ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರದಲ್ಲಿ ದೊಡ್ಡ ಬದಲಾವಣೆಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಕೊಂಚ ಇಳಿಕೆಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿಯ ದರ ಹೇಗಿದೆ

ಬೆಂಗಳೂರು (ಜ.20): ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ದೊಡ್ಡ ಮಟ್ಟದ ಏರಿಕೆಯಾಗುತ್ತಿದ್ದು, ಗುರುವಾರವೂ ದರದಲ್ಲಿ ಏರಿಕೆ ಕಂಡಿದೆ. ಹಾವು ಏಣಿ ಆಟದಂತಾಗುವ ಚಿನ್ನಾಭರಣಗಳ ಬೆಲೆ ನಿರ್ಧಾರದಲ್ಲಿ ಅಂತಾರಾಷ್ಟ್ರೀಯ ವಿಚಾರಗಳು ಮಹತ್ವದ್ದಾಗಿದೆ. ಚಿನ್ನ (Gold)ಅಂದ್ರೆ ಮಹಿಳೆಯರಿಗೆ ವಿಶೇಷವಾದ ಆಕರ್ಷಣೆ. ಅದೆಷ್ಟೇ ಆಭರಣಗಳಿದ್ರೂ ಇನ್ನೂ ಖರೀದಿಸೋ ಬಯಕೆ. ಇದೇ ಕಾರಣಕ್ಕೆ ಪ್ರತಿದಿನ ಚಿನ್ನದ ಬೆಲೆ ಪರಿಶೀಲಿಸೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅಂಥವರಿಗೆ ಇಂದಿನ ದರ ಸ್ವಲ್ಪ ನಿರಾಳ ನೀಡಬಹುದು. ಕಳೆದ ಕೆಲ ದಿನಗಳಿಂದ ಏರಿಕೆ ಹಾದಿಯಲ್ಲಿದ್ದ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿದೆ. ಜನವರಿ 20ರ ಗುರುವಾರ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಇರುವ ಬೆಲೆಯೆಷ್ಟು? ಇಲ್ಲಿದೆ ವರದಿ
"

ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru) ಚಿನ್ನದ ದರದಲ್ಲಿ 130 ರೂಪಾಯಿ ಇಳಿಕೆಯಾಗಿದೆ. ನಿನ್ನೆ 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 45, 100 ರೂಪಾಯಿ ಆಗಿದ್ದರೆ, ಇಂದು 44, 970 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ 130 ರೂಪಾಯಿ ಇಳಿಕೆಯಾಗಿದ್ದು, ಇಂದಿನ ದರ 49, 070 ಆಗಿದೆ. ಇನ್ನು ಬೆಳ್ಳಿ ದರದಲ್ಲಿ ಸತತ ಮೂರನೇ ದಿನ ದೊಡ್ಡ ಮಟ್ಟದ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 2800 ರೂಪಾಯಿ ಏರಿಕೆಯಾಗಿದ್ದು, ನಿನ್ನೆ 66,000 ಸಾವಿರವಿದ್ದ ಬೆಳ್ಳಿ ದರ ಇಂದು 68,800 ರೂಪಾಯಿಗೆ ತಲುಪಿದೆ.

Add Asianetnews Kannada as a Preferred SourcegooglePreferred

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ (Delhi)ಕೂಡ ಚಿನ್ನದ ಬೆಲೆಯಲ್ಲಿ ಕೊಂಚ ಬದಲಾವಣೆ ಆಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದ್ದು, 47,260ರೂ. ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ 10 ರೂಪಾಯಿ ಏರಿಕೆಯಾಗಿದ್ದು, 51,510 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ ಮತ್ತೆ 1400 ರೂಪಾಯಿ ಏರಿಕೆಯಾಗಿದೆ. ನಿನ್ನೆ 63,200 ರೂಪಾಯಿ ಇದ್ದ 1 ಕೆಜಿ ಬೆಳ್ಳಿ ದರ ಇಂದು 64,600 ರೂಪಾಯಿ ಆಗಿದೆ.

