LPG Cylinder Price:ಗ್ರಾಹಕರಿಗೆ ಗುಡ್ ನ್ಯೂಸ್; ಎಲ್ ಪಿಜಿ ಸಿಲಿಂಡರ್ ದರ 135ರೂ. ಇಳಿಕೆ

*ಜೂನ್ 1ರಿಂದಲೇ ಜಾರಿಗೆ ಬರುವಂತೆ 19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಇಳಿಕೆ
*ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಿಲ್ಲ
*ಕಳೆದ ತಿಂಗಳು ಎರಡು ಬಾರಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ

Commercial LPG cylinder price cut by Rs 135 Check revised rates

ನವದೆಹಲಿ (ಜೂ.1): ತಿಂಗಳ ಮೊದಲ ದಿನವೇ ಎಲ್ ಪಿಜಿ ಸಿಲಿಂಡರ್ ಬಳಕೆದಾರರಿಗೆ ಸ್ವಲ್ಪ ಮಟ್ಟಿನ ನಿರಾಳತೆ ಸಿಕ್ಕಿದೆ. ಜೂನ್ 1ರಿಂದಲೇ ಜಾರಿಗೆ ಬರುವಂತೆ 19 ಕೆಜಿ ಎಲ್ ಪಿಜಿ (LPG) ಕಮರ್ಷಿಯಲ್ ಸಿಲಿಂಡರ್ (commercial cylinder) ಬೆಲೆಯಲ್ಲಿ (Pice) ತೈಲ ಮಾರ್ಕೆಟಿಂಗ್ ಕಂಪೆನಿಗಳು (Oil Marketing companies) ಇಳಿಕೆ ಮಾಡಿವೆ. ಆದರೆ, ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 

ಬುಧವಾರದಿಂದಲೇ (ಜೂ.1) ಜಾರಿಗೆ ಬರುವಂತೆ 19 ಕೆಜಿ ಎಲ್ ಪಿಜಿ (LPG) ಕಮರ್ಷಿಯಲ್ ಸಿಲಿಂಡರ್ (commercial cylinder) ಬೆಲೆಯಲ್ಲಿ 135ರೂ. ಇಳಿಕೆ ಮಾಡಲಾಗಿದೆ. ಇದ್ರಿಂದ 19 ಕೆಜಿ ಎಲ್ ಪಿಜಿ (LPG) ಕಮರ್ಷಿಯಲ್ ಪ್ರತಿ ಸಿಲಿಂಡರ್ ಬೆಲೆ ಈಗ ದೆಹಲಿಯಲ್ಲಿ 2,219 ರೂ.ಗೆ ಇಳಿಕೆಯಾಗಿದೆ. ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ  2,354 ರೂ. ಇತ್ತು. ಇನ್ನು ಕೋಲ್ಕತ್ತದಲ್ಲಿ ಈ ಹಿಂದೆ ಪ್ರತಿ ಸಿಲಿಂಡರ್ ಗೆ 2,454ರೂ. ಇತ್ತು,ಇಂದಿನಿಂದ  2,322 ರೂ.ಗೆ ಲಭಿಸಲಿದೆ. ಮುಂಬೈಯಲ್ಲಿ 2,306 ರೂ.ನಿಂದ 2,171.50ರೂ.ಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ 2,507 ರೂ.ನಿಂದ  2,373 ರೂ.ಗೆ ತಗ್ಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನರಿಗೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಇಳಿಕೆಯಿಂದ ಸ್ವಲ್ಪ ಮಟ್ಟಿನ ನೆಮ್ಮದಿ ಸಿಕ್ಕಿದೆ. 

LPG Cylinder Subsidy:2 ವರ್ಷದ ಬಳಿಕ ಮತ್ತೆ ಸಬ್ಸಿಡಿ ಭಾಗ್ಯ; ಯಾರಿಗೆಲ್ಲ ಸಿಗಲಿದೆ ಇದರ ಪ್ರಯೋಜನ? ಇಲ್ಲಿದೆ ಮಾಹಿತಿ

ಮೇನಲ್ಲಿ ಎರಡು ಬಾರಿ ಹೆಚ್ಚಳ
ದೇಶಾದ್ಯಂತ ಮೇ 19ರಂದು  ಗೃಹ ಬಳಕೆ (domestic) ಹಾಗೂ ಕಮರ್ಷಿಯಲ್ (commercial) ಎರಡೂ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿತ್ತು.  14 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ದರವನ್ನು 3.50 ರೂ. ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು 8ರೂ. ಏರಿಕೆ ಮಾಡಲಾಗಿತ್ತು. ಮೇ ತಿಂಗಳಲ್ಲಿ ಎರಡು ಬಾರಿ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿತ್ತು. ಇದಕ್ಕೂ ಮುನ್ನ ಮೇ 7ರಂದು ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ  50ರೂ. ಏರಿಕೆ ಮಾಡಲಾಗಿತ್ತು. ಇನ್ನು  ಮೇ 1ರಂದು 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 104 ರೂ.ಗಳಷ್ಟು ಹೆಚ್ಚಿಸಲಾಗಿತ್ತು.

ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರ
ಕಳೆದ ತಿಂಗಳು ಎರಡು ಬಾರಿ ಏರಿಕೆ ಕಂಡಿದ್ದ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ (domestic LPG cylinder) ಬೆಲೆಯಲ್ಲಿ ಮಾತ್ರ ಇಂದು ಯಾವುದೇ ಬದಲಾವಣೆಯಾಗಿಲ್ಲ. ಪ್ರಸ್ತುತ ರಾಜ್ಯದಲ್ಲಿ 14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 1,002 ರೂ.ಇದೆ. ದೇಶಾದ್ಯಂತ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ದರ ಸಾವಿರದ ಗಡಿ ದಾಟಿದೆ. ಆದರೆ, ಕೇಂದ್ರ ಸರ್ಕಾರ ಇತ್ತೀಚೆಗೆ ಬಡ ವರ್ಗದ ಜನರಿಗೆ ಎಲ್ ಪಿಜಿ (LPG) ಸಬ್ಸಿಡಿಯನ್ನು (Subsidy) ಘೋಷಿಸಿದೆ.  ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (Pradhan Mantri Ujjwala Yojana) 9 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ಎಲ್ ಪಿಜಿ ಸಿಲಿಂಡರ್  (12 ಸಿಲಿಂಡರ್ ತನಕ) ಮೇಲೆ 200ರೂ. ಸಬ್ಸಿಡಿ (Subsidy) ಘೋಷಿಸಲಾಗಿದೆ. ಇದ್ರಿಂದ ಗೃಹ ಬಳಕೆ ಸಿಲಿಂಡರ್ ಕಡಿಮೆ ದರದಲ್ಲಿ ಬಡ ವರ್ಗದವರಿಗೆ ಲಭ್ಯವಾಗಲಿದೆ.

ಕಡಿಮೆ ಬೆಲೆಯಲ್ಲಿ ತೈಲ ಖರೀದಿಯ ಬಳಿಕ, ರಷ್ಯಾದ ಜೊತೆ ಭಾರತದ ಮತ್ತೊಂದು ಬೃಹತ್ ಒಪ್ಪಂದ!

ಕಳೆದ ತಿಂಗಳು ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಸರ್ಕಾರ ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ 8ರೂ. ಹಾಗೂ ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ 6 ರೂ. ಕಡಿತಗೊಳಿಸಿತ್ತು. 

Latest Videos
Follow Us:
Download App:
  • android
  • ios