Asianet Suvarna News Asianet Suvarna News

ಕಾರ್ತಿಕ ಮಾಸದ ಎಫೆಕ್ಟ್: ಚಿಕನ್‌ ಬೆಲೆ ಕುಸಿತ..!

*  ಈ ಮಾಸದ ವೇಳೆ ಅನೇಕರು ಮಾಂಸ ಸೇವನೆ ಮಾಡಲ್ಲ
*  ಬೇಡಿಕೆ ಶೇ.30ರಷ್ಟು ಕುಸಿತ, ಬೆಲೆ 15 ಇಳಿಕೆ
*  90 ಕ್ಕಿಂತ ಕಡಿಮೆಯಾದಲ್ಲಿ ರೈತರಿಗೆ ತೊಂದರೆ

Chicken Prices Decline Due to Kartika Maasa in Bengaluru grg
Author
Bengaluru, First Published Nov 8, 2021, 6:38 AM IST
  • Facebook
  • Twitter
  • Whatsapp

ಬೆಂಗಳೂರು(ನ.08):  ಹಿಂದುಗಳಿಗೆ(Hindu) ಪವಿತ್ರವಾಗಿರುವ ಕಾರ್ತಿಕ(Kartika) ಮಾಸ ಪ್ರಾರಂಭವಾಗುತ್ತಿದ್ದಂತೆ ಮಾಂಸ(Meat) ಸೇವನೆ ಕಡಿಮೆಯಾಗುತ್ತಿರುವುದರಿಂದ ಕೋಳಿ ಮಾಂಸದ ಬೆಲೆ ಕುಸಿಯುತ್ತಿದೆ. ಆರಂಭದಲ್ಲೇ ಸುಮಾರು 15 ಬೆಲೆ ಕುಸಿದಿದೆ.

ನವೆಂಬರ್‌ 5ರಿಂದ ಕಾರ್ತಿಕ ಮಾಸ ಆರಂಭವಾಗಿದೆ. ಮಾಸಾಚರಣೆಯ 1 ತಿಂಗಳ ಅವಧಿಯಲ್ಲಿ ಹಬ್ಬ, ವ್ರತ, ವಿವಿಧ ಧಾರ್ಮಿಕ ಕಾರ್ಯಗಳು ಹೆಚ್ಚು ನಡೆಯುತ್ತದೆ. ಈ ಮಾಸದಲ್ಲಿ ಮಾಂಸಾಹಾರ ನಿಷಿದ್ಧ ಎಂದು ಹೇಳಲಾಗುತ್ತಿದೆ. ಹೀಗಾಗಿ ಜನರು ಒಂದು ತಿಂಗಳ ಕಾಲ ಮಾಂಸಾಹಾರ ತ್ಯಜಿಸುತ್ತಾರೆ. ಇದರ ಪರಿಣಾಮ ಬೆಂಗಳೂರು(Bengaluru) ನಗರದಲ್ಲಿ ಅಂದಾಜು ಶೇಕಡ 30ರಷ್ಟು ಕೋಳಿ ಮಾಂಸಕ್ಕೆ(Chicken Meat) ಬೇಡಿಕೆ ಕುಸಿದಿದೆ.

ಪ್ರತಿದಿನ ಚಿಕನ್ ತಿಂದ್ರೆ ಬಾಯಿಗೆ ರುಚಿ, ಆದ್ರೆ ಆರೋಗ್ಯಕ್ಕೆ ?

