2 ನೋಟು ಮುದ್ರಣ ಘಟಕಗಳೇ ಸ್ಥಗಿತ:| 3ನೇ ಬಾರಿ ಇತಿಹಾಸ| ಸೆಕ್ಯೂರಿಟಿ ಪ್ರೆಸ್‌ ಹಾಗೂ ಕರೆನ್ಸಿ ನೋಟ್‌ ಪ್ರೆಸ್‌ ಘಟಕಗಳು ಬಂದ್

ನಾಶಿಕ್‌(ಮಾ.24): ಕೊರೋನಾ ಭೀತಿಯಿಂದಾಗಿ ಇಲ್ಲಿನ ಭಾರತೀಯ ಭದ್ರತಾ ಮುದ್ರಣ ಹಾಗೂ ಅಚ್ಚು ನಿಗಮದ ಎರಡು ಘಟಕಗಳನ್ನು ಮಾ.31ರ ವರೆಗೆ ಮುಚ್ಚಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ ಹಾಗೂ ಕರೆನ್ಸಿ ನೋಟ್‌ ಪ್ರೆಸ್‌ ಘಟಕಗಳನ್ನು ಬಂದ್‌ ಮಾಡುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಈ ಎರಡೂ ಘಟಕಗಳಲ್ಲಿ ಕ್ರಮವಾಗಿ 1900 ಹಾಗೂ 2100 ನೌಕರರು ಇದ್ದಾರೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಹಿಂದೆ 1950ರಲ್ಲಿ ನೌಕರರ ಮುಷ್ಕರದಿಂದಾಗಿ ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ ಸ್ಥಗಿತಗೊಂಡಿತ್ತು. ಬಳಿಕ 1979 ಮತ್ತೊಂದು ಮುಷ್ಕರದಿಂದಾಗಿ ಎರಡೂ ಘಟಕಗಳು ಕೆಲಸ ನಿಲ್ಲಿಸಿದ್ದವು.