* ಪೂರೈಕೆ ಇಳಿಕೆ: ಕರಿಬೇವಿನ ಬೆಲೆ ದುಪ್ಪಟ್ಟು ಏರಿಕೆ* 60 ಆಸುಪಾಸಿನಲ್ಲಿದ್ದ ಕೇಜಿ ಕರಿಬೇವಿನ ಬೆಲೆ 160-180ಕ್ಕೆ ಏರಿಕೆ* ಜನವರಿಯಿಂದ ಪೂರೈಕೆ ಕ್ಷೀಣ
ಬೆಂಗಳೂರು(ಮಾ.11): ಚಳಿಗಾಲದ(Winter) ಅಂತ್ಯದ ವೇಳೆಗೆ ಕರಿಬೇವು(Curry Leaves) ಸೊಪ್ಪಿನ ಇಳುವರಿ ಪ್ರಮಾಣ ಕುಂಠಿತಗೊಳ್ಳುವ ಕಾರಣ ಮಾರುಕಟ್ಟೆಗಳಿಗೆ(Market) ಬೇಡಿಕೆಯ ಅರ್ಧದಷ್ಟು ಮಾತ್ರವೇ ಪೂರೈಕೆ ಆಗುತ್ತಿರುವುದರಿಂದ ಕೇಜಿ ಕರಿಬೇವು ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿದೆ.
ನಗರದ ಮಾರುಕಟ್ಟೆಗಳಲ್ಲಿ ಕೆಲವು ದಿನಗಳ ಹಿಂದೆ ಸುಮಾರು 60 ಆಸುಪಾಸಿಗೆ ಸಿಗುತ್ತಿದ್ದ ಕೇಜಿ ಕರಿಬೇವಿನ ಚಿಲ್ಲರೆ ದರ ಇದೀಗ .160-.180ಕ್ಕೆ ಏರಿಕೆ ಆಗಿದೆ. ಇತರ ಸೊಪ್ಪುಗಳಿಗೆ ಹೋಲಿಸಿದರೆ ಕರಿಬೇವು ಸೊಪ್ಪಿನ ದರ(Price) ಮಾತ್ರವೇ ಹೆಚ್ಚಾಗಿದೆ. ಮಾರ್ಚ್ ಅಂತ್ಯದವರೆಗೂ ಇದೇ ದರ ಮುಂದುವರಿಯಲಿದೆ ಎನ್ನುತ್ತಾರೆ ವ್ಯಾಪಾರಿಗಳು.
Untimely Rain Effect: ಡಬಲ್ ಸೆಂಚುರಿ ಬಾರಿಸಿದ ಬದನೆಕಾಯಿ ದರ: ಕಂಗಾಲಾದ ಗ್ರಾಹಕ..!
