ರಾಹಕರ ನಂಬಿಕೆ ಮೇಲೆ ನಿಂತಿರುವ ಈ ಉದ್ಯಮಕ್ಕೆ ಗ್ರಾಹಕರಿಂದಲೇ  ಪೆಟ್ಟು|

Customers Creating Rucks For Bounce Bikes Problems Faced By The Start-up
Author
Bengaluru, First Published Aug 2, 2019, 4:50 PM IST

ಬೆಂಗಳೂರು(ಆ.02): ಅದು ಮೂರು ಯುವ ಮನಸ್ಸುಗಳು ಕೂಡಿ ಕಟ್ಟಿದ ಅಪರೂಪದ ಉದ್ಯಮ. ಜಗತ್ತಿನಲ್ಲೇ ಮೊದಲ ಪ್ರಯತ್ನ ಎನ್ನಬಹುದಾದ ವಿನೂತನ ದ್ವಿಚಕ್ರ ವಾಹನ ಸೇವೆಯ ಉದ್ಯಮ. ಕರುನಾಡಿನ ಯುವಕರ ಈ ಸಾಹಸಗಾಥೆ ನೋಡಿ  ಮೆಚ್ಚಿದವರಿಲ್ಲ ಬಿಡಿ.

ಹೌದು, ಬೆಂಗಳೂರಿನ ಜನರಿಗೆ ಅಗ್ಗದ ದರದಲ್ಲಿ ದ್ವಿಚಕ್ರ ವಾಹನ ಸೇವೆ ಒದಗಿಸುವ ಬೌನ್ಸ್ ಎಂಬ ಅಪರೂಪದ ಉದ್ಯಮ ವಿಶ್ವದ ಗಮನ ಸೆಳೆದಿದೆ. ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ತನ್ನ ಶಾಖೆ ಹೊಂದಿರುವ ಬೌನ್ಸ್ ಬೈಕ್ ಮೂಲಕವೇ ಬಹುತೇಕ ಮೆಟ್ರೋ ಪ್ರಯಾಣಿಕರು ಮನೆ ತಲುಪುವುದು.

Customers Creating Rucks For Bounce Bikes Problems Faced By The Start-up

ಕಾಸ್ಟ್ ಅಕೌಂಟ್ ಮತ್ತು ಕಂಪನಿ ಸೆಕ್ರೆಟರಿ ಓದಿರುವ ಬೆಂಗಳುರಿನ ಅರುಣ್ ಗಿರಿ, ಹಾಸನದ ಚಾರ್ಟೆರ್ಡ್ ಅಕೌಂಟೆಂಟ್ ವಿವೇಕಾನಂದ ಹಳ್ಳೆಕೆರೆ ಹಾಗೂ ಎಂಜಿನಿಯರಿಂಗ್ ಓದಿರುವ ವರುಣ್ ಅಗ್ನಿ ಅವರ ಕನಸಿನ ಬೌನ್ಸ್ ಬೈಕ್ ಉದ್ಯಮ ಯಶಸ್ಸಿನ ಹಳಿಗಳ ಮೇಲೆ ಓಡುತ್ತಿದೆ.

ಕೀ ರಹಿತ ತಂತ್ರಜ್ಞಾನದ ನೆರವಿನಿಂದ ಸ್ಕೂಟರ್’ಗಳನ್ನು ಬಾಡಿಗೆ ನೀಡುವ ಈ ವಿನೂತನ ಯೋಜನೆ 2018ರಿಂದ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ಜಾರಿಗೆ ಬಂದಿದೆ. ಆದರೆ ಗ್ರಾಹಕರ ಅನುಕೂಲಕ್ಕಾಗಿ ಜಾರಿಗೆ ಬಂದ ಈ ಯೋಜನೆ, ಗ್ರಾಹಕರ ಎಡವಟ್ಟುಗಳಿಂದಲೇ ಸಂಕಷ್ಟಕ್ಕೆ ಸಿಲುಕಿರುವುದು ನಿಜಕ್ಕೂ  ದುರದೃಷ್ಟಕರ.

ಎಲ್ಲೆಂದರೆಲ್ಲಿ ಕಾಣಸಿಗುವ ಬೌನ್ಸ್ ಬೈಕ್:

ಸವಾರರಿಗೆ ಬೌನ್ಸ್ ಬೈಕ್’ಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವ ಹಾಗೂ ತಮ್ಮ ಇಷ್ಟದ ಸ್ಥಳದಲ್ಲಿ ಬೈಕ್’ನ್ನು ಪಾರ್ಕ್ ಮಾಡಿ ಹೋಗುವ ಸೌಲಭ್ಯ ಒದಗಿಸಲಾಗಿದೆ. ಆದರೆ ಸಂಸ್ಥೆ ತನ್ನ ಗ್ರಾಹಕರಿಗೆ ನೀಡಿರುವ ಹಲವು ಸೌಲಭ್ಯಗಳಿಗೆ ನಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿರುವದು ನಿಜಕ್ಕೂ ದುರದೃಷ್ಟಕರ.

Customers Creating Rucks For Bounce Bikes Problems Faced By The Start-up

ಬೌನ್ಸ್ ಬೈಕ್ ಬಾಡಿಗೆ ಪಡೆಯುವ ಗ್ರಾಹಕರು ಈ ಬೈಕ್’ಗಳನ್ನು ತಮ್ಮ ಇಷ್ಟ ಬಂದ ಸ್ಥಳದಲ್ಲಿ ನಿಲ್ಲಿಸಿ ಹೋಗುವುದರಿಂದ ಟ್ರಾಫಿಕ್ ಕಿರಿಕಿರಿಯ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಇಲಾಖೆ ಬೌನ್ಸ್ ಬೈಕ್ ಮೇಲೆ ನಿಗಾ ಇಡುವಂತಾಗಿದೆ.