Sri Lanka Bankrupt : ಭಾರತದ ಉದಾಹರಣೆ ನೀಡಿ, 3.6 ಟನ್ ಚಿನ್ನ ಮಾರಾಟ ಮಾಡಿದ ಶ್ರೀಲಂಕಾ!
ಮುಂಬೈನಲ್ಲಿಎಷ್ಟಿದೆ ದರ?

ಮುಂಬೈನಲ್ಲಿ (Mumbai) 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೊಂಚ ಏರಿಕೆ ಕಂಡಿದೆ. 10 ರೂಪಾಯಿ ಏರಿಕೆ ಕಂಡು 47,170 ರೂಪಾಯಿ ಆಗಿದೆ. 24 ಕ್ಯಾರಟ್ ನ 10 ಗ್ರಾಂ ಚಿನ್ನದ ದರದಲ್ಲೂ 10 ರೂಪಾಯಿ ಏರಿಕೆ ಕಂಡು 49, 170 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ದರದಲ್ಲಿ1400 ರೂಪಾಯಿ ಇಳಿಕೆಯಾಗಿದ್ದು, ನಿನ್ನೆ 63,200 ರೂಪಾಯಿ ಇದ್ದ ಬೆಳ್ಳಿ ದರ ಇಂದು 64,600 ರೂಪಾಯಿ ಆಗಿದೆ.

Gold Fraud: ನಕಲಿ ಚಿನ್ನದಂಗಡಿ ತೆರೆದು ಅಕ್ಕಸಾಲಿಗನಿಗೆ ಮೋಸ..!
ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ (Chennai) 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 380 ರೂಪಾಯಿ ಏರಿಕೆಯಾಗಿದೆ. ನಿನ್ನೆ 45, 430 ರೂಪಾಯಿ ಇದ್ದ 10 ಗ್ರಾಂ ಚಿನ್ನದ ದರ ಇಂದು 45,810 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲೂ 440 ರೂಪಾಯಿ ಏರಿಕೆಯಾಗಿದೆ. 24 ಕ್ಯಾರಟ್ ನ 10 ಗ್ರಾಂ ಚಿನ್ನದ ದರ ನಿನ್ನೆ 49, 560 ರೂಪಾಯಿ ಆಗಿದ್ದರೆ, ಇಂದು 50 ಸಾವಿರ ರೂಪಾಯಿ ಆಗಿದೆ. ಇನ್ನು 1 ಕೆಜಿ ಬೆಳ್ಳಿ ದರದಲ್ಲಿ ಮತ್ತೆ 1500 ರೂಪಾಯಿ ಏರಿಕೆಯಾಗಿದ್ದು, 68,800 ರೂಪಾಯಿ ಆಗಿದೆ.

ಒಂದು ದಿನ ಕುಸಿಯುವ ಚಿನ್ನದ ದರ ಮರುದಿನವೇ ಏರಿಕೆಯ ಹಾದಿ ಹಿಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಿರುವಾಗ ಚಿನ್ನ ಖರೀದಿಸಲು ಇದು ಉತ್ತಮ ಸಮಯವಾ? ಅಥವಾ ಇನ್ನೂ ಕೊಂಚ ಕಾಯುವುದು ಸರಿನಾ? ಎಂಬ ಪ್ರಶ್ನೆಯೂ ಈ ಗೊಂದಲಕ್ಕೆ ಕಾರಣವಾಗಿದೆ. ಬೆಳ್ಳಿಯ ದರದಲ್ಲಿ ದೊಡ್ಡ ಮಟ್ಟದ ಏರಿಕೆ ಕಾಣುತ್ತಿರುವುದು ಗ್ರಾಹಕರ ಬೇಸರಕ್ಕೂ ಕಾರಣವಾಗಿದೆ.