Asianet Suvarna News Asianet Suvarna News

ನಾವು ಬೇಕಾ, ಇರಾನ್ ಬೇಕಾ ?: ಟ್ರಂಪ್ ಪ್ರಶ್ನೆ ಭಾರತಕ್ಕೂನಾ?

ಮೂಡಿ ಟ್ರಂಪ್ ರಿಂದ ಮತ್ತೊಂದು ಆಘಾತ! ಇರಾನ್ ಜೊತೆ ವ್ಯವಹರಿಸೋದಕ್ಕೆ ಗರಂ! ಇರಾನ್ ಬೇಕೆಂದರೆ ಅಮೆರಿಕ ಮರೆತು ಬಿಡಿ! ಇರಾನ್ ವಾಣಿಜ್ಯ ಬೆಳವಣಿಗೆಗೆ ಗರಂ

Choose Iran or America: Donald Trump Warns Countries
Author
Bengaluru, First Published Aug 7, 2018, 5:58 PM IST

ವಾಷಿಂಗ್ಟನ್(ಆ.7): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬಹಳ ಮೂಡಿ ಅನ್ಸುತ್ತೆ. ಕಾರಣ ಕೆಲವೇ ದಿನಗಳ ಹಿಂದೆ ಇರಾನ್ ಜೊತೆ ವ್ಯಹರಿಸಲು ತನ್ನ ಅಭ್ಯಂತರವಿಲ್ಲ ಎಂದಿದ್ದ ಟ್ರಂಪ್, ಇದೀಗ ಒಂದೋ ಇರಾನ್ ಜೊತೆ ವ್ಯವಹರಿಸಿ ಅಥವಾ ಅಮೆರಿಕದೊಡನೆ ವ್ಯವಹರಿಸಿ ಎಂದು ಎಲ್ಲಾ ರಾಷ್ಟ್ರಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.

ಇರಾನ್ ಮೇಲೆ ಅಮೆರಿಕದ ಕಠಿಣ ನಿರ್ಬಂಧಗಳನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ಇರಾನ್ ತನ್ನ ಅಣುಶಕ್ತಿ ಯೋಜನೆಯನ್ನು ಜಗತ್ತಿಗೆ ತೆರೆದಿಡುವವರೆಗೂ ಈ ನಿರ್ಬಂಧ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಇರಾನ್ ಜೊತೆ ವ್ಯವಹರಿಸುವ ದೇಶಗಳಿಗೆ ಕಠಿಣ ಸಂದೇಶ ರವಾನಿಸಿರುವ ಟ್ರಂಪ್, ಇರಾನ್ ಜೊತೆ ವ್ಯವಹರಿಸುವವರು ಅಮೆರಿಕದೊಡನೆ ವ್ಯವಹರಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿಗೆ ಇರಾನ್ ಮೇಲಿನ ನಿರ್ಬಂಧ ಸಡಿಲಗೊಳಿಸಿದ ಬಳಿಕ, ಜಾಗತಿಕವಾಗಿ ಇರಾನ್ ವಾಣಿಜ್ಯ ಬೆಳವಣಿಗೆ ಶೇ. ೨೦ ರಷ್ಟು ಏರಿಕೆಯಾಗಿದ್ದು, ಭಾರತ ಕೂಡ ಇರಾನ್ ನಿಂದ ಕಚ್ಛಾ ತೈಲ ಆಮದನ್ನು ಹೆಚ್ಚಿಸಿದೆ. ಆದರೆ ಟ್ರಂಪ್ ಅವರ ಈ ಕಠಿಣ ನಿರ್ಧಾರ ಮತ್ತೆ ಜಾಗತಿಕ ವಾಣಿಜ್ಯ ಸಮರಕ್ಕೆ ಮುನ್ನುಡಿ ಬರೆದಿದ್ದು, ಭಾರತದ ಮೇಲೆ ದುಷ್ಪರಿಣಾಮ ಬೀರಿದರೆ ಏನು ಎಂಬುದನ್ನು ಕಾಲವೇ ನಿರ್ಧರಿಸಬೇಕು.

Follow Us:
Download App:
  • android
  • ios