ಮಹಿಳೆಯರೂ ಬಳಸ್ಬೇಕು Credit Card: ಇದರಿಂದ ಸಿಗಲಿದೆ ಹಲವಾರು ಲಾಭ
ದಿನಕ್ಕೊಂದಾದ್ರೂ ಕರೆ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದಂತೆ ಬರ್ತಿರುತ್ತದೆ. ಅದ್ರ ಸಹವಾಸ ಬೇಡ ಅಂತಾ ಮಹಿಳೆಯರು ಸುಮ್ಮನಾಗ್ತಾರೆ. ಕ್ರೆಡಿಟ್ ಕಾರ್ಡ್ ಬಳಸೋದ್ರಿಂದಲೂ ಕೆಲ ಪ್ರಯೋಜನವಿದೆ. ಅದನ್ನು ತಿಳಿದು ಬಳಕೆ ಮಾಡಿದ್ರೆ ಮಹಿಳೆಯರಿಗೂ ಇದು ಲಾಭ ನೀಡುತ್ತದೆ.
ಮೊದಲು ವಸ್ತು ಖರೀದಿ ಮಾಡಿ, ನಂತ್ರ ಪಾವತಿ ಮಾಡುವ ಸೌಲಭ್ಯವನ್ನು ಕ್ರೆಡಿಟ್ ಕಾರ್ಡ್ ಒದಗಿಸಿಕೊಟ್ಟಿದೆ. ಇದು ಜನರ ಕೆಲಸವನ್ನು ಸುಲಭಗೊಳಿಸಿದೆ. ಇದೇ ಕಾರಣಕ್ಕೆ ಜನರು ಕ್ರೆಡಿಟ್ ಕಾರ್ಡನ್ನು ಹೆಚ್ಚೆಚ್ಚಾಗಿ ಬಳಕೆ ಮಾಡ್ತಿದ್ದಾರೆ. ಆದ್ರೆ ಕ್ರೆಡಿಟ್ ಕಾರ್ಡ್ ಬಗ್ಗೆ ಸಾಕಷ್ಟು ಚರ್ಚೆಗಳಿವೆ. ಕೆಲವರು ಇದು ಒಳ್ಳೆಯದು ಅಂದ್ರೆ ಮತ್ತೆ ಕೆಲವರು ಇದನ್ನು ಕೆಟ್ಟದ್ದು ಎನ್ನುತ್ತಾರೆ. ಕ್ರೆಡಿಟ್ ಕಾರ್ಡ್ ಸಾಲದಲ್ಲಿ ಸಿಲುಕಿದ್ರೆ ಅದರಿಂದ ಹೊರ ಬರುವುದು ಕಷ್ಟ. ಆದ್ರೆ ಅದನ್ನು ಬುದ್ದಿವಂತಿಕೆಯಿಂದ ಬಳಸಿದ್ರೆ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.
ಎಲ್ಲ ಕ್ಷೇತ್ರದಲ್ಲಿ ಮಹಿಳೆ ಮಿಂಚುತ್ತಿದ್ದಾಳೆ. ಆದರೆ ಹೂಡಿಕೆ (Investment), ಬ್ಯಾಂಕ್ ನಲ್ಲಿ ಹಣ ಉಳಿತಾಯ (Saving)ದ ವಿಷ್ಯ ಬಂದಾಗ ಮಹಿಳೆಯರು ಸ್ವಲ್ಪ ಮಟ್ಟಿಗೆ ಹಿಂದುಳಿಯುತ್ತಾರೆ. ಅನೇಕ ಮಹಿಳೆಯರು ಸುರಕ್ಷಿತ ಹೂಡಿಕೆ ಅಥವಾ ಬ್ಯಾಂಕ್ (Bank) ಸೌಲಭ್ಯದ ಬಗ್ಗೆ ಸರಿಯಾಗಿ ತಿಳಿದಿರೋದಿಲ್ಲ. ಕೆಲಸದಲ್ಲಿದ್ದು, ಸಂಬಳ ಪಡೆಯುತ್ತಿದ್ದರೂ ಕ್ರೆಡಿಟ್ ಕಾರ್ಡ್ ಬಳಸದ ಅನೇಕ ಮಹಿಳೆಯರಿದ್ದಾರೆ. ಕ್ರೆಡಿಟ್ ಕಾರ್ಡ್ ಹೊರೆ ಹೆಚ್ಚು ಮಾಡುತ್ತದೆ ಎಂಬುದು ಕೆಲವರ ಅಭಿಪ್ರಾಯ. ವಸ್ತುಗಳ ಖರೀದಿ ವೇಳೆ ಅಥವಾ ಬಿಲ್ ಪಾವತಿ ವೇಳೆ ನಗದು ನೀಡುವ ಬದಲು ಮಹಿಳೆಯರು ಕ್ರೆಡಿಟ್ ಕಾರ್ಡ್ ಬಳಸಿದ್ರೆ ಇದ್ರಿಂದ ಪ್ರಯೋಜನ ಪಡೆಯಬಹುದು.