ಕೇಜಿಗಟ್ಟಲೇ ಕರಿಬೇವು ಖರೀದಿಸಿ ತರುವ ಅಂಗಡಿದಾರರು, ತಳ್ಳುಗಾಡಿ ವ್ಯಾಪಾರಿಗಳು ಸರಿಸುಮಾರು .40-50 ಲಾಭವಿಟ್ಟುಕೊಂಡೇ ಬಡಾವಣೆಗಳಲ್ಲಿ ಮಾರಾಟ ಮಾಡುತ್ತಾರೆ. ಒಂದು ಹಿಡಿ ಕರಿಬೇವಿಗೆ .5 ಕೊಡುತ್ತಿದ್ದ ಗ್ರಾಹಕರು ಇದೀಗ ಅಷ್ಟೇ ಪ್ರಮಾಣ ಸೊಪ್ಪಿಗೆ .10 ತೆರಬೇಕಾಗಿದೆ. ದಾಸನಪುರ ಎಪಿಎಂಸಿಯ ಕೆಂಪೇಗೌಡ ಮಾರುಕಟ್ಟೆಗೆ ಸಾಮಾನ್ಯ ದಿನಗಳಲ್ಲಿ ನಿತ್ಯ 8-10 ಟಾಟಾ ಏಸ್ ವಾಹನ ತುಂಬಾ ಕರಿಬೇವು ಸೊಪ್ಪು ಬರುತ್ತಿತ್ತು. ಈಗ ಅಗತ್ಯದಷ್ಟುಸೊಪ್ಪಿನ ಪೂರೈಕೆ ಆಗದ ಹಿನ್ನೆಲೆ ನಿತ್ಯ 4-5 ವಾಹನಗಳಷ್ಟುಮಾತ್ರ ಪೂರೈಕೆ ಆಗುತ್ತಿದೆ. ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ, ತುಮಕೂರು ಇನ್ನಿತರ ಗ್ರಾಮಗಳಿಗಿಂತಲೂ ಅಧಿಕ ಕರಿಬೇವು ಪೂರೈಕೆ ಮಾಡುತ್ತಿದ್ದ ನೆರೆಯ ಆಂಧ್ರ ಪ್ರದೇಶದಲ್ಲೂ(Andhra Pradesh) ಇದೇ ಪರಿಸ್ಥಿತಿ ಉಂಟಾಗಿದೆ. ಅಲ್ಲಿಂದಲೂ ಪೂರೈಕೆ ಅರ್ಧದಷ್ಟು ಕಡಿಮೆ ಆಗಿದೆ ಎಂದು ತರಕಾರಿ ವರ್ತಕ ಗೋವಿಂದಪ್ಪ ಮಾಹಿತಿ ನೀಡಿದರು.
ಜನವರಿಯಿಂದ ಪೂರೈಕೆ ಕ್ಷೀಣ:
ಮಳೆಗಾಲ(ಮೇ-ಜೂನ್) ಆರಂಭದಿಂದ ಡಿಸೆಂಬರ್‌ವರೆಗೆ ಗಿಡಗಳಲ್ಲಿ ಲಭ್ಯವಿರುವ ಕರಿಬೇವು ಸೊಪ್ಪಿನ ಇಳುವರಿ ಜನವರಿಯಿಂದ ಹಂತ ಹಂತವಾಗಿ ಕಡಿಮೆ ಆಗುತ್ತದೆ. ನಂತರ ಗಿಡಗಳು ಚಳಿಗಾಲ ಅಂತ್ಯಕ್ಕೆ ಚಿಗುರೊಡೆಯಲು ಆರಂಭಿಸುತ್ತವೆ. ಅದು ರೈತರ(Farmers) ಕೈಸೇರಿ ಮಾರುಕಟ್ಟೆಗಳಿಗೆ ತಲುಪಲು ಸುಮಾರು ಒಂದುವರೆ ತಿಂಗಳು ಹಿಡಿಯಬಹುದು. ಈ ಅವಧಿಯಲ್ಲಿ ಇತರ ಸೊಪ್ಪುಗಳಿಗಿಂತ ಕರಿಬೇವಿಗೆ ಅಧಿಕ ಬೇಡಿಕೆ ಸೃಷ್ಟಿಯಾಗುತ್ತದೆ. ಪರಿಣಾಮ ಪೂರೈಕೆ ಕೊರತೆ ಉಂಟಾಗಿ ದರದಲ್ಲಿ ಏರಿಕೆ ಕಂಡು ಬರುತ್ತದೆ ಎಂದು ಚಿಕ್ಕಬಳ್ಳಾಪುರ ರೈತ ಸುರೇಶ್ ತಿಳಿಸಿದರು.
