Asianet Suvarna News Asianet Suvarna News

ಈಗ ವಾಟ್ಸ್ಆ್ಯಪ್ ನಲ್ಲಿ ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡ್ಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ

ಗೃಹ, ವೈಯಕ್ತಿಕ ಸಾಲಗಳನ್ನು ಪಡೆಯಲು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರೋರು ಅಗತ್ಯ. ಹೀಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಉತ್ತಮ. ಇದ್ರಿಂದ ಸಾಲ ಸಿಗುತ್ತಾ ಇಲ್ಲವಾ ಎಂಬ ಸ್ಪಷ್ಟತೆ ನಮಗೆ ಲಭಿಸುತ್ತದೆ. ಅಲ್ಲದೆ, ಕ್ರೆಡಿಟ್ ಸ್ಕೋರ್ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಕೂಡ ಪ್ರಯತ್ನಿಸಲು ನೆರವು ನೀಡುತ್ತದೆ. ಆದ್ರೆ ಬಹುತೇಕರಿಗೆ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಹೇಗೆ ಎಂದು ತಿಳಿದಿಲ್ಲ.ಈಗ ವಾಟ್ಸ್ಆ್ಯಪ್ ನಲ್ಲೇ ಉಚಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡ್ಬಹುದು. 
 

Credit Score on WhatsApp you can check your credit score in whatsApp for free
Author
First Published Nov 12, 2022, 12:02 PM IST

Business Desk: ಗೃಹ ಅಥವಾ ವೈಯಕ್ತಿಕ ಸಾಲ ಸುಲಭವಾಗಿ ಸಿಗಬೇಕೆಂದ್ರೆ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರೋದು ಅಗತ್ಯ. ಯಾವುದೇ ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ ಸಾಲ ನೀಡುವ ಮುನ್ನ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತದೆ. ಕ್ರೆಡಿಟ್ ಸ್ಕೋರ್ ಅಂದ್ರೆ 3 ಅಂಕೆಗಳ ರೂಪದಲ್ಲಿರುವ ಗ್ರಾಹಕರ ಕ್ರೆಡಿಟ್ ವಿವರ. ಇದು ಗ್ರಾಹಕರು ಈ ಹಿಂದೆ ಸಾಲಗಳನ್ನು ಪಡೆದಿರೋದು ಹಾಗೂ ಅದನ್ನು ಮರುಪಾವತಿಸಿದ ಬಗ್ಗೆ ಬ್ಯಾಂಕ್ ಗಳು ಹಾಗೂ ಸಾಲಗಾರರು ನಿಯಮಿತವಾಗಿ ಕ್ರೆಡಿಟ್ ಇನ್ಫಾರ್ಮೇಷನ್ ಬ್ಯುರೋ ಆಫ್ ಇಂಡಿಯಾ ಲಿಮಿಟೆಡ್ ಗೆ (ಸಿಬಿಲ್) ನೀಡಿರುವ ಮಾಹಿತಿಗಳನ್ನು ಆಧರಿಸಿರುತ್ತದೆ. ನಿಯಮಿತವಾಗಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಒಳ್ಳೆಯ ಅಭ್ಯಾಸ. ಅದರಲ್ಲೂ ಗೃಹ, ವಾಹನ ಅಥವಾ ಇನ್ಯಾವುದೇ ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಉತ್ತಮ. ಇದ್ರಿಂದ ನಿಮಗೆ ಸಾಲ ದೊರೆಯುವಲ್ಲಿ ಯಾವುದೇ ತೊಂದರೆಯಿಲ್ಲ ಎಂಬುದು ಖಚಿತವಾಗುತ್ತದೆ. ಆದರೆ, ಬಹುತೇಕ ಜನರಿಗೆ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಹೇಗೆ ಎಂಬುದು ತಿಳಿದಿರೋದಿಲ್ಲ. ಆದರೆ, ಈಗ ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ವಾಟ್ಸ್ಆ್ಯಪ್ ನಲ್ಲಿ ಉಚಿತವಾಗಿ ಪರಿಶೀಲಿಸಬಹುದು. ಎಕ್ಸ್ಪೆರಿಯನ್ ಇಂಡಿಯಾದ ಹೊಸ ಸೇವೆಗಳ ಅಡಿಯಲ್ಲಿ ನೀವು ವಾಟ್ಸ್ಆ್ಯಪ್ ನಲ್ಲಿ ಕ್ರೆಡಿಟ್ ಸ್ಕೋರ್ ಪರಿಶೀಲಿಸಬಹುದು. 

ಈ ಕುರಿತು ಮಾಹಿತಿ ನೀಡಿರುವ ಎಕ್ಸ್ಪೆರಿಯನ್ ಇಂಡಿಯಾ ( Experian India), ಭಾರತದಲ್ಲಿ ಇದೇ ಮೊದಲ ಬಾರಿಗೆ ಕ್ರೆಡಿಟ್ ಬ್ಯುರೋ (Credit Bureau) ಇಂಥ ಸೇವೆ ಒದಗಿಸುತ್ತದೆ.  ಗ್ರಾಹಕರು ತಮ್ಮ ಎಕ್ಸ್ ಪೆರಿಯನ್ ಕ್ರೆಡಿಟ್ ಸ್ಕೋರ್ ಅನ್ನು ವಾಟ್ಸ್ಆ್ಯಪ್ ನಲ್ಲಿ (WhatsApp) ನಿಯಮಿತವಾಗಿ ಪರಿಶೀಲಿಸುವ ಮೂಲಕ ತಮ್ಮ ಕ್ರೆಡಿಟ್ ಪೋರ್ಟ್ ಫೋಲಿಯೋ (Credit Portfolio) ಸುಧಾರಿಸಿಕೊಳ್ಳಬಹುದು ಎಂದು ತಿಳಿಸಿದೆ. 