ಉಪಯೋಗಕ್ಕಿಂತ ದುರುಪಯೋಗವೇ ಅಧಿಕ:

ಹೌದು, ಗ್ರಾಹಕರ ಉಪಯೋಗಕ್ಕಾಗಿ ಇರುವ ಬೌನ್ಸ್ ಬೈಕ್’ಗಳನ್ನು ಅದೇ ಗ್ರಾಹಕರು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ . ಬೈಕ್’ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ, ಬೈಕ್’ನ ಬಿಡಿ ಭಾಗಗಳನ್ನು ಕದಿಯುವ, ಬಿಡಿ ಭಾಗಗಳಿಗೆ ಹಾನಿಯುಂಟು ಮಾಡುವ ಮನೋವೃತ್ತಿ ಆಂತಕ ಮೂಡಿಸಿದೆ.

Customers Creating Rucks For Bounce Bikes Problems Faced By The Start-up

ಕೆಟ್ಟು ನಿಂತಿರುವ ಬೈಕ್’ಗಳನ್ನು ನಗರದ ಮೂಲೆ ಮೂಲೆಯಲ್ಲಿ ಕಾಣಬಹುದಾಗಿದೆ. ಅಲ್ಲದೇ ಬಿಡಿ ಭಾಗಗಳೇ ನಾಪತ್ತೆಯಾಗಿರುವ ಸ್ಕೂಟರ್ ಕಂಡರೆ ಎಂತವರಿಗೂ ಹೊಟ್ಟೆ ಉರಿಯುತ್ತದೆ. ಈ ಕುರಿತು ಬೌನ್ಸ್ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ಬಹುತೇಕ ಗ್ರಾಹಕರ ನಂಬಿಕೆ ಮೇಲೆ ನಿಂತಿರುವ ಈ ಉದ್ಯಮಕ್ಕೆ ಗ್ರಾಹಕರೇ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರೆ ಏನು ಮಾಡಲು ಸಾಧ್ಯ ಎಂದು ಮರುಪ್ರಶ್ನಿಸುತ್ತಾರೆ.

Customers Creating Rucks For Bounce Bikes Problems Faced By The Start-up

ಬೌನ್ಸ್ ಬೈಕ್‌ಗಳನ್ನು ಬುಕ್ ಮಾಡುವ ಕೆಲವು ಗ್ರಾಹಕರು ಹೆಲ್ಮೆಟ್ ಕದಿಯುತ್ತಾರೆ. ಮತ್ತೆ ಕೆಲವರು ಉಪಯೋಗಿಸಿದ ಬಳಿಕ ಬೈಕ್‌ಗಳನ್ನು ಚರಂಡಿಗೆ ಎಸೆದು ಹೋಗುತ್ತಾರೆ. ಗ್ರಾಹಕರ ಈ  ತರಹದ ನಡುವಳಿಕೆಯನ್ನು ಸಂಸ್ಥೆ ಗ್ರಾಹಕರಿಗಾಗಿಯೇ ಸಹಿಸಿಕೊಳ್ಳುತ್ತಿರುವುದು ಅದರ ಸೇವಾ ಬದ್ಧತೆಯನ್ನು ತೋರಿಸುತ್ತದೆ. 

ಅಪರಾಧ ಚಟುವಟಿಕೆಗಳಿಗೂ ಬೈಕ್ ಬಳಕೆ?:

ಹೌದು, ಇಂತಹ ಗಂಭೀರ ಸಮಸ್ಯೆಯೊಂದು ಬೈಕ್ ಬೌನ್ಸ್’ನ್ನು ಕಾಡುತ್ತಿರುವುದು ಸುಳ್ಳಲ್ಲ. ಎಷ್ಟೇ ಆಧುನಿಕ ತಂತ್ರಜ್ಞಾನದ ನೆರವಿನಿಂದ ಬೈಕ್ ಟ್ರಾಕ್ ಮಾಡಿದರೂ, ಅಪರಾಧ ಚಟುವಟಿಕೆಗಳಿಗೆ ಕೆಲವರು ಈ ಬೈಕ್’ಗಳನ್ನು ಬಳಸುತ್ತಿರುವುದು ಪೊಲೀಸರನ್ನೂ ಚಿಂತೆಗೀಡು ಮಾಡಿದೆ.

Customers Creating Rucks For Bounce Bikes Problems Faced By The Start-up

ಒಟ್ಟಿನಲ್ಲಿ ರಾಜಧಾನಿಯಲ್ಲಿ ಬೈಕ್ ಬಾಡಿಗೆ ಪಡೆದು ಹಾಯಾಗಿ ಮನೆ ತಲುಪುವ ಹಾಗೂ ತಾವಂದುಕೊಂಡ ಸ್ಥಳಕ್ಕೆ ಹೋಗಲು ಅನುವು ಮಾಡಿಕೊಡುವ ಅಪರೂಪದ ಸೇವೆಯನ್ನು ಗ್ರಾಹಕರೇ ದುರುಪಯೋಗಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ.

Follow Us:
Download App:
  • android
  • ios