Asianet Suvarna News Asianet Suvarna News

Gold Silver Price: ಬಂಗಾರ ಮತ್ತಷ್ಟು ಅಗ್ಗ, ಗ್ರಾಹಕರಿಗೆ ಆನಂದ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 10, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

Check Gold Silver rate in Bengaluru and major cities of India January 11 2022 pod
Author
Bangalore, First Published Jan 11, 2022, 2:08 PM IST
  • Facebook
  • Twitter
  • Whatsapp

ನವದೆಹಲಿ(ಜ.11): ಹೊಸ ವರ್ಷ ಆರಂಭವಾದಾಗಿನಿಂದಲೂ ಚಿನ್ನ ಖರೀದಿದಾರರು ಕೊಂಚ ನಿಟ್ಟುಸಿರು ಬಿಡಲಾರಂಭಿಸಿದ್ದಾರೆ. ಚಿನ್ನ, ಬೆಳ್ಳಿ ದರ ಇಳಿಕೆಯೇ ಇದಕ್ಕೆ ಪ್ರಮುಖ ಕಾರಣ. ಹೌದು ಕೊರೋನಾ ಆರಮಭವಾದಾಗಿನಿಂದಲೂ ಏರಿಕೆ ಹಾದಿ ಹಿಡಿದಿದ್ದ ಚಿನ್ನದ ದರ, ಮೊದಲ ಹಾಗೂ ಎರಡನೇ ಅಲೆ ಮುಗಿದಿದ್ದರೂ ಇಳಿಕೆಯ ಹಾದಿ ಹಿಡಿದಿರಲಿಲ್ಲ. ಆದರೀಗ ಹೊಸ ವರ್ಷದಾರಂಭದಲ್ಲಿ ಚಿನ್ನ ದರ ನಿಧಾನವಾಗಿ ಇಳಿಯುತ್ತಿರುವುದು ಗ್ರಾಹರಿಗೆ ಖುಷಿ ಕೊಟ್ಟಿದೆ. ಹೌದು ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ( Bangalore) ದರ ಎಷ್ಟಿದೆ?

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚಿನ್ನದ ದರ ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 44,700 ರೂಪಾಯಿ ಆದರೆ, 24 ಕ್ಯಾರಟ್ 10 ಗ್ರಾಂ ಚಿನ್ನದ ದರ 48,760ರೂ.ಇದೆ. ಇನ್ನು ಅತ್ತ ಒಂದು ಕೆ. ಜಿ ಬೆಳ್ಳಿ ದರ 64,600 ರೂಪಾಯಿ ಆಗಿದೆ.

ದೆಹಲಿಯಲ್ಲಿ (Delhi) ಹೇಗಿದೆ?

ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಚಿನ್ನ ಇಳಿಕೆಯಾಗಿದ್ದು, 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 46,650 ರೂ.ಆಗಿದ್ದು 24 ಕ್ಯಾರಟ್ 10 ಗ್ರಾಂ ಚಿನ್ನದ ದರ 50,900 ರೂ. ಆಗಿದೆ. ಅತ್ತ ಒಂದು ಕೆ.ಜಿ.ಬೆಳ್ಳಿ ದರ 60,800 ರೂ. ಆಗಿದೆ. 

ಮುಂಬೈನಲ್ಲಿ(Mumbai) ಎಷ್ಟಿದೆ ದರ?

ಮುಂಬೈನಲ್ಲಿ ಮಾತ್ರ ಚಿನ್ನದ ದರ ಕೊಂಚ ಏರಿಕೆಯಾಗಿದೆ. ಹೌದು 22 ಕ್ಯಾರಟ್ 10 ಗ್ರಾಂ ಚಿನ್ನದ ದರ, 46,590 ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 48,590ರೂ ಆಗಿದೆ, ಆದರೆ ಬೆಳ್ಳಿ ದರದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆಜಿ ಬೆಳ್ಳಿ ದರ 60,800 ರೂಪಾಯಿ ಇದೆ. 

ಚೆನ್ನೈಯಲ್ಲಿ(Chennai) ದರ ಹೀಗಿದೆ

ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 44,870ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 48,950 ರೂಪಾಯಿಯಾದರೆ, ಒಂದು ಕೆ.ಜಿ. ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿ ಒಂದು ಕೆಜಿಗೆ 64,600 ರೂಪಾಯಿ ಆಗಿದೆ. 

ಒಂದು ದಿನ ಕುಸಿಯುವ ಚಿನ್ನದ ದರ ಮರುದಿನವೇ ಏರಿಕೆಯ ಹಾದಿ ಹಿಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಿರುವಾಗ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾ? ಅಥವಾ ಇನ್ನೂ ಕೊಂಚ ಕಾಯುವುದು ಸರಿನಾ? ಎಂಬ ಪ್ರಶ್ನೆಯೂ ಈ ಗೊಂದಲಕ್ಕೆ ಕಾರಣವಾಗಿದೆ. ಹೀಗಿದ್ದರೂ ಇಂದು ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಯಾಗದಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ಕೊಟ್ಟಿದೆ. ಹೌದು ಇಂದು ಮುಂಬೈ ಹೊರತುಪಡಿಸಿ ಉಳಿದೆಡೆ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಿದ್ದರೂ ಒಮಿಕ್ರಾನ್ ಆತಂಕದ ಮಧ್ಯೆ ಚಿನ್ನದ ದರ ಕುಸಿಯಲಿದೆ ಎಂಬ ಮಾತುಗಳು ಆರ್ಥಿಕ ತಜ್ಞರದ್ದಾಗಿದೆ. 

Follow Us:
Download App:
  • android
  • ios