Asianet Suvarna News Asianet Suvarna News

ಉಜ್ವಲ ಯೋಜನೆ: 3 ತಿಂಗಳು ಉಚಿತ LPG ಗ್ಯಾಸ್‌!

ಫಲಾನುಭವಿಗಳಿಗೆ 3 ತಿಂಗಳ ಅವಧಿಯವರೆಗೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ವಿತರಣೆ| ಗ್ರಾಹಕರ ಸುರಕ್ಷತೆಯ ಹಿತದೃಷ್ಟಿಯಿಂದ ಉಜ್ವಲ ಯೋಜನೆಯಡಿ ಫಲಾನುಭವಿಗಳ ಮನೆಗಳಿಗೆ ಉಚಿತವಾಗಿ ಸಿಲಿಂಡರ್‌| 

Distribution of Free LPG Gas for Three Months
Author
Bengaluru, First Published Apr 4, 2020, 3:00 PM IST

ದೊಡ್ಡಬಳ್ಳಾಪುರ(ಏ.04): ಕೊರೋನಾ ವೈರಾಣು ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಉಜ್ವಲ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಫಲಾನುಭವಿಗಳಿಗೆ 3 ತಿಂಗಳ ಅವಧಿಯವರೆಗೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗಳನ್ನು ಉಚಿತವಾಗಿ ಪೂರೈಸಲಿದೆ.

ಜಿಲ್ಲೆಯಲ್ಲಿ ಉಜ್ವಲ ಯೋಜನೆಯಡಿ ಒಟ್ಟು 41,900 ಫಲಾನುಭವಿಗಳಿಗೆ ಏಪ್ರಿಲ್‌, ಮೇ ಮತ್ತು ಜೂನ್‌ ತಿಂಗಳವರೆಗೆ ಉಚಿತ ಎಲ್‌ಪಿಜಿ ಸಿಲಿಂಡರ್‌ ಅನ್ನು ಪೂರೈಸಲಾಗುವುದು ಎಂದು ಭಾರತ್‌ ಪೆಟ್ರೋಲಿಯಂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೋಡಲ್‌ ಅಧಿಕಾರಿ ನಂದಕಿಶೋರ್‌ ತಿಳಿಸಿದ್ದಾರೆ.

'ಮೋಂಬತ್ತಿ ಬತ್ತಿ ತರೋಕೆ ಅಂಗಡಿಗೆ ಹೋದ್ರೆ ಪೊಲೀಸರಿಂದ ಒದೆ ಬೀಳುತ್ತೆ'

ಗ್ರಾಹಕರ ಸುರಕ್ಷತೆಯ ಹಿತದೃಷ್ಟಿಯಿಂದ ಉಜ್ವಲ ಯೋಜನೆಯಡಿ ಫಲಾನುಭವಿಗಳ ಮನೆಗಳಿಗೆ ಉಚಿತವಾಗಿ ಸಿಲಿಂಡರ್‌ ತಲುಪಿಸಲಾಗುತ್ತಿದೆ. ಈಗಾಗಲೇ ಎಲ್ಲಾ ಗ್ರಾಹಕರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಾಗಿದೆ. ಎಲ್‌ಪಿಜಿ ಅಗತ್ಯ ಸರಕುಗಳ ಅಡಿಯಲ್ಲಿ ಬರುವುದರಿಂದ ಸಿಲಿಂಡರ್‌ ಸರಬರಾಜನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪೂರೈಸಲು ಎಲ್ಲಾ ಎಲ್‌ಪಿಜಿ ಸಿಲಿಂಡರ್‌ ಕಂಪನಿಗಳು ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಇನ್ನುಳಿದ ಗ್ರಾಹಕರು ಆನ್‌ಲೈನ್‌ ಮೂಲಕ ಸಿಲಿಂಡರ್‌ ಅನ್ನು ಕಾಯ್ದಿರಿಸುವುದರ ಜೊತೆಗೆ ನಗದು ವ್ಯವಹಾರವನ್ನು ತಪ್ಪಿಸಲು ಆನ್‌ಲೈನ್‌ ಮೂಲಕ ಪಾವತಿಸುವಂತೆ ಅವರು ಕೋರಿದ್ದಾರೆ.
 

Follow Us:
Download App:
  • android
  • ios