Asianet Suvarna News Asianet Suvarna News

Gold Silver Price: ಹೊಸ ವರ್ಷದ ಸಂಭ್ರಮದ ಮಧ್ಯೆ ಚಿನ್ನದ ದರ ನೋಡಿದ್ರಾ?

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 01, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

Check Gold Silver rate in Bengaluru and major cities of India January 01 2022 pod
Author
Bangalore, First Published Jan 1, 2022, 3:15 PM IST

ಬೆಂಗಳೂರು(ಜ.01):  ಇಡೀ ವಿಶ್ವವೇ ಹೊಸ ವರ್ಷವನ್ನು ಬಹಳ ಸಂಭ್ರಮದಿಂದ ಸ್ವಾಗತಿಸಿದೆ. ಜನರೆಲ್ಲರೂ ಪರಸ್ಪರ ಶುಭಾಶಯ ಕೋರಿ, ಹೊಸ ವರ್ಷ ಉತ್ತಮ ಆರೋಗ್ಯ, ಸುಖಮಯವಾಗೆಂದು ಹಾರೈಸುತ್ತಿದ್ದಾರೆ. ಇನ್ನು ಹೊಸ ವರ್ಷದ ಹೊಸ್ತಿಲಲ್ಲಿ ನಡೆಯಲಿರುವ ಶುಭ ಕಾರ್ಯಗಳ ಸಂಖ್ಯೆಯೂ ಹೆಚ್ಚಿವೆ. ಈ ನಿಟ್ಟಿನಲ್ಲಿ ಚಿನ್ನ, ಬೆಳ್ಳಿ, ಬಟ್ಟೆ ಖರೀದಿ ಎಗ್ಗಿಲ್ಲದೆ ಸಾಗುತ್ತಿದೆ. ಹೀಗಿದ್ದರೂ ಜನ ಸಾಮಾಣ್ಯರಿಗೆ ಈ ಸಂಭ್ರಮದ ವಾತಾವರಣದ ಮಧ್ಯೆ ಚಿನ್ನದ ದರ ಎಷ್ಟು ಎಂಬ ಪ್ರಶ್ನೆ ಕಾಡುವುದು ಸಹಜ. ಒಂದೆಡೆ ಸಾಲು ಸಾಲು ಕಾರ್ಯಕ್ರಮಗಳಾದರೆ, ಮತ್ತೊಂದೆಡೆ ಕೊರೋನಾ ಹೊಸ ತಳಿ ಒಮಿಕ್ರಾನ್ ಆತಂಕ. ಇವೆಲ್ಲದರ ನಡುವೆ ಚಿನ್ನದ ದರವೂ ಹಾವೇಣಿ ಆಟ ಮುಂದುವರೆಸಿದೆ. 

ಒಮಿಕ್ರಾನ್ ಭೀತಿ ಆರಂಭವಾದಾಗಿನಿಂದಲೂ ಚಿನ್ನ, ಬೆಳ್ಳಿ ದರ ಹಾವೇಣಿ ಆಟ ಆರಂಭಿಸಿದೆ. ಒಂದು ದಿನ ಕುಸಿಯುವ ಚಿನ್ನದ ದರ ಮರುದಿನವೇ ಏರಿಕೆಯ ಹಾದಿ ಹಿಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಿರುವಾಗ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾ? ಅಥವಾ ಇನ್ನೂ ಕೊಂಚ ಕಾಯುವುದು ಸರಿನಾ? ಎಂಬ ಪ್ರಶ್ನೆಯೂ ಈ ಗೊಂದಲಕ್ಕೆ ಕಾರಣವಾಗಿದೆ. ಹೀಗಿದ್ದರೂ ಇಂದು ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಯಾಗದಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ಕೊಟ್ಟಿದೆ. ಹೌದು ಇಂದು ಮುಂಬೈ ಹೊರತುಪಡಿಸಿ ಉಳಿದೆಡೆ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಿದ್ದರೂ ಒಮಿಕ್ರಾನ್ ಆತಂಕದ ಮಧ್ಯೆ ಚಿನ್ನದ ದರ ಕುಸಿಯಲಿದೆ ಎಂಬ ಮಾತುಗಳು ಆರ್ಥಿಕ ತಜ್ಞರದ್ದಾಗಿದೆ. 

"

ಬೆಂಗಳೂರಿನಲ್ಲಿ( Bangalore) ದರ ಎಷ್ಟಿದೆ?

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಚಿನ್ನದ ದರ ಕೊಂಚ ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,450 ರೂಪಾಯಿ ಆದರೆ, 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49,590ರೂ.ಇದೆ. ಇನ್ನು ಅತ್ತ ಒಂದು ಕೆ. ಜಿ ಬೆಳ್ಳಿ ದರ 62,700 ರೂಪಾಯಿ ಆಗಿದೆ.

ದೆಹಲಿಯಲ್ಲಿ (Delhi) ಹೇಗಿದೆ?

ಇನ್ನು ಮರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಚಿನ್ನ ಏರಿಕೆಯಾಗಿದ್ದು, 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,600 ರೂ.ಆಗಿದ್ದು 24 ಕ್ಯಾರಟ್ 10 ಗ್ರಾಂ ಚಿನ್ನದ ದರ 51,930 ರೂ. ಆಗಿದೆ. ಅತ್ತ ಒಂದು ಕೆ.ಜಿ.ಬೆಳ್ಳಿ ದರ 62,700ರೂ. ಆಗಿದೆ. 

ಮುಂಬೈನಲ್ಲಿ(Mumbai) ಎಷ್ಟಿದೆ ದರ?

ಮುಂಬೈನಲ್ಲಿ ಚಿನ್ನದ ದರ ಕೊಂಚ ಏರಿಕೆಯಾಗಿದೆ. ಹೌದು 22 ಕ್ಯಾರಟ್ 10 ಗ್ರಾಂ ಚಿನ್ನದ ದರ, 47,150 ರೂ.ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49,150ರೂ ಆಗಿದೆ, ಆದರೆ ಬೆಳ್ಳಿ ದರದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆಜಿ ಬೆಳ್ಳಿ ದರ 62,700 ರೂಪಾಯಿ ಇದೆ. 

ಚೆನ್ನೈಯಲ್ಲಿ(Chennai) ದರ ಹೀಗಿದೆ

ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು 45,590ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ 49,730ರೂಪಾಯಿಯೇ ಮುಂದುವರೆದಿದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿ ಒಂದು ಕೆಜಿಗೆ 66,600 ರೂಪಾಯಿ ಆಗಿದೆ. 

Follow Us:
Download App:
  • android
  • ios