ಅಮೆರಿಕಕ್ಕೆ ಸಿಇಎ ವಾಪಸ್: ಜೇಟ್ಲಿ ಮಾಹಿತಿ..!

ಅಮೆರಿಕಕ್ಕೆ ಸಿಇಎ ವಾಪಸ್, ಜೇಟ್ಲಿ ಮಾಹಿತಿ

ಅಮೆರಿಕಕ್ಕೆ ವಾಪಸ್ಸಾಗಲಿರುವ ಅರವಿಂದ್ ಸುಬ್ರಹ್ಮಣಿಯನ್

ಅಕ್ಟೋಬರ್ ನಲ್ಲಿ ಹುದ್ದೆ ತ್ಯಜಿಸಲಿರುವ ಅರವಿಂದ್

ಫೇಸ್‌ಬುಕ್ ನಲ್ಲಿ ಜೇಟ್ಲಿ ಮಾಹಿತಿ

Chief Economic Advisor Arvind Subramanian Quits Months Before Term Ends

ನವದೆಹಲಿ(ಜೂ.20): ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಇದೇ ಅಕ್ಟೋಬರ್ ತಿಂಗಳಲ್ಲಿ ಅಮೆರಿಕಾಗೆ ವಾಪಸ್ ತೆರಳಲಿದ್ದಾರೆ. ಕೌಟುಂಬಿಕ ಕಾರಣಗಳಿಂದಾಗಿ ಅಮೆರಿಕಾಕ್ಕೆ ವಾಪಸ್ ತೆರಳಲು ಅರವಿಂದ್ ಸುಬ್ರಹ್ಮಣಿಯನ್ ನಿರ್ಧರಿಸಿದ್ದಾರೆ ಎಂದು ಫೇಸ್‌ಬುಕ್ ಪೋಸ್ಟ್ ಮೂಲಕ ಕೇಂದ್ರ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
 
2014 ರಲ್ಲಿ ರಘುರಾಮ್ ರಾಜನ್ ಆರ್‌ಬಿಐ ಗೌರ್ನರ್ ಆದ ನಂತರ ಮುಖ್ಯ ಆರ್ಥಿಕ ಸಲಹೆಗಾರರ ಹುದ್ದೆಗೆ ಅರವಿಂದ್ ಸುಬ್ರಹ್ಮಣಿಯನ್ ನೇಮಕಗೊಂಡಿದ್ದರು. ಈ ಕುರಿತು ಮಾಹಿತಿ ನೀಡಿರುವ ಅರುಣ್ ಜೇಟ್ಲಿ, ಅರವಿಂದ್ ಕೌಟುಂಬಿಕ ಕಾರಣ ನೀಡಿದ್ದರಿಂದ ಅವರ ನಿರ್ಧಾರವನ್ನು ಒಪ್ಪಲೇಬೇಕಾಯಿತು ಎಂದು ತಿಳಿಸಿದ್ದಾರೆ.

2014 ರ ಅಕ್ಟೋಬರ್ 16 ರಂದು ಅರವಿಂದ್ ಸುಬ್ರಹ್ಮಣಿಯನ್ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡಿದ್ದರು. ಮೂರು ವರ್ಷಗಳ ಅವಧಿ ಪೂರ್ಣಗೊಂಡ ನಂತರವೂ ಅವರನ್ನು ಮುಂದುವರೆಯುವಂತೆ ಮನವಿ ಮಾಡಿದ್ದಾಗಿ ಜೇಟ್ಲಿ ತಿಳಿಸಿದ್ದಾರೆ. ಅಲ್ಲದೇ ಅರವಿಂದ್ ಸುಬ್ರಹ್ಮಣಿಯನ್ ಅವರಿಗೆ ಶುಭ ಹಾರೈಸುವುದಾಗಿ ಜೇಟ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios