Asianet Suvarna News Asianet Suvarna News

ಉದ್ಯೋಗಿಗಳಿಗೆ 28 ಕಾರ್, 29 ಬೈಕ್ ಗಿಫ್ಟ್ ಕೊಟ್ಟ ಕಂಪನಿ; ಮದುವೆಗೂ ಸಿಗುತ್ತೆ ಲಕ್ಷ ಲಕ್ಷ ಹಣ

ಒಂದು ಕಂಪನಿಯು ತನ್ನ ಉದ್ಯೋಗಿಗಳಿಗೆ 28 ಕಾರುಗಳು ಮತ್ತು 29 ಬೈಕುಗಳನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯು ಉದ್ಯೋಗಿಗಳ ಮದುವೆಗೆ ಹಣ ಸಹ ನೀಡುತ್ತದೆ.

Chennai based company gifted 28 cars and 29 bikes to employees  mrq
Author
First Published Oct 13, 2024, 11:59 AM IST | Last Updated Oct 13, 2024, 11:59 AM IST

ಚೆನ್ನೈ: ಸ್ಟ್ರಕ್ಚರಲ್ ಸ್ಟೀಲ್ ಡಿಸೈನ್ ಮತ್ತು ಡಿಟೇಲಿಂಗ್ ಕಂಪನಿ ತನ್ನ ಉದ್ಯೋಗಿಗಳಿಗೆ 28 ಕಾರ್ ಮತ್ತು 29 ಬೈಕ್ ಗಿಫ್ಟ್ ನೀಡಿದೆ. ಉದ್ಯೋಗಿಗಳ ಪ್ರೊಡೆಕ್ಟಿವಿಟಿ ಹೆಚ್ಚಿಸು ಉದ್ದೇಶದಿಂದ ದುಬಾರಿ ಬೆಲೆಯ ಕಾರ್ ಮತ್ತು ಬೈಕ್  ಗಿಫ್ಟ್ ನೀಡಲಾಗಿದೆ ಎಂದು ಕಂಪನಿಯ ಉದ್ಯೋಗಿ ಹೇಳಿದ್ದಾರೆ. ಕೆಲಸ ಮಾಡಲು ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ಬೈಕ್ ಮತ್ತು ಕಾರ್ ನೀಡಲಾಗಿದೆ. ಉದ್ಯೋಗಿಗಳ ನಿರಂತರ ಹಾರ್ಡ್‌ ವರ್ಕ್‌ಗೆ ಹಬ್ಬದ ಸಂದರ್ಭದಲ್ಲಿ ಪ್ರತಿಫಲ ಸಿಕ್ಕಿದೆ ಎಂದು ಕಂಪನಿಯ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಹುಂಡೈ, ಟಾಟಾ, ಮಾರುತಿ ಸುಜುಕಿ ಮತ್ತು ಮರ್ಸಿಡಿಸ್ ಬೆಂಜ್ ಸೇರಿದಂತೆ ಒಟ್ಟಿ 28 ಕಾರ್ ಉಡುಗೊರೆ ರೂಪದಲ್ಲಿ ವಿತರಿಸಲಾಗಿದೆ. ನಾವು ಕಂಪನಿಯ ಯಶಸ್ಸನ್ನು ಸಿಬ್ಬಂದಿ ಜೊತೆ ಹಂಚಿಕೊಳ್ಳುತ್ತಿದ್ದೇವೆ. ಉದ್ಯೋಗಿಗಳ ನಿರಂತರ ಪರಿಶ್ರಮ ನಮ್ಮ ಯಶಸ್ಸಿಗೆ ಕಾರಣ. ಉದ್ಯೋಗಿಗಳೇ ನಮ್ಮ ಕಂಪನಿಯ ದೊಡ್ಡ ಆಸ್ತಿಯಾಗಿದ್ದಾರೆ. ಉದ್ಯೋಗಿಗಳ ಕಾರ್ಯಕ್ಷಮತೆ ಮತ್ತು ಸೇವಾವಧಿ ಆಧಾರದ ಮೇಲೆ ಕಾರ್ ಮತ್ತು ಬೈಕ್ ಕೊಡುಗೆಯಾಗಿ ನೀಡಲಾಗಿದೆ ಎಂದು ಕಂಪನಿಯ ಎಂಡಿ ಶ್ರೀಧರ್ ಕನ್ನನ್ ಹೇಳಿದ್ದಾರೆ. 

