Asianet Suvarna News Asianet Suvarna News

ಬೆಂಗಳೂರು ಸೇರಿ ಕರ್ನಾಟಕದ ಜಿಲ್ಲೆಯಲ್ಲಿ ಎಷ್ಟಿದೆ ಪೆಟ್ರೋಲ್ ಡೀಸೆಲ್ ದರ?

ಆಗಸ್ಟ್ 9 ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಆಯಿಲ್ ಮಾರ್ಕೆಟಿಂಗ್ ಕಂಪನಿ ಘೋಷಿಸಿದೆ. ಬೆಂಗಳೂರು, ಕರ್ನಾಟಕದ ಜಿಲ್ಲೆ ಹಾಗೂ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿದೆ? 

Check latest petrol diesel price on Bengaluru and Karnataka unchanged on august 9th ckm
Author
First Published Aug 9, 2024, 7:57 AM IST | Last Updated Aug 9, 2024, 7:57 AM IST

ಬೆಂಗಳೂರು(ಆ.08) ದೇಶ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ತಯಾರಿಯಲ್ಲಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಅಗ್ರ ರಾಷ್ಟ್ರಗಳ ಹಿಂಜರಿತ ಪರಿಣಾಮ ಬೀರುತ್ತಿದೆ. ಇದು ಭಾರತದ ಮೇಲೂ ಕೆಲ ಬದಲಾವಣೆ ತರುವ ಸಾಧ್ಯತೆ ಇದೆ. ಇದರ ನಡುವೆ ಜನರು ಆತಂಕದಿಂದ ಗಮನಿಸುತ್ತಿರುವ ವಿಚಾರಗಳ ಪೈಕಿ ಪೆಟ್ರೋಲ್ ಡೀಸೆಲ್ ಬೆಲೆಯೂ ಒಂದಾಗಿದೆ. ಇಂದು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 88.94 ರೂಪಾಯಿ ಆಗಿದೆ. 

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.72 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 87.62 ರೂಪಾಯಿ ಆಗಿದೆ. ಇನ್ನು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ100.86  ಹಾಗೂ ಡೀಸೆಲ್ ಬೆಲೆ 92.44 ರೂಪಾಯಿ ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 106.35 ರೂಪಾಯಿ ಇದ್ದರೆ, ಡೀಸೆಲ್ ಬೆಲೆ 89.97ರೂಪಾಯಿ ಆಗಿದೆ. ಇತ್ತ ಕರ್ನಾಟಕದ ವಿವಿಧ ರಾಜ್ಯಗಳಲ್ಲಿನ ಪೆಟ್ರೋಲ್ ಬೆಲೆ ಮಾಹಿತಿ ಇಲ್ಲಿದೆ.

ಜಿಯೋ ಗ್ರಾಹಕರಿಗೆ ಮುಕೇಶ್ ಅಂಬಾನಿ ಗಿಫ್ಟ್: 336 ದಿನ ವ್ಯಾಲಿಟಿಡಿ ಸೇರಿ 4 ರಿಚಾರ್ಜ್ ಪ್ಲಾನ್ ಜಾರಿ!

ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಪೆಟ್ರೋಲ್ ಡೀಸೆಲ್ ಬೆಲೆ ಸ್ಥಿರವಾಗಿದೆ. 

ಕರ್ನಾಟಕ ಜಿಲ್ಲೆಯ ಪೆಟ್ರೋಲ್ ದರ
ಬಾಗಲಕೋಟೆ:103.44  
ಬೆಂಗಳೂರು:  102.86
ಬೆಂಗಳೂರು ಗ್ರಾಮಂತರ:102.94  
ಬೆಳಗಾವಿ: 102.90
ಬಳ್ಳಾರಿ: 104.89 
ಬೀದರ್: 103.47
ವಿಜಯಪುರ: 103.18 
ಚಾಮರಾಜನಗರ: 103.03
ಚಿಕ್ಕಬಳ್ಳಾಪುರ:102.86  
ಚಿಕ್ಕಮಗಳೂರು: 103.92 
ಚಿತ್ರದುರ್ಗ: 104.49
ದಕ್ಷಿಣ ಕನ್ನಡ: 102.32
ದಾವಣೆಗೆರೆ: 105.09
ಧಾರವಾಡ: 102.63 
ಗದಗ: 103.19
ಕಲಬುರಗಿ: 103.36
ಹಾಸನ: 102.88
ಹಾವೇರಿ: 103.81
ಕೊಡುಗು:104.29 
ಕೋಲಾರ:102.55 
ಕೊಪ್ಪಳ: 104.17
ಮಂಡ್ಯ: 102.70
ಮೈಸೂರು: 103.11
ರಾಯಚೂರು: 103.78 
ರಾಮನಗರ:103.34 
ಶಿವಮೊಗ್ಗ: 104.42
ತುಮಕೂರು:103.48 
ಉಡುಪಿ: 102.14
ಉತ್ತರಕನ್ನಡ:104.46
ಯಾದಗಿರಿ :103.37

ಉದ್ಯೋಗಿಗಳಿಗೆ ಕಾರು ಬೈಕ್ ಉಡುಗೊರೆ ನೀಡುವ ಸೂರತ್ ಉದ್ಯಮಿ ಈ ಬಾರಿ ವಿಶೇಷ ಘೋಷಣೆ!

ಭಾರತದಲ್ಲಿ ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಡೀಸೆಲ್ ಬೆಲೆ ಘೋಷಣೆಯಾಗಲಿದೆ. ಆಯಿಲ್ ಮಾರ್ಕೆಂಟಿಂಗ್ ಕಂಪನಿ(OMCs) ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಬೆಲೆ ಆಧರಿಸಿ ಪ್ರತಿ ದಿನ ದರ ಪರಿಷ್ಕರಿಸುತ್ತದೆ. ಆದರೆ ಕಳೆದ ಹಲವು ದಿನಗಳಿಂದ ಇಂಧನ ದರ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ದುಬಾರಿ ಹಣೆಪಟ್ಟಿಯಿಂದ ಹೊರಬಂದಿಲ್ಲ. 
 

Latest Videos
Follow Us:
Download App:
  • android
  • ios