ಕೇಂದ್ರ ಸರ್ಕಾರದಿಂದ ನಾಳೆ 'ಜಿಎಸ್‏ಟಿ ದಿನ' ಆಚರಣೆ!

Centre to celebrate 'GST Day' tomorrow
Highlights

ಕೇಂದ್ರ ಸರ್ಕಾರದಿಂದ ನಾಳೆ 'ಜಿಎಸ್‏ಟಿ ದಿನ' ಆಚರಣೆ

ಹಣಕಾಸು ಇಲಾಖೆ ಪ್ರಕಟಣೆ ಮಾಹಿತಿ

ಜಿಎಸ್‏ಟಿ ತೆರಿಗೆಯಿಂದ ದೇಶ ಒಗ್ಗೂಡಿದೆ

ನವದೆಹಲಿ(ಜೂ.30):  ನಾಳೆ (ಜುಲೈ.೧) ಕ್ಕೆ ಜಿಎಸ್‏ಟಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ಒಂದು ವರ್ಷವಾಗಲಿದ್ದು, ಕೇಂದ್ರ ಸರ್ಕಾರ ನಾಳೆ  'ಜಿಎಸ್‏ಟಿ ದಿನ' ಆಚರಣೆ ಹಮ್ಮಿಕೊಂಡಿದೆ.

ಭಾರತದ ತೆರಿಗೆ ವ್ಯವಸ್ಥೆಯಲ್ಲಿನ ಸುಧಾರಣೆಯಲ್ಲಿ ಭಾಗಿಯಾಗುವುದಕ್ಕೆ ತೆರಿಗೆದಾರರು ಸಿದ್ಧರಿರುತ್ತಾರೆ ಎಂಬುದನ್ನು ಜಿಎಸ್‏ಟಿಯ ಮೊದಲ ವರ್ಷ ಉದಾಹರಣೆ ನೀಡಿದೆ ಎಂದು ಹಣಕಾಸು ಇಲಾಖೆ ಹೇಳಿದೆ. 

2017 ರ  ಜೂ.30-ಜುಲೈ 1 ರಂದು ನವದೆಹಲಿಯ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಜಿಎಸ್‏ಟಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು.

ಜಿಎಸ್‏ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಹಣಕಾಸು ಇಲಾಖೆ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲ ಗೌರವ ಅತಿಥಿಗಳಾಗಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.  ಜಿಎಸ್‏ಟಿ ತೆರಿಗೆಯಿಂದಾಗಿ ದೇಶ ಆರ್ಥಿಕವಾಗಿ ಒಗ್ಗೂಡಿದೆ ಎಂದು ಹಣಕಾಸು ಇಲಾಖೆ ಹೇಳಿದೆ.
 

loader