ಕೋವಿಡ್ ಪರಿಣಾಮ: ಶಾಲೆಗಳ ಆದಾಯ ಶೇ.20-50 ಕುಸಿತ!
* ಶೇ.55ರಷ್ಟು ಶಿಕ್ಷಕರಿಗೆ ವೇತನ ಕಡಿತ: ಸಿಎಸ್‌ಎಫ್ ಅಧ್ಯಯನ ವರದಿ
* ಕೋವಿಡ್ ಪರಿಣಾಮ: ಶಾಲೆಗಳ ಆದಾಯ ಶೇ.20-50 ಕುಸಿತ
* 20 ರಾಜ್ಯಗಳ ಶಿಕ್ಷಕರು ಪೋಷಕರ ಅಭಿಪ್ರಾಯ ಸಂಗ್ರಹಿಸಿ ಅಧ್ಯಯನ
ನವದೆಹಲಿ(ಜು.26): ಕೋವಿಡ್‌ನಿಂದಾಗಿ ಸುದೀರ್ಘ ಅವಧಿಗೆ ಶಾಲೆಗಳು ಮುಚ್ಚಲ್ಪಟ್ಟಕಾರಣ, ದೇಶಾದ್ಯಂತ ಬಹುತೇಕ ಖಾಸಗಿ ಶಾಲೆಗಳು ಶೇ.20-50ರವರೆಗೆ ಆದಾಯ ಕೊರತೆ ಎದುರಿಸಿವೆ. ಇದರ ಪರಿಣಾಮ ಶಿಕ್ಷಕರ ಮೇಲೂ ಉಂಟಾಗಿದ್ದು, ಹಲವು ಶಿಕ್ಷಕರ ವೇತನವು ಕಡಿತಗೊಂಡಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಸೆಂಟ್ರಲ್ ಸ್ವೇ್ಕರ್ ಫೌಂಡೇಷನ್ ಎಂಬ ಎನ್‌ಜಿಒ 20 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಶಾಲೆ, ಶಿಕ್ಷಕರು ಮತ್ತು ಪೋಷಕರನ್ನು ಮಾತನಾಡಿಸಿ ವರದಿಯೊಂದನ್ನು ತಯಾರಿಸಿದೆ.
ವರದಿಯಲ್ಲಿನ ಪ್ರಮುಖ ಅಂಶಗಳು ಹೀಗಿವೆ.
- ಪ್ರಸಕ್ತ ಹಣಕಾಸು ವರ್ಷದಲ್ಲಿ ಮಕ್ಕಳ ದಾಖಲಾತಿಯಲ್ಲಿ ದೊಡ್ಡ ಪ್ರಮಾಣದ ಇಳಿಕೆಯಾಗಿದೆ ಎಂದು ಶೇ.55ರಷ್ಟುಶಾಲೆಗಳು ಹೇಳಿವೆ.
- ಶೇ.75ರಷ್ಟುಶಾಲೆಗಳು ಆರ್‌ಟಿಐ ಕಾಯ್ದೆಯಡಿ ಮಕ್ಕಳನ್ನು ನೋಂದಣಿ ಮಾಡಿಕೊಂಡಿದ್ದಕ್ಕೆ ಸರ್ಕಾರದಿಂದ ಬರಬೇಕಾದ ಹಣ ಪಾವತಿಯಲ್ಲಿ ವಿಳಂಬವಾಗಿದೆ ಎಂದಿವೆ.
- ವೆಚ್ಚ ಬಹುತೇಕ ಹಿಂದಿನಂತೇ ಇದ್ದರೂ ಬಹುತೇಕ ಶಾಲೆಗಳು ಶೇ.20-50ರಷ್ಟುಆದಾಯ ಇಳಿಕೆಯಾಗಿದೆ ಎಂದಿವೆ. ಇದು ಅನಿಯಮತಿವಾಗಿ ಶಾಲೆ ಮುಂದುವರೆಸಲು ಅಡ್ಡಿಯಾಗಿವೆ ಎಂದಿವೆ. ಈ ಪ್ರಮಾಣ ನಗರ ಪ್ರದೇಶಗಳಲ್ಲಿ ಹೆಚ್ಚಿದೆ.
