ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎನ್ನುವ ಮಾತಿದೆ. ಈಗ ಸಾಲ ಸಿಗೋದು ಕೂಡ ಸುಲಭ. ಆದ್ರೆ ಕ್ರೆಡಿಟ್ ಕಾರ್ಡ್ ನಲ್ಲಿ ಸಾಲ ಮಾಡಿ ನಂತ್ರ ತೀರಿಸೋಕಾಗ್ದೆ ಒದ್ದಾಡುವ ಬದಲು ಮೊದಲೇ ಪ್ಲಾನ್ ಮಾಡಿದ್ರೆ ಕೆಲಸ ಸುಲಭ.
ಕ್ರೆಡಿಟ್ ಕಾರ್ಡ್ (Credit Card ) ಕೈನಲ್ಲಿದ್ದರೆ ಹಣ (Money) ಖರ್ಚಾಗಿದ್ದು ಗೊತ್ತಾಗೋದಿಲ್ಲ. ಅಲ್ಲಿ, ಇಲ್ಲಿ ಅಂತಾ ಎಲ್ಲ ಕಡೆ ಕ್ರೆಡಿಟ್ ಕಾರ್ಡ್ ಉಜ್ಜಿರುತ್ತೇವೆ. ಈಗ ಅನೇಕ ಕಂಪನಿಗಳು ಕ್ರೆಡಿಟ್ ಕಾರ್ಡ್ ಆಫರ್ ನೀಡ್ತವೆ. ಕಡಿಮೆ ಬಡ್ಡಿ, ಹೆಚ್ಚು ಸಾಲ ಸೇರಿದಂತೆ ಅನೇಕ ಆಫರ್ (Offer) ಗಳನ್ನು ನೀಡ್ತವೆ. ಇದೇ ಕಾರಣಕ್ಕೆ ಜನರು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವುದಿದೆ. ಒಂದು ಕ್ರೆಡಿಟ್ ಕಾರ್ಡ್ ಬಿಲ್ (Bill) ಪಾವತಿ ಮಾಡುವುದೇ ಕಷ್ಟ. ಹಾಗಿರುವಾಗ ಎರಡೆರಡನ್ನು ಸಂಭಾಳಿಸುವುದು ಕತ್ತಿಗೆಗೆ ಬರುತ್ತದೆ. ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಎಚ್ಚರಿಕೆ ವಹಿಸದಿದ್ದರೆ,ಮುಂದೆ ದೊಡ್ಡ ಸಾಲ (Loans) ನಿಮ್ಮ ಮೈ ಸುತ್ತಿಕೊಳ್ಳುತ್ತದೆ. ಕ್ರೆಡಿಟ್ ಕಾರ್ಡ್ ಹಣವನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡದೆ ಹೋದ್ರೆ ಮತ್ತಷ್ಟು ಹೊರೆ ನಿಮ್ಮ ಮೇಲೆ ಬೀಳುತ್ತದೆ. ಅನೇಕ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡ್ಬೇಕೆಂದ್ರೂ ಮಾಡಲು ಸಾಧ್ಯವಾಗುವುದಿಲ್ಲ. ಕೊರೊನಾ (Corona) ಸಂದರ್ಭ ಇದಕ್ಕೆ ಉತ್ತಮ ನಿದರ್ಶನ. ಕೊರೊನಾ ವೇಳೆ ಅನೇಕರು ಕೆಲಸ (Work) ಕಳೆದುಕೊಂಡಿದ್ದರು. ಈ ವೇಳೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಲಾಗದೆ ಒದ್ದಾಡಿದ್ದರು. ಈಗಾಗಲೇ ನೀವು ಕ್ರೆಡಿಟ್ ಕಾರ್ಡ್ ನಲ್ಲಿ ಸಾಲ ಪಡೆದಿದ್ದರೆ ಗಾಬರಿಯಾಗುವ ಅವಶ್ಯಕತೆಯಿಲ್ಲ. ಅದ್ರಿಂದ ಹೊರಬರುವ ಸುಲಭ ಮಾರ್ಗವನ್ನು ನಾವಿಂದು ಹೇಳ್ತೇವೆ.
