ಸಂಬಳ ಸಿಕ್ಕಿದ ತಕ್ಷಣ ಖರ್ಚಾಗುತ್ತಾ? ಡೋಂಟ್ ವರಿ, ಈ ಟಿಪ್ಸ್ ಫಾಲೋ ಮಾಡಿ ಹಣ ಉಳಿಸಿ

ಇಂದು ಬೆಲೆಯೇರಿಕೆ ಎಲ್ಲರ ಜೇಬು ಸುಡುತ್ತಿದೆ.ತಿಂಗಳ ವೇತನದಲ್ಲಿ ನಿತ್ಯದ ವೆಚ್ಚ ಸರಿದೂಗಿಸೋದು ಕಷ್ಟಕರವಾಗಿದೆ. ಹೀಗಿರುವಾಗ ಪ್ರತಿ ತಿಂಗಳು ವೇತನದಲ್ಲಿ ಎಲ್ಲ ವೆಚ್ಚಗಳನ್ನು ಸಮರ್ಪಕವಾಗಿ ನಿಭಾಯಿಸಿ, ಒಂದಿಷ್ಟು ಉಳಿತಾಯ ಮಾಡೋದು ಸುಲಭದ ಮಾತಲ್ಲ. ಆದ್ರೆ, ಈ ಕೆಳಗಿನ ಟಿಪ್ಸ್ ಫಾಲೋ ಮಾಡಿದ್ರೆ ತಿಂಗಳ ವೇತನದಲ್ಲಿ ಒಂದಿಷ್ಟು ಉಳಿತಾಯ ಮಾಡೋದು ಸುಲಭ. 

Want To Utilize Your Salary Judiciously Listen To Experts

Business Desk:ನೀವು ಎಷ್ಟು ಸಂಪಾದಿಸುತ್ತೀರಿ ಎಂಬುದಕ್ಕಿಂತ ಅದನ್ನು ಹೇಗೆ ಬಳಸುತ್ತೀರಿ ಅನ್ನೋದು ಹೆಚ್ಚು ಮುಖ್ಯವಾಗುತ್ತದೆ ಎಂಬ ಮಾತಿದೆ. ಇದನ್ನು ವೇತನ ಪಡೆಯುವ ಪ್ರತಿ ವ್ಯಕ್ತಿಯೂ ನೆನಪಿನಲ್ಲಿಟ್ಟುಕೊಳ್ಳೋದು ಅಗತ್ಯ. ತಿಂಗಳ ವೇತನ ಕೈಗೆ ಸಿಕ್ಕ ತಕ್ಷಣ ಮನಸ್ಸಿಗೆ ಬಂದಂತೆ ವ್ಯಯಿಸಿ ತಿಂಗಳ ಕೊನೆಯಲ್ಲಿ ಸಾಲ ಮಾಡುವ ಸ್ಥಿತಿ ನಿಮ್ಮದಾಗಿದ್ದರಂತೂ ಬದಲಾಗಬೇಕಾದಂತಹ ತುರ್ತು ಅನಿವಾರ್ಯತೆ ಇದೆ. ದುಡಿಯೋದೇ ಖರ್ಚು ಮಾಡೋದಕ್ಕೆ ಎಂಬ ಮನಸ್ಥಿತಿಯಿಂದ ಹೊರಬಂದು ವೇತನದಲ್ಲಿ ಎಷ್ಟು ಖರ್ಚು ಮಾಡಬೇಕು, ಎಷ್ಟು ಉಳಿಸಬೇಕು? ಎಲ್ಲಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಯೋಚಿಸೋದು ಅತ್ಯಗತ್ಯ. ಅಷ್ಟೇ ಅಲ್ಲ, ವ್ಯವಸ್ಥಿತವಾದ ವಿಧಾನದಲ್ಲಿ ದೀರ್ಘಾಧಿಗೆ ಹೂಡಿಕೆ ಪ್ಲ್ಯಾನ್ ಮಾಡಬೇಕು. ನಾಳೆ ಎಂಬುದು ಅನಿಶ್ಚಿತ. ಹೀಗಾಗಿ ಇಂದು ಖುಷಿಯಾಗಿದ್ರೆ ಸಾಕು ಎಂಬ ಭಾವನೆ ನಿಮ್ಮದಾಗಿದ್ರೆ ನಾಳೆ ಬಗ್ಗೆಯೂ ಇಂದಿನಿಂದಲೇ ಯೋಚಿಸೋದು ಒಳ್ಳೆಯದು. ಕೆಲವರು ಪ್ರತಿ ತಿಂಗಳು ಕಷ್ಟಪಟ್ಟು ಕೆಲಸ ಮಾಡಿ ಕೈತುಂಬಾ ವೇತನ ಪಡೆಯುತ್ತಾರೆ. ಆದರೆ, ಹಾಗೇ ದುಡಿದ ಹಣ ಎಲ್ಲಿಗೆ ಹೋಯ್ತು ಎಂದು ಕೇಳಿದರೆ ಅವರಿಗೇ ಗೊತ್ತಿರೋದಿಲ್ಲ. ಬಸ್ ಹತ್ತು ಮುನ್ನ ಎಲ್ಲಿಗೆ ಹೋಗಬೇಕು ಎಂಬುದನ್ನು ನಾವು ನಿರ್ಧರಿಸಿಕೊಂಡಿರುತ್ತೇವೆ ಅಲ್ವಾ? ಹಾಗೆಯೇ ನಾವು ದುಡಿದ ಹಣವನ್ನು ಎಲ್ಲಿ, ಯಾವಾಗ, ಹೇಗೆ ಖರ್ಚು ಮಾಡಬೇಕು ಎಂಬುದರ ಬಗ್ಗೆ ಕೂಡ ಮೊದಲೇ ಪ್ಲ್ಯಾನ್ ಮಾಡಿಡೋದು ಅಗತ್ಯ. ಹಾಗಾದ್ರೆ ಪರಿಣಾಮಕಾರಿಯಾಗಿ ಹಣದ ನಿರ್ವಹಣೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್.

ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ನಿರ್ಧರಿಸಿ
ಯಾವುದೇ ಕೆಲಸ ಮಾಡೋ ಮೊದಲು ಪ್ಲ್ಯಾನಿಂಗ್ (Planning) ಅತ್ಯಗತ್ಯ. ಹಾಗೆಯೇ ತಿಂಗಳ ಸಂಬಳವನ್ನು ಹೇಗೆ ವ್ಯಯಿಸಬೇಕು ಎಂಬುದಕ್ಕೆ ಪ್ಲಾನಿಂಗ್ ಮಾಡಿದ್ರೆ ನಿಮಗೆ ಖಂಡಿತಾ ಹಣದ ಸಮಸ್ಯೆ ಉಂಟಾಗೋದಿಲ್ಲ. ಹೀಗಾಗಿ ಹಣದ ಖರ್ಚು, ಉಳಿತಾಯಕ್ಕೆ ಸಂಬಂಧಿಸಿ ಬಜೆಟ್ (Budget) ಸಿದ್ಧಪಡಿಸಿ. ನಿಮ್ಮ ಆದಾಯ, ಜೀವನಶೈಲಿ ಹಾಗೂ ಅಗತ್ಯಗಳನ್ನು ಆಧರಿಸಿ ಪ್ರತಿ ತಿಂಗಳು ನಿಮ್ಮ ವೇತನದ ಎಷ್ಟು ಭಾಗ ಖರ್ಚು ಮಾಡಬೇಕು ಎಂಬುದನ್ನು ನಿರ್ಧರಿಸಿ. ಈ ರೀತಿಯ ಅಂದಾಜು ನಿಮ್ಮ ಹಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ನೆರವು ನೀಡುತ್ತದೆ. ಹಾಗೆಯೇ ನಿಮ್ಮ ವೆಚ್ಚ ಹಾಗೂ ಉಳಿತಾಯಗಳನ್ನು ಸಮರ್ಪಕವಾಗಿ ನಿಭಾಯಿಸಲು ನೆರವು ನೀಡುತ್ತದೆ. ಅಲ್ಲದೆ, ನೀವು ನಿಮ್ಮ ಗುರಿಗಳನ್ನು ಸುಲಭವಾಗಿ ಹಾಗೂ ಹೆಚ್ಚು ಯಶಸ್ವಿಯಾಗಿ ತಲುಪುತ್ತೀರಿ ಕೂಡ. 

ನೀವು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ನಗದು ವಿತ್ ಡ್ರಾ ಮಾಡ್ತೀರಾ? ಹಾಗಾದ್ರೆ ಈ ಮಾಹಿತಿ ಗೊತ್ತಿರಲಿ

ಖರ್ಚಿಗೂ ಮುನ್ನ ಎತ್ತಿಡಿ
ಹೌದು, ತಿಂಗಳ ಸಂಬಳ ಬಂದ ತಕ್ಷಣ ಅದರಿಂದ ಒಂದು ಪೈಸೆ ಖರ್ಚು ಮಾಡುವ ಮುನ್ನ ಸ್ವಲ್ಪ ಮೊತ್ತವನ್ನು ದಿನಸಿ ಸಾಮಗ್ರಿಗಳು, ಮನೆ ಬಾಡಿಗೆ ಅಥವಾ ಇಎಂಐಗೆ, ವಿಮೆ ಪ್ರೀಮಿಯಂ ಪಾವತಿ ಸೇರಿದಂತೆ ತಿಂಗಳ ಅಗತ್ಯ ಖರ್ಚುಗಳಿಗೆ ಎತ್ತಿಡಿ. ಈ ರೀತಿ ಮಾಡೋದ್ರಿಂದ ಅಗತ್ಯ ವೆಚ್ಚಗಳಿಗೆ ಯಾವುದೇ ತೊಂದರೆಯಾಗೋದಿಲ್ಲ. ಅಲ್ಲದೆ, ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ನೀವು ವ್ಯಯಿಸೋದಿಲ್ಲ ಕೂಡ.

ಇಪಿಎಫ್ ಖಾತೆಗೆ ಬಡ್ಡಿ ಜಮೆ; ಬ್ಯಾಲೆನ್ಸ್ ಚೆಕ್ ಗೆ ಹೀಗೆ ಮಾಡಿ

ಉಳಿತಾಯದ ಹಣವನ್ನು ಖರ್ಚು ಮಾಡ್ಬೇಡಿ
ತಿಂಗಳಿಗೆ ಇಷ್ಟು ಉಳಿತಾಯ (Saving) ಮಾಡಬೇಕು ಎಂದು ಪ್ಲ್ಯಾನ್ (Plan) ಮಾಡಿ, ಪ್ರತಿ ತಿಂಗಳು ಅಷ್ಟು ಹಣವನ್ನು ಹೇಗಾದರೂ ಮಾಡಿ ಉಳಿಸಿ. ನಿಗದಿತ ಯೋಜನೆಯಲ್ಲಿ ಹೂಡಿಕೆ ಮಾಡಿ. ಯಾವುದೇ ಕಾರಣಕ್ಕೂ ಉಳಿತಾಯದ ಹಣದ ವಿಷಯದಲ್ಲಿ ರಾಜೀ ಮಾಡಿಕೊಳ್ಳಬೇಡಿ. ತುರ್ತು ಹಣದ ಅಗತ್ಯ ಎದುರಾದ್ರೆ ಬೇರೆ ಮೂಲದಿಂದ ವ್ಯವಸ್ಥೆ ಮಾಡಿಕೊಳ್ಳಿ. ಅದು ಬಿಟ್ಟು ಉಳಿತಾಯ ಮಾಡಲು ಅಥವಾ ಹೂಡಿಕೆಗೆ ಮೀಸಲಿಟ್ಟ ಹಣ ಬಳಸಬೇಡಿ. 

Latest Videos
Follow Us:
Download App:
  • android
  • ios