ಸ್ಟ್ರಕ್ಚರಲ್ ಸ್ಟೀಲ್ ಡಿಸೈನ್ ಮತ್ತು ಡಿಟೇಲಿಂಗ್ ಕಂಪನಿಯಲ್ಲಿ 180 ಉದ್ಯೋಗಿಗಳನ್ನು ಹೊಂದಿದ್ದು, ಎಲ್ಲರೂ ಅತ್ಯಂತ ವಿನಮ್ರದಿಂದ ಹಾಗೂ ಜವಾಬ್ದಾರಿಯಿಂದ ನುಣುಚಿಕೊಳ್ಳದೇ ಕೆಲಸ ಮಾಡುತ್ತಾರೆ ಎಂದು ಶ್ರೀಧರ್ ಕನ್ನನ್ ಹೇಳುತ್ತಾರೆ. ಎಲ್ಲಾ ಉದ್ಯೋಗಿಗಳು ಅನುಭವಿಗಳು ಮತ್ತು   ನುರಿತರಾಗಿದ್ದಾರೆ. ಯಾರಿಗೆ ಗಿಫ್ಟ್ ಕೊಡಬೇಕು ಎಂಬುದನ್ನು ಅವರ ಕಾರ್ಯಕ್ಷಮತೆ ಆಧಾರದ ಮೇಲೆಯೇ ನಿರ್ಧರಿತವಾಗುತ್ತದೆ. ಹಲವರಿಗೆ ದುಬಾರಿ ಬೆಲೆಯ ಬೈಕ್ ಮತ್ತು ಕಾರ್ ಖರೀದಿಸೋದು ಕನಸು ಆಗಿರುತ್ತದೆ. ಬೈಕ್ ಮತ್ತು ಕಾರ್ ಉಡುಗೊರೆಯಾಗಿ ನೀಡುವ ಮೂಲಕ ಉದ್ಯೋಗಿಗಳ ಕನಸನ್ನು ನನಸು ಮಾಡುತ್ತಿದ್ದೇವೆ. 2002ರಲ್ಲಿ ಕಂಪನಿಯ ಇಬ್ಬರು ಹಿರಿಯ ಉದ್ಯೋಗಿಗಳಿಗೆ ಕಾರ್ ನೀಡಲಾಗಿತ್ತು. ಈ ವರ್ಷ 28 ಕಾರ್ ನೀಡಲಾಗಿದೆ ಎಂದು ಶ್ರೀಧರ್ ಕನ್ನನ್ ಸಂತೋಷ ಹಂಚಿಕೊಂಡರು. 

ಬೆಂಗಳೂರಿನ ಟೀ ವ್ಯಾಪಾರಿ ಖಾತೆಗೆ 999 ಕೋಟಿ ಜಮೆ; ಯಾಕಾದ್ರು ಹಣ ಬಂತೆಂದು ತಲೆ ಮೇಲೆ ಕೈ ಹೊತ್ತು ಕುಳಿತ ವ್ಯಕ್ತಿ

ಇದೇ ವೇಳೆ ಕಂಪನಿ ಆಯ್ಕೆ ಮಾಡಿದ ವಾಹನದ ಬದಲಾಗಿ ಉದ್ಯೋಗಿ ಬೇರೆ ಕಾರ್ ಅಥವಾ ಬೈಕ್ ಕೇಳಿದ್ದರು. ಆ ಬೇಡಿಕೆಗೂ ಕಂಪನಿ ಸ್ಪಂದಿಸಿದೆ. ಉದ್ಯೋಗಿಗೆ ಕಂಪನಿ ಆಯ್ಕೆ ಮಾಡಿದ ವಾಹನಕ್ಕಿಂತ ಬೇರೆ ವೆಹಿಕಲ್ ಬೇಕಾದ್ರೆ ಉಳಿದ ಮೊತ್ತವನ್ನು ಅವರೇ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

ಉದ್ಯೋಗಿಗಳಿಗೆ ಕಾರ್ ಮತ್ತು ಬೈಕ್ ಉಡುಗೊರೆಯಾಗಿ ನೀಡುವುದರ ಜೊತೆಗೆ ಕಂಪನಿ ಹಲವು ಸೌಲಭ್ಯಗಳನ್ನು ಸಹ ನೀಡಲಾಗುತ್ತಿದೆ. ಉದ್ಯೋಗಿ ಮದುವೆಯಾಗುತ್ತಿದ್ದರೆ 50 ಸಾವಿರ ರೂಪಾಯಿ ನೀಡಲಾಗುತ್ತದೆ. ಈಗ ಈ ಮೊತ್ತ 1 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಕಂಪನಿಯ ಉದ್ಯೋಗಿ  ಹೇಳಿದ್ದಾರೆ. 

ತಿಂಗಳಿಗೆ 1 ಲಕ್ಷ ರೂಪಾಯಿ ಪಿಂಚಣಿ ಪಡೆಯಲು ಹೀಗೆ ಹೂಡಿಕೆ ಮಾಡಿ!

Latest Videos
Follow Us:
Download App:
  • android
  • ios