- ಶಾಲೆಯ ಹಣಕಾಸು ವೆಚ್ಚವನ್ನು ನಿರ್ವಹಿಸಲು ಸಾಲ ಪಡೆಯುವ ಆಸಕ್ತಿ ಹೊಂದಿಲ್ಲ ಎಂದು ಶೇ.77ರಷ್ಟುಶಾಲೆಗಳು ಹೇಳಿವೆ. ಶೇ.3ರಷ್ಟುಶಾಲೆಗಳು ಮಾತ್ರವೇ ಸಾಲದ ವ್ಯವಸ್ಥೆ ಮಾಡಿಕೊಂಡಿವೆ. ಶೇ.5ರಷ್ಟುಶಾಲೆಗಳು ಸಾಲ ಪಡೆಯುವ ಹಂತದಲ್ಲಿವೆ ಎಂದಿವೆ.
- ಬಹುತೇಕ ಶಾಲೆಗಳು ಸರ್ಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಉದ್ದೇಶ ಹೊಂದಿವೆ.
- ಶೇ.55ರಷ್ಟುಶಿಕ್ಷಕರು ತಮ್ಮ ವೇತನದಲ್ಲಿ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
- ವೆಚ್ಚ ನಿರ್ವಹಿಸಲಾಗದೆ ಬಹುತೇಕ ಶಾಲೆಗಳು ಶಿಕ್ಷಕರಿಗೆ ಭಾಗಶಃ ವೇತನ ನೀಡಿವೆ. ಕಡಿಮೆ ಶುಲ್ಕದ ಶಾಲೆಗಳಲ್ಲಿ ಶೇ.65ರಷ್ಟುಶಿಕ್ಷಕತ ವೇತನವನ್ನು ತಡೆಹಿಡಿಯಲಾಗಿದೆ. ಹೆಚ್ಚಿನ ಶುಲ್ಕದ ಶಾಲೆಗಳಲ್ಲಿ ಈ ಪ್ರಮಾಣ ಶೇ.37ರಷ್ಟಿದೆ.
- ಶೇ.54ರಷ್ಟು ಶಿಕ್ಷಕರು ತಮಗೆ ವೇತನದ ಹೊರತಾಗಿ ಬೇರೆ ಆದಾಯದ ಮೂಲ ಇಲ್ಲ ಎಂದಿದ್ದಾರೆ. ಶೇ.30ರಷ್ಟುಶಿಕ್ಷಕರು ವೇತನದ ನಷ್ಟವನ್ನು ಖಾಸಗಿ ಟ್ಯೂಷನ್ ಮೊದಲಾದ ಸಂಗತಿಗಳ ಮೂಲಕ ತುಂಬಿಕೊಳ್ಳುವ ಯತ್ನ ಮಾಡುತ್ತಿರುವುದಾಗಿ ಹೇಳಿದ್ದಾರೆ.
- ಶೇ.55ರಷ್ಟುಶಿಕ್ಷಕರು, ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಶಾಲೆಗಳು ಯಥಾಸ್ಥಿತಿಗೆ ಮರಳುವ ವಿಶ್ವಾಸ ಹೊಂದಿದ್ದಾರೆ. ಈ ವಿಶ್ವಾಸ ನಗರ ಪ್ರದೇಶಗಳ ಶಿಕ್ಷಕರಲ್ಲಿ ಹೆಚ್ಚಿದ್ದರೆ, ಗ್ರಾಮೀಣ ಪ್ರದೇಶಗಳ ಶಿಕ್ಷಕರಲ್ಲಿ ಕಡಿಮೆ ಇದೆ.
- ಶೇ.70ರಷ್ಟುಶಿಕ್ಷಕರು, ಕೋವಿಡ್ ಹೊರತಾಗಿಯೂ ಶುಲ್ಕದ ಪ್ರಮಾಣ ಹಿಂದಿನಂತೆಯೇ ಇದೆ ಎಂದಿದ್ದಾರೆ. ಶೇ.50ರಷ್ಟುಶಿಕ್ಷಕರು ಮಾತ್ರ ಶುಲ್ಕ ಪಾವತಿಸಿದ್ದಾಗಿ ಹೇಳಿದ್ದಾರೆ.
- ಆನ್‌ಲೈನ್ ತರಗತಿಗಳಿಂದಾಗಿ ವೆಚ್ಚ ಹೆಚ್ಚಿದೆ ಎಂದು ಶೇ.25ರಷ್ಟುಪೋಷಕರು ಹೇಳಿದ್ದಾರೆ. ಶೇ.78ರಷ್ಟುಪೋಷಕರು ಹಿಂದಿನ ಶಾಲೆಗಳಲ್ಲೇ ಮಕ್ಕಳನ್ನು ಮುಂದುವರೆಸುವ ಸಾಮರ್ಥ್ಯ ಹೊಂದಿದ್ದಾಗಿ ಹೇಳಿದ್ದಾರೆ.