ಚಿನ್ನ ಖರೀದಿಸಲು ಇದು ಸಕಾಲ, ಕಳೆದ ನಾಲ್ಕು ದಿನಗಳಲ್ಲಿ ಭರ್ಜರಿ ಇಳಿಕೆ ಕಂಡ ಬಂಗಾರ ಬೆಲೆ!

ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಜೂನ್ 22ರಿಂದ ಆರಂಭಗೊಂಡಿರುವ ಬಂಗಾರದ ಬೆಲೆ ಇಳಿಕೆ ಇಂದೂ ಮುಂದುವರಿದಿದೆ. ಇಂದಿನ ಚಿನ್ನದ ಬೆಲೆ ವಿವರ ಇಲ್ಲಿದೆ.
 

Check latest gold rate in Bengaluru yellow metal price slips consecutive 4th day ckm

ಬೆಂಗಳೂರು(ಜೂ.25) ಚಿನ್ನ ಖರೀದಿ, ಚಿನ್ನದ ಮೇಲೆ ಹೂಡಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆದರೆ ಬಂಗಾರ ದುಬಾರಿಯಾಗಿರುವ ಕಾರ ಖರೀದಿ ಹಾಗೂ ಹೂಡಿಕೆ ಸುಲಭದ ಮಾತಲ್ಲ. ಆದರೆ ಕಳೆದ ನಾಲ್ಕು ದಿನಗಳಿಂದ ಬಂಗಾರದ ಬೆಲೆ ಇಳಿಕೆಯತ್ತ ಸಾಗುತ್ತಿದೆ.  ಇದರಿಂದ ಜನ ಇದೀಗ ಚಿನ್ನ ಖರೀದಿಗೆ ಮುಂದಾಗುತ್ತಿದ್ದಾರೆ. ಬೆಂಗಳೂರಿನಲ್ಲಿಂದು 22 ಕಾರಟ್ 1 ಗ್ರಾಂ ಚಿನ್ನಕ್ಕೆ 6624 ರೂಪಾಯಿಗೆ ಇಳಿಕೆಯಾಗಿದೆ. ಇನ್ನು 24 ಕಾರಟ್ 1 ಗ್ರಾಂ ಚಿನ್ನಕ್ಕೆ 7,222 ರೂಪಾಯಿಗೆ ಇಳಿಕೆಯಾಗಿದೆ. 

ಜೂನ್ 21ರಂದು ಬೆಂಗಳೂರಿಲ್ಲಿ 22 ಕಾರಟ್ 1 ಗ್ರಾಂ ಚಿನ್ನಕ್ಕೆ 6,715 ರೂಪಾಯಿ ಆಗಿತ್ತು. ಇದೀಗ 6624 ರೂಪಾಯಿಗೆ ಇಳಿಕೆಯಾಗಿದೆ. ಕೊನೆಯದಾಗಿ ಜೂನ್ 21 ರಂದು ಬರೋಬ್ಬರಿ 1 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 75 ರೂಪಾಯಿ ಏರಿಕೆಯಾಗಿತ್ತು. ಇದೀಗ ಇಳಿಕೆಯತ್ತ ಸಾಗಿರುವ ಚಿನ್ನ, ಮತ್ತಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚಿನ್ನದಲ್ಲಿ ಹೂಡಿಕೆ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ 5 ವಿಷಯಗಳು..

ಬೆಂಗಳೂರಿನಲ್ಲಿ ಚಿನ್ನದ ಇಂದಿನ ಬೆಲೆ
1 ಗ್ರಾಂ 22 ಕಾರಟ್ ಚಿನ್ನ: 6,624 ರೂಪಾಯಿ, 24 ಕಾರಟ್ ಬೆಲೆ: 7,22 ರೂಪಾಯಿ
8 ಗ್ರಾಂ 22 ಕಾರಟ್ ಚಿನ್ನ:52,992 ರೂಪಾಯಿ, 24 ಕಾರಟ್ ಬೆಲೆ: 57,776 ರೂಪಾಯಿ
8 ಗ್ರಾಂ 22 ಕಾರಟ್ ಚಿನ್ನ:66,240 ರೂಪಾಯಿ, 24 ಕಾರಟ್ ಬೆಲೆ: 72,220 ರೂಪಾಯಿ
100 ಗ್ರಾಂ 22 ಕಾರಟ್ ಚಿನ್ನ:6,62,400 ರೂಪಾಯಿ, 24 ಕಾರಟ್ ಬೆಲೆ: 7,22,200 ರೂಪಾಯಿ

ಚಿನ್ನ ಖರೀದಿಸುವ ಯೋಚನೆ ಇದೆಯಾ? ಮತ್ಯಾಕೆ ತಡ, ಇಂದೇ ಬಂಗಾರವನ್ನ ನಿಮ್ಮದಾಗಿಸಿಕೊಳ್ಳಿ

ಬೆಂಗಳೂರಿನಲ್ಲಿ ಚಿನ್ನದ ಇಂದಿನ ಬೆಲೆ
1 ಗ್ರಾಂ 18 ಕಾರಟ್ ಚಿನ್ನ:5,420 ರೂಪಾಯಿ 
8 ಗ್ರಾಂ 18 ಕಾರಟ್ ಚಿನ್ನ:43,360 ರೂಪಾಯಿ 
10 ಗ್ರಾಂ 18 ಕಾರಟ್ ಚಿನ್ನ:54,200 ರೂಪಾಯಿ 
100 ಗ್ರಾಂ 18 ಕಾರಟ್ ಚಿನ್ನ:5,42,000 ರೂಪಾಯಿ 

ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ 1,000 ರೂಪಾಯಿ ಏರಿಕೆಯಾಗಿದೆ. ಅದೆ 9 ವರ್ಷಗಳ ಹಿಂದೆ 22 ಕಾರಟ್ 1 ಗ್ರಾಂ ಚಿನ್ನದ ಬೆಲೆ 3,998 ರೂಪಾಯಿ ಆಗಿತ್ತು. ಇದೀಗ ದುಪ್ಪಟ್ಟ ಬೆಲೆಯಾಗಿದೆ.

ದೆಹಲಿಯಲ್ಲಿ 22 ಕಾರಟ್ 1 ಗ್ರಾಂ ಚಿನ್ನದ ಬೆಲೆ 6,639 ರೂಪಾಯಿ ಆಗಿದೆ. ಇನ್ನು 24 ಕಾರಟ್ 1 ಗ್ರಾಂ ಚಿನ್ನದ ಬೆಲೆ ದೆಹಲಿಯಲ್ಲಿ 7,237 ರೂಪಾಯಿ. 18 ಕಾರಟ್ 1 ಗ್ರಾಂ ಚಿನ್ನದ ಬೆಲೆ 5,432 ರೂಪಾಯಿ ಆಗಿದೆ.
 

Latest Videos
Follow Us:
Download App:
  • android
  • ios