Asianet Suvarna News Asianet Suvarna News

2021ರಲ್ಲಿ 15 ಕೋಟಿ ಜನರಿಗೆ ಕಡು ಬಡತನ: ಬೆಚ್ಚಿ ಬೀಳಿಸಿದೆ ವರದಿ!

ಕೊರೋನಾ ವೈರಸ್‌ನ ಪರಿಣಾಮವಾಗಿ 2021ರ ವೇಳೆಗೆ ವಿಶ್ವದ 15 ಕೋಟಿ ಜನರು ತೀವ್ರ ಬಡತನಕ್ಕೆ ಸಿಲುಕುವ ಅಪಾಯ| ಬೆಚ್ಚಿ ಬೀಳಿಸಿದೆ ವಿಶ್ವಬ್ಯಾಂಕ್‌ ವರದಿ

COVID 19 may push 15 cr into extreme poverty by 2021 end World Bank pod
Author
Bangalore, First Published Oct 8, 2020, 3:11 PM IST
  • Facebook
  • Twitter
  • Whatsapp

 

ವಾಷಿಂಗ್ಟನ್(ಅ.08)‌: ಕೊರೋನಾ ವೈರಸ್‌ನ ಪರಿಣಾಮವಾಗಿ 2021ರ ವೇಳೆಗೆ ವಿಶ್ವದ 15 ಕೋಟಿ ಜನರು ತೀವ್ರ ಬಡತನಕ್ಕೆ ಸಿಲುಕುವ ಅಪಾಯವಿದೆ ಎಂದು ವಿಶ್ವಬ್ಯಾಂಕ್‌ ವರದಿಯೊಂದು ಎಚ್ಚರಿಕೆ ನೀಡಿದೆ.

ಕೊರೋನಾ ಮಹಾಮಾರಿಯಿಂದಾಗಿ ಈ ವರ್ಷ 8.8 ಕೋಟಿ ಮಂದಿ ಬಡತನಕ್ಕೆ ಸಿಲುಕಲಿದ್ದು, ಒಟ್ಟು 11.5 ಕೋಟಿ ಮಂದಿ ಕಡು ಬಡತನವನ್ನು ಎದುರಿಸಲಿದ್ದಾರೆ. ಆರ್ಥಿಕ ಹಿಂಜರಿಕೆಯ ಗಂಭೀರತೆಗೆ ಅನುಗುಣವಾಗಿ ಇವರ ಸಂಖ್ಯೆ 2021ರ ವೇಳೆಗೆ 15 ಕೋಟಿಗೆ ಏರಿಕೆ ಆಗುವ ಸಾಧ್ಯತೆಗಳಿವೆ. ಹೀಗಾಗಿ ಕೊರೋನಾ ಮುಗಿದ ಬಳಿಕ ವಿಭಿನ್ನ ಆರ್ಥಿಕತೆಗೆ ದೇಶಗಳು ಸಿದ್ಧವಾಗಬೇಕಿದೆ.

ಹೊಸ ಉದ್ದಿಮೆ ಹಾಗೂ ವಲಯಗಳಿಗೆ ಬಂಡವಾಳ ಹೂಡಿಕೆ, ಕಾರ್ಮಿಕರ ಬಳಕೆ, ಕೌಶಲ್ಯ ಮತ್ತು ನಾವೀನ್ಯತೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ವಿಶ್ವ ಬ್ಯಾಂಕಿನ ವರದಿ ತಿಳಿಸಿದೆ.

ಒಂದು ವೇಳೆ ವಿಶ್ವವನ್ನು ಕೊರೋನಾ ವೈರಸ್‌ ಆವರಿಸಿಕೊಳ್ಳದೇ ಇದ್ದಿದ್ದರೆ ಬಡತನ ಪ್ರಮಾಣ 2020ರಲ್ಲಿ ಶೇ.7.9ಕ್ಕೆ ಇಳಿಯುವ ನಿರೀಕ್ಷೆ ಇತ್ತು. ಆದರೆ, ಕೊರೋನಾ ಮಹಾಮಾರಿ ಹಾಗೂ ಜಾಗತಿಕ ಆರ್ಥಿಕ ಹಿಂಜರಿಕೆಯಿಂದಾಗಿ ವಿಶ್ವದ ಜನಸಂಖ್ಯೆಯ ಶೇ.1.4ರಷ್ಟುಮಂದಿ ಬಡತನಕ್ಕೆ ತಳ್ಳಲ್ಪಡಲಿದ್ದಾರೆ. ಅದರಲ್ಲೂ ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಈಗಾಗಲೇ ಬಡವರು ಎನಿಸಿಕೊಂಡವರು ಇನ್ನಷ್ಟುಕಡು ಬಡತನಕ್ಕೆ ಸಿಲುಕಲಿದ್ದಾರೆ. ಹೀಗಾಗಿ 2030ರ ವೇಳೆಗೆ ವಿಶ್ವವನ್ನು ಬಡತನದಿಂದ ಮುಕ್ತಗೊಳಿಸುವ ಗುರಿ ಸಾಧಿಸುವುದು ಅಸಾಧ್ಯ ಎಂದು ವರದಿ ತಿಳಿಸಿದೆ.

Follow Us:
Download App:
  • android
  • ios