UTS ಆ್ಯಪ್‌ನಲ್ಲಿ ಕಾಯ್ದಿರಿಸದ ರೈಲು ಟಿಕೆಟ್‌ ಬುಕ್ಕಿಂಗ್‌ ವ್ಯಾಪ್ತಿ 20 ಕಿ.ಮೀ.ಗೆ ವಿಸ್ತರಣೆ

ಎಲ್ಲಿ, ಯಾವಾಗ ಬೇಕಿದ್ರೂ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ
ಈ ಹೊಸ ಯೋಜನೆ ಅಡಿಯಲ್ಲಿ ಗ್ರಾಹಕರು ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಿಂದ ಬೇಕಿದ್ರೂ ಕ್ರೆಡಿಟ್ ವರದಿಗಳನ್ನು ಪಡೆಯಬಹುದು ಎಂದು ಕ್ರೆಡಿಟ್ ಬ್ಯೂರೋ ತಿಳಿಸಿದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡಲು ಇರುವ ತ್ವರಿತ, ಸುರಕ್ಷಿತ ಹಾಗೂ ಸರಳ ವಿಧಾನವಾಗಿದೆ. ಗ್ರಾಹಕರು ತಮ್ಮ ಎಕ್ಸ್ ಪೆರಿಯನ್ ಕ್ರೆಡಿಟ್ ವರದಿಗಳನ್ನು ಚೆಕ್ ಮಾಡಿ ಯಾವುದೇ ವಂಚನೆಗಳು ಅಥವಾ ಇನ್ಯಾವುದೇ ಸಮಸ್ಯೆಗಳಿದ್ರೆ ಅದನ್ನು ಪತ್ತೆ ಹಚ್ಚಬಹುದು. ಹಾಗೆಯೇ ಕ್ರೆಡಿಟ್ ಸ್ಕೋರ್ ಗಳನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು.

ಸಂಬಳ ಸಿಕ್ಕಿದ ತಕ್ಷಣ ಖರ್ಚಾಗುತ್ತಾ? ಡೋಂಟ್ ವರಿ, ಈ ಟಿಪ್ಸ್ ಫಾಲೋ ಮಾಡಿ ಹಣ ಉಳಿಸಿ

ವಾಟ್ಸ್ಆ್ಯಪ್ ನಲ್ಲಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಹೇಗೆ?
-ವಾಟ್ಸ್ಆ್ಯಪ್ ನಲ್ಲಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡಲು ಮೊದಲು ಎಕ್ಸ್ ಪೆರಿಯನ್ ಇಂಡಿಯಾದ ಭಾರತದ ವಾಟ್ಸ್ಆ್ಯಪ್  ಸಂಖ್ಯೆ ಗೆ 'Hey'ಎಂದು ಕಳುಹಿಸಿ.
-ಆ ಬಳಿಕ ನಿಮ್ಮ ಹೆಸರು, ಇ-ಮೇಲ್ ಐಡಿ ಹಾಗೂ ಫೋನ್ ನಂಬ್ರ ಸೇರಿದಂತೆ ಕೆಲವು ಮೂಲ ಮಾಹಿತಿಗಳನ್ನು ಶೇರ್ ಮಾಡಿ.
-ಇದಾದ ಬಳಿಕ ನಿಮಗೆ ವಾಟ್ಸ್ಆ್ಯಪ್ ಮೂಲಕ ನಿಯಮಿತವಾಗಿ ಕ್ರೆಡಿಟ್ ಸ್ಕೋರ್ ಲಭಿಸುತ್ತದೆ.
-ನೀವು ಎಕ್ಸ್ ಪೆರಿಯನ್ ಕ್ರೆಡಿಟ್ ವರದಿಯ ಪಾಸ್ ವರ್ಡ್ ಸಂರಕ್ಷಿತ ಪ್ರತಿಗಾಗಿ ಮನವಿ ಸಲ್ಲಿಸಲು ಕೂಡ ಅವಕಾಶವಿದೆ. ಈ ಕ್ರೆಡಿಟ್ ವರದಿಯನ್ನು ನಿಮ್ಮ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ.
ಸಾಲಕ್ಕೆ ಅರ್ಜಿ ಸಲ್ಲಿಸುವ ಕೆಲವು ತಿಂಗಳು ಮೊದಲೇ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡೋದ್ರಿಂದ  ತೊಂದರೆಯುಂಟು ಮಾಡುವ ಯಾವುದೇ ಸಮಸ್ಯೆಗಳಿದ್ರೆ ಅದನ್ನು ಬಗೆಹರಿಸಲು ಕೂಡ ಸಮಯಾವಕಾಶ ಸಿಗುತ್ತದೆ. ಕನಿಷ್ಠ ವರ್ಷಕ್ಕೊಮ್ಮೆಯಾದ್ರೂ ಕ್ರೆಡಿಟ್ ಸ್ಕೋರ್ ಚೆಕ್ ಮಾಡೋದು ಒಳ್ಳೆಯದು. 

Follow Us:
Download App:
  • android
  • ios