ಕ್ರೆಡಿಟ್ ಕಾರ್ಡ್ ಸಾಲದಿಂದ ಹೀಗೆ ಹೊರಗೆ ಬನ್ನಿ :
ಮರುಪಾವತಿ ಪ್ಲಾನ್ (Plan) ಮಾಡಿ : ಕ್ರೆಡಿಟ್ ಕಾರ್ಡ್ ಸಾಲದಿಂದ ಹೊರಗೆ ಬರಬೇಕೆಂದ್ರೆ ಮರುಪಾವತಿ ಗುರಿ ಮತ್ತು ಅದಕ್ಕೆ ಬೇಕಾದ ಪ್ಲಾನ್ ಮಾಡಿ. ಇದರಲ್ಲಿ ನಾಲ್ಕು ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಮೊದಲನೆಯದಾಗಿ ನಿಮ್ಮ ಉಳಿತಾಯ (Savings) ಅಧಿಕವಾಗಿದ್ದರೆ, ಕನಿಷ್ಠ ಬಾಕಿ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಪಾವತಿ (Payment) ಸಿ. ಇದು ನಿಮ್ಮ ಬಡ್ಡಿಯನ್ನು ಕಡಿಮೆ ಮಾಡುತ್ತದೆ. ಎರಡನೇಯದಾಗಿ ಸಾಲ ಸ್ಲೋಬಾಲ್. ಇದರರ್ಥ ನೀವು ಮೊದಲು ಸಣ್ಣ ಸಾಲಗಳನ್ನು ಪಾವತಿಸಬೇಕು. ನಂತ್ರ ದೊಡ್ಡ ಮೊತ್ತಕ್ಕೆ ಕೈ ಹಾಕಬೇಕು. ಆಗ ನಿಮಗೆ ಹೆಚ್ಚಿನ ಸಮಯ ಸಿಗುತ್ತದೆ
ಬ್ಯಾಂಕ್ ಅಥವಾ ಕಂಪನಿಯೊಂದಿಗೆ ಮಾತನಾಡಿ : ಕ್ರೆಡಿಟ್ ಕಾರ್ಡ್ ಸಾಲದಿಂದ ಹೊರಬರಲು ಒಂದು ಮಾರ್ಗವೆಂದರೆ ಪೂರ್ವಭಾವಿ ವಿಧಾನವನ್ನು ತೆಗೆದುಕೊಳ್ಳುವುದು. ಮರುಪಾವತಿಯ ನಿಯಮಗಳಲ್ಲಿ ನೀವು ಎಷ್ಟು ರಿಯಾಯಿತಿಯನ್ನು ಪಡೆಯಬಹುದು ಎಂಬುದರ ಕುರಿತು ನಿಮ್ಮ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್ ಅಥವಾ ಕಂಪನಿಯೊಂದಿಗೆ ಮಾತನಾಡಿ. ಬಾಕಿ ಬಿಲ್ ತುಂಬಾ ಹೆಚ್ಚಿದ್ದರೆ ಅದಕ್ಕೆ ಬ್ಯಾಂಕ್ ಬೇರೆ ವಿಧಾನವನ್ನು ನಿಮಗೆ ಹೇಳುತ್ತದೆ. ನೀವು ಸಾಲ ಪಡೆಯುವ ಮೊದಲೇ ಬ್ಯಾಂಕ್ ಅಥವಾ ಕಂಪನಿ ಜೊತೆ ಮಾತನಾಡಿ.
PAN Aadhaar Link:ನೀವಿನ್ನೂಆಧಾರ್-ಪ್ಯಾನ್ ಲಿಂಕ್ ಮಾಡಿಲ್ವ? ಜೂ.30ರೊಳಗೆ ಮಾಡದಿದ್ರೆ ಬೀಳುತ್ತೆ 1000ರೂ. ದಂಡ
ಸಾಲವನ್ನು ಒಂದೇ ಖಾತೆಗೆ ತನ್ನಿ : ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಪಾವತಿ ಬಾಕಿ ಇದ್ದರೆ ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಒಂದೇ ಖಾತೆಯಲ್ಲಿ ಮಾಡಬಹುದು.ಇದ್ರಿಂದ ಪ್ರತ್ಯೇಕ ಪಾವತಿ ನಿಮಗೆ ತಪ್ಪುತ್ತದೆ.
SERVICE CHARGE: ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸೋದನ್ನು ನಿಲ್ಲಿಸಿ: ಕೇಂದ್ರ ಸರ್ಕಾರ
ವೆಚ್ಚವನ್ನು ಕಡಿತಗೊಳಿಸಿ : ಕ್ರೆಡಿಟ್ ಕಾರ್ಡ್ ಸಾಲವು ನಿಮಗೆ ಹೊರೆಯಾಗುತ್ತದೆ. ಆದ್ದರಿಂದ ಅಂತಹ ಸಮಯದಲ್ಲಿ ನೀವು ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಬೇಕು. ನೀವು ಸಂಬಳವನ್ನು ಪಡೆದ ತಕ್ಷಣ, ಮೊದಲು ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ತೆರವುಗೊಳಿಸಲು ಪ್ರಯತ್ನಿಸಿ. ಅದರ ನಂತರ ಬಾಕಿ ಉಳಿದ ಹಣದಲ್ಲಿ ತಿಂಗಳ ಖರ್ಚನ್ನು ಪ್ಲಾನ್ ಮಾಡಿ. ಅನವಶ್ಯಕ ಖರ್ಚುಗಳನ್ನು ತಡೆಹಿಡಿಯಿರಿ. ವೆಚ್ಚಗಳ ಮೊದಲು ಬಾಕಿಗಳನ್ನು ತೆರವುಗೊಳಿಸುವ ತಂತ್ರವು ತುಂಬಾ ಪರಿಣಾಮಕಾರಿಯಾಗಿದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸಹ ಸುಧಾರಿಸುತ್ತದೆ.