ರೈತರಿಗೆ ಸಂಕಷ್ಟ:

ಪ್ರತಿ ವರ್ಷ ಶ್ರಾವಣ ಮಾಸ ಮತ್ತು ಕಾರ್ತಿಕ ಮಾಸದಲ್ಲಿ ಶೇ.20ರಷ್ಟು ಕೋಳಿ ಮಾಂಸಕ್ಕೆ ಬೇಡಿಕೆ ಕುಸಿಯುವುದು ಸಾಮಾನ್ಯ. ಆದರೆ, ಪ್ರಸಕ್ತ ವರ್ಷ ಶೇ.30ರಷ್ಟು ಬೇಡಿಕೆ ಕುಸಿದಿದೆ. ಇದರಿಂದ ಕೋಳಿ ಮಾಂಸದ ಬೆಲೆ ಕಡಿಮೆಯಾಗಿದೆ ಎಂದು ವೆಂಕೋಬ್‌ ಚಿಕನ್‌(Vencobb Chicken) ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್‌.ಜಿ.ವೀರಣ್ಣ ಮಾಹಿತಿ ನೀಡಿದ್ದಾರೆ.

ಪ್ರತಿ ಕೆ.ಜಿ.ಕೋಳಿ ಮಾಂಸಕ್ಕೆ ಆಹಾರ(Food), ವಿದ್ಯುತ್‌(Electricity) ಸೌಲಭ್ಯ, ಕಾರ್ಮಿಕರ ವೆಚ್ಚ ಸೇರಿದಂತೆ ಸುಮಾರು .85 ವರೆಗೂ ವೆಚ್ಚವಾಗಲಿದೆ. ಕೋಳಿ ಮಾಂಸದ ಬೆಲೆ ಪ್ರತಿ ಕೆ.ಜಿಗೆ .95ಕ್ಕಿಂತ ಹೆಚ್ಚಿದ್ದಲ್ಲಿ ಮಾತ್ರ ರೈತರಿಗೆ(Farmers) ಲಾಭ ಇರಲಿದೆ. ಆದರೆ, ಬೆಲೆ .90 ಕ್ಕಿಂತ ಕಡಿಮೆಯಾದಲ್ಲಿ ನೇರವಾಗಿ ರೈತರಿಗೆ ತೊಂದರೆಯಾಗಲಿದೆ ಎಂದು ಹೇಳಿದರು.

ಕಾರ್ತಿಕ ಮಾಸ ಪ್ರಾರಂಭಕ್ಕೂ ಮುನ್ನ ಪ್ರತಿ ದಿನ 500 ಕೆ.ಜಿ. ಕೋಳಿ ಮಾಂಸ ಮಾರಾಟವಾಗುತ್ತಿತ್ತು. ಆದರೆ, ಅ.21ರ ಬಳಿಕ 300 ಕೆ.ಜಿ. ಮಾಂಸ ಮಾರಾಟವಾಗುತ್ತಿಲ್ಲ. ಭಾನುವಾರ ಬೆಳಗ್ಗೆಯಿಂದ ಅಂಗಡಿಯಲ್ಲಿ ಕುಳಿತರೂ ಹೆಚ್ಚಿನ ವ್ಯಾಪಾರ(Business) ಆಗಿಲ್ಲ. ಕಾರ್ತಿಕ ಮಾಸ ಆಚರಣೆ ಮಾಡುವವರು ಮಾತ್ರ ಮಾಂಸ ಖರೀದಿಸಲು ಬರುತ್ತಿಲ್ಲ ಎಂದು ವೈಯಾಲಿಕಾವಲ್‌ನ ಗೌಡ್ಸ್‌ ಚಿಕನ್‌ ಸೆಂಟರ್‌ನ ಲಕ್ಷ್ಮೀಪತಿ ಎಂಬುವರು ‘ಕನ್ನಡಪ್ರಭ’ಕ್ಕೆ(Kannada Prabha) ಹೇಳಿದರು.

ಚಿಕನ್ ಬಿರಿಯಾನಿಯಲ್ಲಿ ಲೆಗ್‌ ಪೀಸ್ ಇಲ್ಲ; ಸಚಿವರಿಗೆ ದೂರು ನೀಡಿದ ಗ್ರಾಹಕ!