Vegetable Price Hike : ಗ್ರಾಹಕರು ಕಂಗಾಲು - ವಾರದಿಂದ ಮತ್ತೆ ಬೆಲೆ ಏರಿಕೆ ಬಿಸಿ
ದರಪಟ್ಟಿ
ಸೊಪ್ಪು ಹಾಪ್‌ಕಾಮ್ಸ್(ಕೇಜಿ) ಚಿಲ್ಲರೆ(ಕಟ್ಟು)
ಕರಿಬೇವು 100 .10-15
ಮೆಂತ್ಯ 58 .20
ದಂಟು 51 .20
ಮೂಲಂಗಿ 18 .30
ಪುದಿನ 36 .10
ಕೊತ್ತಂಬರಿ 56 .15-20
ನಾಟಿಕೊತ್ತಂಬರಿ - 30
ನೂರರ ಗಡಿದಾಟಿದ್ದ ತರಕಾರಿ ಬೆಲೆ ಇಳಿಕೆಯತ್ತ: ಗ್ರಾಹಕರಿಗೆ ನೆಮ್ಮದಿ
ಬೆಂಗಳೂರು: ತಿಂಗಳ ಹಿಂದೆ ನಿರಂತರ ಮಳೆಯಿಂದ(Rain) ಏರಿಕೆಯಾಗಿದ್ದ ತರಕಾರಿಗಳ(Vegetable) ದರ ಕಡಿಮೆಯಾಗುತ್ತಿದ್ದು, ಜನರ ಆರ್ಥಿಕ ಹೊರೆಯನ್ನು ತುಸು ಕಡಿಮೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆ ಆಗಲಿದೆ. ನಿರಂತರ ಮಳೆಯಿಂದಾಗಿ ಸೃಷ್ಟಿಯಾಗಿದ್ದ ತರಕಾರಿ ಪೂರೈಕೆ ಕೊರತೆ, ಬೆಲೆ ಏರಿಕೆ ಸ್ಥಿತಿ ಇದೀಗ ಮಾಯವಾಗಿದೆ. ನಗರದ ಎಲ್ಲ ಮಾರುಕಟ್ಟೆಗಳು(Markets) ತರಹೇವಾರಿ ತರಕಾರಿಗಳಿಂದ ತುಂಬಿವೆ. ಹೀಗಾಗಿ ತಿಂಗಳುಗಳ ಹಿಂದೆ 100ರ ಗಡಿ ದಾಟಿದ್ದ ಕೆ.ಜಿ. ಟೋಮೊಟೋ ಭಾನುವಾರ 30ಕ್ಕೆ, ಕ್ಯಾಪ್ಸಿಕಂ 60-90, ಬೀನ್ಸ್ 50-60, ಕ್ಯಾರೆಟ್ 60-80 ರು.ಗೆ ಮಾರಾಟವಾಗಿದೆ.
ಇವುಗಳ ಜತೆಗೆ ದುಬಾರಿಯಾಗಿದ್ದ ಬದನೆಕಾಯಿ 35-40, ಸೌತೆಕಾಯಿ 25, ಆಲೂಗಡ್ಡೆ .30, ಹಾಗಲಕಾಯಿ .40-55, ಈರುಳ್ಳಿ .30-45ಗೆ ಬಿಕರಿಗೊಂಡಿದೆ. ಇನ್ನು ಏಲಕ್ಕಿ ಬಾಳೆಹಣ್ಣು .50 ಮತ್ತು ಪಚ್ಚ ಬಾಳೆಹಣ್ಣಿನ ದರ ಕೆ.ಜಿ.ಗೆ .30 ಆಗಿದ್ದರೆ, ಒಂದು ಕಟ್ಟು ಕೊತ್ತಂಬರಿ .10-20, ಪಾಲಕ್ ಸೊಪ್ಪು .15, ಪುದಿನ ಮತ್ತು ದಂಟಿನ ಸೊಪ್ಪು ತಲಾ .10 ತಲುಪಿದೆ. ಹಾಪ್‌ಕಾಮ್ಸ್‌ನಲ್ಲೂ ಬಹುತೇಕ ತರಕಾರಿಗಳ ಬೆಲೆ ಇಳಿಮುಖಗೊಂಡಿದೆ.
