GSTಯಲ್ಲೊಂದು ಸಣ್ಣ ರಂಧ್ರ: ಸುಧಾರಣೆಗೆ ಸೈ ಕೇಂದ್ರ!

GST ನ್ಯೂನ್ಯತೆ ಸರಿಪಡಿಸಲು ಮುಂದಾದ ಕೇಂದ್ರ| ನಾಳೆ(ಜು.01)ಕ್ಕೆ GST ಜಾರಿಯಾಗಿ ಒಂದು ವರ್ಷ| GSTಯಲ್ಲಿ ಬದಲಾವಣೆಗೆ ಅಸ್ತು ಎಂದ ಕೇಂದ್ರ ಸರ್ಕಾರ|  ರಿಟರ್ನ್ ಫೈಲಿಂಗ್, ಕ್ಯಾಶ್ ಲೆಡ್ಜರ್ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ| 

Centre To Roll Out New GST  Rules

ನವದೆಜಲಿ(ಜೂ.30): ಮಹತ್ವದ ಬೆಳವಣಿಗೆಯೊಂದರಲ್ಲಿ GSTಯಲ್ಲಿರುವ ಕೆಲವು ನ್ಯೂನ್ಯತೆಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಜಿಎಸ್ ಟಿ ಜಾರಿಯಾಗಿ ನಾಳೆ(ಜು.1) ಕ್ಕೆ 2 ವರ್ಷಗಳು ಪೂರ್ಣಗೊಳ್ಳಲಿದ್ದು, GSTಗೆ ಸಂಬಂಧಿಸಿದ ಕೆಲವು ಬದಲಾವಣೆಗಳನ್ನು ಕೇಂದ್ರ ಸರ್ಕಾರ ಘೋಷಿಸಲಿದೆ. 

ಪ್ರಮುಖವಾಗಿ ರಿಟರ್ನ್ ಫೈಲಿಂಗ್, ಕ್ಯಾಶ್ ಲೆಡ್ಜರ್ ಸೇರಿದಂತೆ ಒಂದೇ ಹಂತದಲ್ಲಿ  ಮರುಪಾವತಿ-ವಿತರಣಾ ಕಾರ್ಯವಿಧಾನದಲ್ಲಿ ಹಲವು ಬದಲಾವಣೆಯಾಗಲಿವೆ ಎನ್ನಲಾಗಿದೆ.

ಅಲ್ಲದೇ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಇರಾದೆ ಹೊಂದಲಾಗಿದ್ದು, ತೆರಿಗೆ ಪಾವತಿದಾರರಿಗೆ ಇದರಿಂದ ಅನುಕೂಲವಾಗಲಿದೆ ಎನ್ನಲಾಗಿದೆ. 
 
ಹೊಸ ರಿಟರ್ನ್ ವ್ಯವಸ್ಥೆ ಜು.1 ರಿಂದ ಪ್ರಾಯೋಗಿಕವಾಗಿ ಜಾರಿಯಾಗಲಿದ್ದು, ಅಕ್ಟೋಬರ್’ನಿಂದ ಕಡ್ಡಾಯವಾಗಿ ಜಾರಿಯಾಗಲಿದೆ. 

Latest Videos
Follow Us:
Download App:
  • android
  • ios