ಕೊರೋನಾ ವಿರುದ್ಧದ ಹೋರಾಟ/ 5 ಬಿನಿನಸ್ ಐಡಿಯಾ ಕೊಟ್ಟ ಪ್ರಧಾನಿ ನರೇಂದ್ರ ಮೋದಿ/ ಅಳವಡಿಕೆ ಮಾಡಿಕೊಳ್ಳಲೇಬೇಕು/ ವ್ಯಾಪಾರಿಗಳು ಮತ್ತು ಉದ್ದಿಮೆದಾರರಿಗೆ ಪ್ರಮುಖ

ನವದೆಹಲಿ(ಏ. 21) ಕೊರೋನಾ ವೈರಸ್ ನಿಂದ ಇಡೀ ದೇಶವೇ ಸ್ಥಬ್ದವಾಗಿದೆ. ಉದ್ದಿಮೆಗಳ ಮೇಲೆಯೂ ಪರಿಣಾಮ ಬೀರಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 5 ಬಿಜಿನಸ್ ಐಡಿಯಾ ಕೊಟ್ಟಿದ್ದಾರೆ.

ಟ್ವೀಟ್ ಸಹ ಮಾಡಿರುವ ಮೋದಿ ದೇಶದ ಯುವಜನತೆಯ ಪಾತ್ರ ಈ ಹೋರಾಟದಲ್ಲಿ ಬಹಳ ಪ್ರಮುಖ ಎಂದು ಹೇಳಿದ್ದಾರೆ. ಹಾಗಾದರೆ ಮೋದಿ ಹೇಳಿರುವ ಆ 5 ಅಂಶಗಳು ಯಾವವು?

ಅಮೆರಿಕ ತೈಲ ಮಾರುಕಟ್ಟೆಯಲ್ಲಿ ಕೇಳರಿಯದ ಕುಸಿತ

ಅಡಾಪ್ಟಬಿಲಿಟಿ- ಹೊಂದಿಕೊಳ್ಳುವಿಕೆ:
ಇದು ಹೊಂದಿಕೊಳ್ಳಲೇಬೇಕಾದ ಸಮಯ. ಡಿಜಿಟಲ್ ಪೇಮೆಂಟ್ ಇದಕ್ಕೆ ಒಂದು ಉದಾಹರಣೆ. ಅಂಗಡಿ ಮಾಲೀಕರು ಮತ್ತು ವರ್ತಕರು ಈ ಡಿಜಿಟಲ್ ಪೇಮೆಂಟ್ ಮೂಲಕ ವ್ಯವಹಾರ ನಡೆಸಬಹುದು.

ಇನ್ನೊಂದು ಉದಾಹರಣೆ ಎಂದರೆ ಟೆಲಿ ಮೆಡಿಸಿನ್. ಆಸ್ಪತ್ರೆಗೆ ಅಥವಾ ಕ್ಲಿನಿಕ್ ಗೆ ತೆರಳಲು ಅವಕಾಶ ಇಲ್ಲ ಎಂಬ ಸಂದರ್ಭ ಆನ್ ಲೈನ್ ಮೂಲಕವೇ ವೈದ್ಯರ ಸಂಪರ್ಕ ಸಾಧಿಸಿಕೊಳ್ಳಬಹುದು. ಇಡೀ ವಿಶ್ವಕ್ಕೆ ಈ ಟೆಲಿಮೆಡಿಸಿನ್ ಒಂದು ಅದ್ಭುತ ಮಾದರಿ.

ಚೀನಾಗೆ ಕೇಂದ್ರದ ಶಾಕ್; ಭಾರತದಲ್ಲಿ ಹೂಡಿಕೆಗೆ ಬ್ರೇಕ್

ಎಫಿಸಿಯನ್ಸಿ: ದಕ್ಷತೆ:
ನಮ್ಮ ದಕ್ಷತೆಯನ್ನು ಇಂಥ ಸಂದರ್ಭದಲ್ಲಿ ಮತ್ತೊಮ್ಮೆ ಸಾಬೀತುಮಾಡಬೇಕಾಗುತ್ತದೆ. ನಾವು ಎಷ್ಟು ಸಮಯವನ್ನು ಕಚೇರಿಯಲ್ಲಿ ಕಳೆಯುತ್ತೇವೆ ಎಂಬುದು ಮುಖ್ಯವಲ್ಲ, ಇರುವಷ್ಟು ಸಮಯ ಹೇಗೆ ದಕ್ಷತೆಯಿಂದ ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯ ಎಂದು ತಿಳಿಸಿದ್ದಾರೆ. ಎಲ್ಲೇ ಇದ್ದರೂ ಒಂದು ಸರಿಯಾದ ಟೈಮ್ ಪ್ರೇಮ್ ಹಾಕಿಕೊಳ್ಳಬೇಕಾಗುತ್ತದೆ.

ಆಪರ್ಚುನಿಟಿ; ಅವಕಾಶಗಳು
ಇಂಥ ಸಂದಿಗ್ಧ ಪರಿಸ್ಥಿತಿಗಳು ಎದುರಾದಾಗ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಆದರೆ ಕೊರೋನಾ ವೈರಸ್ ವಿಚಾರದಲ್ಲಿ ಇದು ಬೇರೆಯೇ ಆಗಿದೆ.

ಹೊಸದನ್ನು ಯೋಚನೆ ಮಾಡಬೇಕಾಗುತ್ತದೆ. ಅವಕಾಶಗಳು ಮಾರುಕಟ್ಟೆಯಲ್ಲಿ ಏನು ತೆರೆದುಕೊಂಡಿವೆ ಎಂಬುದನ್ನು ಗಮನಿಸಿ ಅದನ್ನು ಕ್ಯಾಚ್ ಮಾಡಿಕೊಳ್ಳಬೇಕಾಗುತ್ತದೆ.

ವಿಶ್ವವ್ಯಾಪಿ:
ಕೊರೋನಾ ಎಂಬುದು ವಿಶ್ವವ್ಯಾಪಿಯಾಗಿದೆ. ಜಾತಿ, ಮತ, ಭಾಷೆ ಯಾವುದೂ ಇದಕ್ಕೆ ಗೊತ್ತಿಲ್ಲ. ಹಾಗಾಗಿ ನಾವು ವಿಶ್ವಮಾನವರಾಗಿಯೇ ಯೋಚನೆ ಮಾಡಿ ಅದನ್ನು ನಮ್ಮ ಬಿಜಿನಸ್ ತಂತ್ರವನ್ನಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ."

ಇಂಗ್ಲಿಷ್ ನಲ್ಲಿಯೂ ಓದಿ