ಕ್ರೆಡಿಟ್ ಕಾರ್ಡ್ ನಲ್ಲಿ ಅನೇಕ ವಿಧಗಳಿವೆ. ಹಾಗೆಯೇ ಕೆಲ ಬ್ಯಾಂಕ್ ಗಳು ಮಹಿಳೆಯರಿಗಾಗಿಯೇ ವಿಶೇಷ ಕ್ರೆಡಿಟ್ ಕಾರ್ಡ್ ನೀಡುತ್ತವೆ. ಹೆಚ್ ಡಿಎಫ್ ಸಿ ಸಾಲಿಟೇರ್ ಕ್ರೆಡಿಟ್ ಕಾರ್ಡ್ ನಲ್ಲಿ ಮಹಿಳೆಯರಿಗೆ ಬ್ಯಾಂಕ್ ಕೆಲ ವಿಶೇಷ ಸೌಲಭ್ಯವನ್ನು ನೀಡುತ್ತದೆ. ನಿಗದಿತ ಸಮಯದಲ್ಲಿ ನಿಗದಿತ ಹಣ ಖರ್ಚು ಮಾಡಿದ್ರೆ ಕೆಲ ವೋಚರ್,ರಿವಾರ್ಡ್ ಗ್ರಾಹಕರಿಗೆ ಲಭ್ಯವಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ಜೊತೆ ಸಿಟಿಬ್ಯಾಂಕ್,ಎಸ್ಬಿಐ ಸೇರಿದಂತೆ ಅನೇಕ ಬ್ಯಾಂಕ್ ಗಳು ಮಹಿಳೆಯರಿಗಾಗಿಯೇ ವಿಶೇಷ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ನೀಡುತ್ತವೆ.
ಕ್ರೆಡಿಟ್ ಕಾರ್ಡ್ ಬಳಕೆ ಮಾಡೋದ್ರಿಂದ ಸಿಗುತ್ತೆ ರಿವಾರ್ಡ್ ಪಾಯಿಂಟ್ : ಕ್ರೆಡಿಟ್ ಕಾರ್ಡ್ ನಲ್ಲಿ ನೀವು ಹಣ ಪಾವತಿ ಮಾಡೋದ್ರಿಂದ ನಿಮಗೆ ಲಾಭವಿದೆ. ಅನೇಕ ಕಂಪನಿಗಳು ರಿವಾರ್ಡ್ ಪಾಯಿಂಟ್ ನೀಡುತ್ತವೆ. ಇದು ನಿಮ್ಮ ಮುಂದಿನ ಖರೀದಿ ವೇಳೆ ಪ್ರಯೋಜನಕ್ಕೆ ಬರುತ್ತದೆ. ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ಮಹಿಳೆಯರು ಯಾವಾಗ ರಿವಾರ್ಡ್ ಪಡೆಯುತ್ತಾರೆ ಮತ್ತು ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯಬೇಕು.
60 ವಯಸ್ಸಿಗೆ ಗೃಹೋದ್ಯಮದಲ್ಲಿ ಯಶಸ್ಸು ಕಂಡ ನಾಗಮಣಿ
ತುರ್ತು ಪರಿಸ್ಥಿತಿಯಲ್ಲಿ ಸಾಲ : ನೀವು ತುರ್ತು ಪರಿಸ್ಥಿತಿಯಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಸೌಲಭ್ಯ ಕೂಡ ಪಡೆಯಬಹುದು. ಆದ್ರೆ ಕ್ರೆಡಿಟ್ ಕಾರ್ಡ್ ನಲ್ಲಿ ಸಾಲ ಪಡೆಯುವುದು ಒಳ್ಳೆಯ ಆಯ್ಕೆಯಲ್ಲ ಎನ್ನುತ್ತಾರೆ ತಜ್ಞರು. ಯಾಕೆಂದ್ರೆ ಸರಿಯಾದ ಸಮಯದಲ್ಲಿ ಬಡ್ಡಿ ಪಾವತಿ ಹೊಣೆ ನಿಮ್ಮ ಮೇಲಿರುತ್ತದೆ.
ಆನ್ಲೈನ್ ಕಂಪನಿಗಳಿಂದ ಆಫರ್ : ನೀವು ಆನ್ಲೈನ್ ಖರೀದಿ ಮಾಡ್ತಿದ್ದರೆ ನಿಮ್ಮ ಕ್ರೆಡಿಟ್ ಬಳಕೆ ಮಾಡೋದು ಒಳ್ಳೆಯದು. ಅನೇಕ ಆನ್ಲೈನ್ ಕಂಪನಿಗಳು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ವಿಶೇಷ ರಿಯಾಯಿತಿ ನೀಡುತ್ತವೆ. ಹಾಗಾಗಿ ಇದ್ರ ಲಾಭವನ್ನು ನೀವು ಪಡೆಯಬಹುದು.
ಕ್ರೆಡಿಟ್ ಸ್ಕೋರ್ ಗೆ ಸಹಕಾರಿ : ಸಿಬಿಲ್ ಸ್ಕೋರ್ ಬಗ್ಗೆ ನೀವು ಕೇಳಿರಬಹುದು. ಈ ಸ್ಕೋರ್ ನಿಮಗೆ ಸಾಲ ಪಡೆಯಲು ನೆರವಾಗುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದೆ ಎಂದಾದ್ರೆ ನಿಮಗೆ ಸಾಲ ಸಿಗೋದಿಲ್ಲ. ನೀವು ಉತ್ತಮ ರೀತಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡ್ತಿದ್ದರೆ ಹಾಗೂ ಹೆಚ್ಚೆಚ್ಚು ಸ್ಕೋರ್ ಪಡೆಯುತ್ತಿದ್ದರೆ ಅದು ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿಸಲು ನೆರವಾಗುತ್ತದೆ.
Pink Tax ಅಂದ್ರೇನು? ಮಹಿಳೆಯರು ಯಾಕೆ ನೀಡ್ಬೇಕು ಗೊತ್ತಾ?
ಕ್ರೆಡಿಟ್ ಕಾರ್ಡ್ ಪಡೆಯುವ ವೇಳೆ ಬಡ್ಡಿ ರಹಿತ ಅವಧಿ ಇದೆಯೇ ಎಂಬುದನ್ನು ನೀವು ಚೆಕ್ ಮಾಡಬೇಕು. ಹಾಗೆ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಬೇಕು.