ಕಾಫಿ ಬೆಳೆ ಕುಸಿತ ಮತ್ತು ಹಾಲಿನ ಬೆಲೆ ಏರಿಕೆಯಿಂದಾಗಿ ಕಾಫಿ ಪುಡಿ ದರ 2 ತಿಂಗಳಲ್ಲಿ ಕೆಜಿಗೆ ₹200 ರಷ್ಟು ಏರಿಕೆಯಾಗಲಿದೆ. ಇದರಿಂದಾಗಿ ಒಂದು ಕಪ್ ಕಾಫಿ ಬೆಲೆ ₹5 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

  • ಹೋಟೆಲಲ್ಲಿ ಕಾಫಿ ₹5 ದುಬಾರಿ? 2 ತಿಂಗಳಲ್ಲಿ ಕೇಜಿ ಕಾಫಿ ₹200 ಏರಿಕೆ: ಇಂಡಿಯನ್ ಕಾಫಿ ರೋಸ್ಟರ್ಸ್ 
  • ತುಟಿ ಸುಡಲಿದೆ ಕಾಫಿ: ಎರಡೇ ತಿಂಗಳಲ್ಲಿ ಕೇಜಿಗೆ 200 ರೂ ಏರಿಕೆ
  • ಕಾಫಿ ಹುಡಿ ದರ ಏರಿಕೆ ಹಿನ್ನೆಲೆ: ಕಾಫಿ ಬೆಲೆ 5 ರೂ ಏರಿಕೆಗೆ ಹೊಟೇಲ್‌ಗಳ ಚಿಂತನೆ

ಬೆಂಗಳೂರು: ಕಾಫಿ ಬೆಳೆಯುವವರಿಗೆ ಖುಷಿಯ ಆದರೆ ಕಾಫಿ ಪ್ರಿಯರಿಗೆ ಬೇಸರದ ಸುದ್ದಿಯೊಂದಿದೆ. ಮುಂದಿನ ಒಂದು ತಿಂಗಳಲ್ಲಿ ಒಂದು ಕಪ್ ಕಾಫಿ ದರ 5 ರೂ.ವರೆಗೆ ಹೆಚ್ಚಾದರೂ ಅಚ್ಚರಿ ಇಲ್ಲ! ಶೀಘ್ರ ಕಾಫಿ ಪುಡಿ ದರ ಕೆಜಿಗೆ ₹200 ಏರಿಕೆಯಾಗಿ ಒಟ್ಟಾರೆ ಕೇಜಿಗೆ ₹800-850 80 ₹1,000- ₹1,100 ಏರಿಕೆಯಾಗುತ್ತಿದೆ. ಜೊತೆಗೆ ಹಾಲಿನ ಬೆಲೆಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಕಾಫಿ ಪೇಯ ತುಟಿ ಸುಡಲಿದೆ. 

ಚಿಕ್ಕಮಗಳೂರು ಸೇರಿ ಕಾಫಿ ಬೆಳೆವ ಪ್ರದೇಶದಲ್ಲಿ ಬೆಳೆ ಆದರಲ್ಲೂ ಅರೇಬಿಕಾ ಕಾಫಿ ಫಸಲು ಗಣನೀಯವಾಗಿ ಕುಸಿದಿದೆ. ರೊಬಸ್ಟಾ ಇಳುವರಿಯೂ ಕಡಿಮೆಯಾಗಿದ್ದು, ಕಾಫಿ ಸಾರ್ವಕಾಲಿಕ ದರ ಪಡೆದಿದೆ. ಹೀಗಾಗಿ ರೋಸ್ಟರ್‌ಗಳು ಮಾರಾಟ ಮಾಡುವ ಹುರಿದ ಕಾಫಿ ಪುಡಿ ಬೆಲೆಯನ್ನು ಫೆಬ್ರವರಿ ಅಂತ್ಯದ ವೇಳೆಗೆ ಪ್ರತಿ ಕೇಜಿಗೆ 100 ಹಾಗೂ ಮಾರ್ಚ್ ಅಂತ್ಯದ ವೇಳೆಗೆ ಪುನಃ 100 ಹೆಚ್ಚಳ ಮಾಡುವುದಾಗಿ ತಿಳಿಸಿದ್ದಾರೆ. 

ಹುರಿದ ಕಾಫಿ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿ ಹೇಳುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಎರಡನೇ ಬಾರಿ ಬೆಲೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿನ ಏರಿಳಿತವೂ ಇದಕ್ಕೆ ಕಾರಣವಾಗಿದೆ ಎಂದು ಕಾಫಿ ಮಂಡಳಿಯ ಮೂಲಗಳು ತಿಳಿಸಿವೆ. 

ಹೀಗಾಗಿ ಕಾಫಿ ದರ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ. ಎಷ್ಟು ಮತ್ತು ಯಾವಾಗಿಂದ ಎಂಬುದು ಇನ್ನೂ ತೀರ್ಮಾನವಾ ಗಿಲ್ಲ. ದರ ಏರಿದರೂ ತಾತ್ಕಾಲಿಕವಾಗಿರಲಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಪಿ.ಸಿ.ರಾವ್ ತಿಳಿಸಿದ್ದಾರೆ.