ಹೆಚ್ಚು ಜನ ಅವಲಂಬನೆ

ರಾಜ್ಯದಲ್ಲಿ(Karnataka) ಕೊರೋನಾ(Coronavirus) ಸೋಂಕಿನಿಂದಾಗಿ ಸಾವಿರಾರು ಜನ ಉದ್ಯೋಗ(Job) ವಂಚಿತರಾಗಿದ್ದಾರೆ. ಪರಿಣಾಮ ತಮ್ಮ ಹಳ್ಳಿಗಳಿಗೆ(Village) ಹಿಂದಿರುಗಿದ್ದು, ಕೋಳಿ ಸಾಕಾಣಿಕೆ(Poultry farming) ಹೈನುಗಾರಿಕೆಯಲ್ಲಿ(Dairy) ತೊಡಗಿಕೊಂಡಿದ್ದಾರೆ. ಕಳೆದ ಆರು ತಿಂಗಳುಗಳಲ್ಲಿ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು 1,000 ಕ್ಕೂ ಹೆಚ್ಚು ಕೋಳಿ ಫಾರಂಗಳು ಹೊಸದಾಗಿ ಪ್ರಾರಂಭವಾಗಿವೆ. ಇದರಿಂದ ಬೆಂಗಳೂರು ನಗರಕ್ಕೆ ಕೋಳಿ ಮಾಂಸ ಪೂರೈಕೆಯಲ್ಲಿ ಹೆಚ್ಚಾಗಿದೆ. ಇದೀಗ ಬೇಡಿಕೆ ಕುಸಿಯುತ್ತಿರುವುದರಿಂದ ಈ ಕ್ಷೇತ್ರದಲ್ಲಿ ತೊಡಗಿರುವವರಿಗೆ ತೊಂದರೆಯಾಗಲಿದೆ ಎಂದು ದೊಡ್ಡಬಳ್ಳಾಪುರದ ಕೋಳಿ ಸಾಕಾಣಿಕೆ ಮಾಡುವ ರೈತ ಸೋಮಶೇಖರ್‌ ಮಾಹಿತಿ ನೀಡಿದ್ದಾರೆ.

ಕೋಳಿ ಬೇಟೆಗೆ ಹೋಗಿ ಬಾವಿಗೆ ಬಿದ್ದ ಚಿರತೆ

ಉಪ್ಪಿನಂಗಡಿ: ಕೋಳಿ ಬೇಟೆಯಾಡುವ ಯತ್ನದಲ್ಲಿ ಚಿರತೆಯೊಂದು(Leopard) ಬಾವಿಗೆ ಬಿದ್ದ ಘಟನೆ ಕಡಬ ತಾಲೂಕು ಕೊಂಬಾರು ಗ್ರಾಮದಲ್ಲಿ ಭಾನುವಾರ ನಡೆದಿದೆ.

ರಾಮಯ್ಯ ಗೌಡ ಎಂಬುವರ ಮನೆ ಬಳಿಯ ಬಾವಿಯ ಪಕ್ಕದಲ್ಲಿದ್ದ ಮರವೊಂದರಲ್ಲಿ ಕುಳಿತಿದ್ದ ಕೋಳಿಯನ್ನು ಬೇಟೆಯಾಡಲು ಪ್ರಯತ್ನಿಸಿ ಬಾವಿಯೊಳಗೆ ಚಿರತೆ ಬಿದ್ದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಸತತ 3 ತಾಸುಗಳ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ. ಬಾವಿಯ ಪಕ್ಕ ಬೋನು ಇರಿಸಿ ಬಾವಿಗೆ ಏಣಿ ಇಳಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಏಣಿ ಏರಿ ಬಂದ ಚಿರತೆ ಹೊರ ಹೋಗಿ ತಪ್ಪಿಸಿಕೊಳ್ಳದೆ ನೇರವಾಗಿ ಬೋನಿನೊಳಗೆ ಹೋಗುವಂತೆ ಬಲೆ ಹಾಕಿ ಕಾರ್ಯಾಚರಣೆ ನಡೆಸಿದರು.
 

Follow Us:
Download App:
  • android
  • ios