ನವದೆಹಲಿ(ಏ.22): ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತ ಸಿಬ್ಬಂದಿಗಳಿಗೆ ಬುಧವಾರ ಕೇಂದ್ರ ಸರ್ಕಾರದಿಂದ ಕಹಿ ಸುದ್ದಿ ರವಾನೆಯಾಗುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ, ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಕಳೆದು ತಿಂಗಳು ಘೋಷಿಸಿದ್ದ ಶೇ.4ರಷ್ಟುತುಟ್ಟಿಭತ್ಯೆ ಏರಿಕೆಯನ್ನು ಸರ್ಕಾರ ತಡೆ ಹಿಡಿಯುವ ಸಾಧ್ಯತೆ ಇದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದರಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಶೇ.17ರಿಂದ ಶೇ.21ಕ್ಕೆ ಹೆಚ್ಚಿಸಿತ್ತು.

ಜಗತ್ತಿನಲ್ಲಿ ತೈಲ ಬೆಲೆ ಕುಸಿತ; ಭಾರತಕ್ಕೆ ಲಾಭವಿದೆಯೇ?

ಆದರೆ ಕೊರೋನಾದಿಂದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಈ ತುಟ್ಟಿಭತ್ಯೆ ಏರಿಕೆಯನ್ನು ತಕ್ಷಣಕ್ಕೆ ತಡೆಹಿಡಿಯಲಾಗುವುದು. ಜೊತೆಗೆ ಇದೇ ನೀತಿಯನ್ನು ವರ್ಷಾಂತ್ಯದವರೆಗೂ ವಿಸ್ತರಿಸಲಾಗುವುದು. ಒಂದು ವೇಳೆ ಮುಂದಿನ ವರ್ಷ ಪರಿಸ್ಥಿತಿ ಸುಧಾರಿಸಿದರೆ, ಮುಂದಿನ ವರ್ಷದ ಪ್ರಸಕ್ತ ವರ್ಷದ ಹೆಚ್ಚಳವನ್ನೂ ಸೇರಿಸಿ ನೀಡುವ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ.