Asianet Suvarna News Asianet Suvarna News

ಮನೆಯಿಂದ್ಲೇ ಪಾತ್ರೆ ತನ್ನಿ: ಡಿಸ್ಕೌಂಟ್ ಊಟ ತಿನ್ನಿ!

ಮನೆಯಿಂದ ಪಾತ್ರೇ ತಂದರೆ ಊಟದಲ್ಲಿ ರಿಯಾಯ್ತಿ! ಚೆನ್ನೈ ಹೋಟೆಲ್ ಉದ್ಯಮಿಗಳ ವಿನೂತನ ನಡೆ! ಊಟದಲ್ಲಿ ಶೇ.5ರಷ್ಟು ರಿಯಾಯ್ತಿ ಘೋಷಣೆ! ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಮುಂದಾದ ಹೋಟೆಲ್ ಉದ್ಯಮ 

Chennai Hotel association offered discount on food for those who bring their own utensils
Author
Bengaluru, First Published Aug 21, 2018, 1:53 PM IST

ಚೆನ್ನೈ(ಆ.21): ಹೊಟೇಲ್ ಉದ್ಯಮದಲ್ಲಿ ಪ್ಲಾಸ್ಟಿಕ್ ಬಳಕೆಯಾದಷ್ಟು ಬಹುಶಃ ಇನ್ಯಾವ ಉದ್ಯಮದಲ್ಲೂ ಬಳಕೆಯಾಗುವುದಿಲ್ಲ. ಅದರಲ್ಲೂ ಪಾರ್ಸಲ್ ಗಳಿಗೆ ಹೊಟೇಲ್ ಉದ್ಯಮ ಪ್ಲಾಸ್ಟಿಕ್ ನ್ನೇ ನೆಚ್ಚಿಕೊಂಡು ಕೂತಿದೆ.

ಆದರೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕೆಲವು ಹೋಟೆಲ್ ಗಳು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ನೂತನ ಐಡಿಯಾ ಸಂಶೋಧಿಸಿವೆ. ಅದರಂತೆ ಊಟದ ಪ್ಯಾಕಿಂಗ್‌ಗಾಗಿ ಪ್ಲಾಸ್ಟಿಕ್ ಡಬ್ಬಗಳನ್ನು ಬಳಸದಂತೆ ಜನರಿಗೆ ಪ್ರೇರಣೆ ನೀಡಲು ಈ ಹೋಟೆಲ್ ಗಳು ಮುಂದಾಗಿವೆ.

ಊಟ ಪಾರ್ಸಲ್ ಗಾಗಿ ಮನೆಯಿಂದಲೇ ಪಾತ್ರೆಗಳನ್ನು ತಂದರೆ ಆಹಾರದಲ್ಲಿ ರಿಯಾಯ್ತಿ ಘೋಷಣೆ ಮಾಡಲಾಗಿದೆ. 2019, ಜನವರಿ 1 ರಿಂದ ಪ್ಲಾಸ್ಟಿಕ್ ನಿಷೇಧ ಮಾಡುವುದಾಗಿ ರಾಜ್ಯ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಹೊಟೇಲ್ ಉದ್ಯಮ ಈ ವಿನೂತನ ಹೆಜ್ಜೆ ಇರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ತಮಿಳುನಾಡು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಎಂ. ರವಿ, ಪಾಸರ್ಸಲ್ ಗೆ ಮನೆಯಿಂದಲೇ ಪಾತ್ರೆ ತಂದವರಿಗೆ ಶೇ.5ರಷ್ಟು ರಿಯಾಯ್ತಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹೊಟೇಲ್ ಉದ್ಯಮಿಗಳ ಈ ಪರಿಸರ ಸ್ನೇಹಿ ನಡೆಗೆ ಎಲ್ಲೆಡೆಯಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.
 

Follow Us:
Download App:
  • android
  • ios