Asianet Suvarna News Asianet Suvarna News

ಇದು ಮುಗಿಯದ ಯುದ್ಧ: ಅಮೆರಿಕದ ವಸ್ತುಗಳಿಗೆ ಟ್ಯಾಕ್ಸ್ ಹೆಚ್ಚಳ!

ಈ ಯುದ್ಧಕ್ಕೆ ಆದಿ ಯಾವುದು, ಅಂತ್ಯ ಯಾವುದು ಎಂದೇ ತಿಳಿಯುತ್ತಿಲ್ಲ| ಪ್ರಬಲ ರಾಷ್ಟ್ರಗಳ ನಡುವಿನ ವ್ಯಾಪರ ಸಮರಕ್ಕೆ ವಿಶ್ವ ಹೈರಾಣು| ಅಮೆರಿಕದ ವಸ್ತುಗಳಿಗೆ ತೆರಿಗೆ ಹೆಚ್ಚಿಸಿದ ಚೀನಾ| 60 ಮಿಲಿಯನ್ ಮೌಲ್ಯದ 5 ಸಾವಿರ ವಸ್ತುಗಳ ಮೇಲಿನ ತೆರಿಗೆ ಹೆಚ್ಚಳ| ಶೇ. 5ರಿಂದ ಶೇ.25ರಷ್ಟು ತೆರಿಗೆ ಹೆಚ್ಚಳ ಮಾಡಿದ ಚೀನಾ| 

China Implies Higher Tariffs on American Goods
Author
Bengaluru, First Published May 14, 2019, 4:57 PM IST

ಬಿಜಿಂಗ್(ಮೇ.14): ಚೀನಾದಿಂದ ಆಮದಾಗುವ  ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದ ಅಮೆರಿಕಕ್ಕೆ, ಚೀನಾ ಕೂಡ ಸೂಕ್ತ ತಿರುಗೇಟು ನೀಡಿದೆ. 

ಅಮೆರಿಕ ಆರಂಭಿಸಿದ್ದ ವ್ಯಾಪಾರ ಯುದ್ಧಕ್ಕೆ ಸಜ್ಜಾಗಿ ನಿಂತಿರುವ ಚೀನಾ, ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.25ರಷ್ಟು ಹೆಚ್ಚಳ ಮಾಡಿದೆ.

ಈ ಹಿಂದೆ ಚೀನಾ ಮೂಲದ ಸುಮಾರು 300 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಅಮೆರಿಕ ತೆರಿಗೆ ಹೆಚ್ಚಳ ಮಾಡಿತ್ತು. ಅಮೆರಿಕ ಸರ್ಕಾರದ ಈ ನಡೆಗೆ ಅದೇ ಧಾಟಿಯಲ್ಲಿ ಉತ್ತರ ನೀಡಿರುವ ಚೀನಾ, ಅಮೆರಿದ ಸುಮಾರು 60 ಮಿಲಿಯನ್ ಮೌಲ್ಯದ 5 ಸಾವಿರ ವಸ್ತುಗಳ ಮೇಲಿನ ತೆರಿಗೆಯನ್ನು ಶೇ. 5ರಿಂದ ಶೇ.25ರಷ್ಟು ಹೆಚ್ಚಳ ಮಾಡಿದೆ.

ಅತ್ತ ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ಸಮರದ ಪರಿಣಾ ಬ್ರಿಟನ್ ಮಾರುಕಟ್ಟೆಯ ಮೇಲೂ ಬೀರಿದ್ದು, ಎಫ್ ಟಿಎಸ್ ಇ 100 ಅಂಕ ಕಳೆದುಕೊಂಡು, ಶಾಂಘೈ ಮಾರುಕಟ್ಟೆ ಸೂಚ್ಯಂಕ 1.21 ಅಂಕಗಳ ನಷ್ಟ ಅನುಭವಿಸಿದೆ.

Follow Us:
Download App:
  • android
  • ios