Asianet Suvarna News Asianet Suvarna News

ಆಗಸ್ಟ್ ತಿಂಗಳಲ್ಲಿ 15 ದಿನ ಬ್ಯಾಂಕ್ ರಜೆ; ಇಲ್ಲಿದೆ ರಜಾ ದಿನದ ಫುಲ್ ಲಿಸ್ಟ್!

  • ಆಗಸ್ಟ್ ತಿಂಗಳಲ್ಲಿ ಭರಪೂರ ರಜೆ, ಅರ್ಧ ತಿಂಗಳು ಬ್ಯಾಂಕ್ ಕ್ಲೋಸ್
  • ಬ್ಯಾಂಕಿಂಗ್ ಕೆಲಸಕ್ಕೆ ತೆರಳುವ ಮುನ್ನ ನಿಮ್ಮ ಬ್ಯಾಂಕ್ ರಜಾ ದಿನ ಪರಿಶೀಲಿಸಿ
  • ಆಗಸ್ಟ್ ತಿಂಗಳಲ್ಲಿ ಭಾನುವಾರ, 2,4ನೇ ಶನಿವಾರ ಸೇರಿದಂತೆ 15 ರಜೆ
Check RBI calender Banks will will remain closed for 15 days in August here is full list ckm
Author
Bengaluru, First Published Jul 27, 2021, 6:49 PM IST
  • Facebook
  • Twitter
  • Whatsapp

ನವದೆಹಲಿ(ಜು.27):  ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ಕೆಲಸಕ್ಕೆ ತೆರಳುವ ಮುನ್ನ ದಿನಾಂಕ ಪರಿಶೀಲಿಸುವುದು ಉತ್ತಮ. ಕಾರಣ ಆಗಸ್ಟ್ ತಿಂಗಳಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ಕ್ಲೋಸ್ ಆಗಲಿವೆ. ಭಾನುವಾರ, ಶನಿವಾರ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಹಲವು ರಜೆಗಳು ಆಗಸ್ಟ್ ತಿಂಗಳಲ್ಲಿವೆ. 

ಸ್ಯಾಲರಿ, EMI ಪಾವತಿ, ಪೆನ್ಶನ್ ಪಡೆಯಲು ಆಗಸ್ಟ್ 1 ರಿಂದ RBI ಹೊಸ ನೀತಿ!

ರಿವಸರ್ವ ಬ್ಯಾಂಕ್ ಆಫ್ ಇಂಡಿಯಾ(RBI) ಕ್ಯಾಲೆಂಡರ್ ಪ್ರಕಾರ, ವಾರಾಂತ್ಯದ ರಜಾ ದಿನ ಹೊರತು ಪಡಿಸಿ ಆಗಸ್ಟ್ ತಿಂಗಳಲ್ಲಿ 8 ರಜಾ ದಿನಗಳಿವೆ. ಇನ್ನು ಶನಿವಾರ, ಭಾನುವಾರ ಸೇರಿ ಒಟ್ಟು 15 ರಜೆಗಳಾಗಲಿವೆ. ಆದರೆ ಈ ಎಲ್ಲಾ ರಜೆಗಳು ಅನ್ವಯವಾಗುದಿಲ್ಲ. ಕೆಲ ರಜೆಗಳು ಕೆಲ ರಾಜ್ಯಗಳಿಗೆ ಮಾತ್ರ ಅನ್ವಯವಾಗಲಿದೆ.

ನಿಮ್ಮ ಹಳೇ ಫೋನ್‌ ನಂಬರ್ ಬಗ್ಗೆ ಹುಷಾರಾಗಿರಿ!

ಬ್ಯಾಂಕಿನ ರಜಾ ದಿನಗಳನ್ನು RBI ನೆಗೋಶಿಯೆಬಲ್ ಇನ್ಸುಟ್ರುಮೆಂಟ್ ಆ್ಯಕ್ ಪ್ರಕಾರ ಮೂರು ವಿಭಾಗಗಳಾಗಿ ವಿಂಗಡಿಸಿದೆ. ಈ ಕಾಯ್ದೆಯಡಿ ಹಬ್ಬಳ ಕಾರಣ ಆಗಸ್ಟ್ ತಿಂಗಳಲ್ಲಿ ರಜಾ ದಿನಗಳು ಹೆಚ್ಚಿವೆ. 

ಆಗಸ್ಟ್ 13: ದೇಶಪ್ರೇಮಿ ದಿನ(ಪೆಟ್ರಿಯಾಟಿಕ್ ಡೇ)
ಆಗಸ್ಟ್ 16: ಪರ್ಸೆ( ಹೊಸ ವರ್ಷ)
ಆಗಸ್ಟ್ 19: ಮೊಹರಂ 
ಆಗಸ್ಟ್ 20: ಮೊದಲ ಓಣಂ
ಆಗಸ್ಟ್ 21: ತಿರು ಓಣಂ
ಆಗಸ್ಟ್ 23: ಶ್ರೀ ನಾರಾಯಣ ಗುರು ಜಯಂತಿ
ಆಗಸ್ಟ್ 30: ಜನ್ಮಾಷ್ಟಮಿ/ ಕೃಷ್ಣ ಜಯಂತಿ:
ಆಗಸ್ಟ್ 31: ಶ್ರೀ ಕೃಷ್ಣ ಅಷ್ಟಮಿ

ಇದರಲ್ಲಿ ಪರ್ಸೆ ಅಂದರೆ ಹೊಸ ವರ್ಷ ಮಹಾರಾಷ್ಟ್ರದಲ್ಲಿ ರಜಾ ದಿನವಾಗಿದೆ.  ಓಣಂ ಹಬ್ಬಕ್ಕೆ ಕೇರಳದ ಬ್ಯಾಂಕ್‌ಗಳಿಗೆ ರಜಾ ದಿನವಾಗಿದೆ. ಹೀಗಾಗಿ ಕೆಲ ರಜಾ ದಿನಗಳು ಕೆಲ ರಾಜ್ಯಗಳಿಗೆ ಕೆಲ ಬ್ಯಾಂಕ್‌ಗಳಿಗೆ ಸೀಮಿತವಾಗಿದೆ. ಈ ರಜೆಗಳನ್ನು ಹೊರತು ಪಡಿಸಿದರೆ ಭಾನುವಾರ, ಶನಿವಾರದ ರಜಾ ದಿನ ಸೇರಿದರೆ 15 ದಿನಗಳಾಗಲಿದೆ. ಈ ಬಾರಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬಂದಿದೆ.

ಆಗಸ್ಟ್ 1: ಭಾನುವಾರ
ಆಗಸ್ಟ್ 8: ಭಾನುವಾರ
ಆಗಸ್ಟ್ 14: ಎರಡನೇ ಶನಿವಾರ
ಆಗಸ್ಟ್ 15: ಭಾನುವಾರ
ಆಗಸ್ಟ್ 22: ಭಾನುವಾರ
ಆಗಸ್ಟ್ 28: ನಾಲ್ಕನೇ ಶನಿವಾರ
ಆಗಸ್ಟ್ 29: ಭಾನುವಾರ

Follow Us:
Download App:
  • android
  • ios