ಕೇರಳದಲ್ಲಿ ಆಗಸ್ಟ್ ತಿಂಗಳಲ್ಲಿ ಓಣಂ ಅನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.ಇನ್ನು ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ ನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಹೀಗಾಗಿ ಈ ಎರಡೂ ರಾಜ್ಯಗಳ ಕೇಂದ್ರ ಸರ್ಕಾರಿ ನೌಕರರಿಗೆ ಆಯಾ ಹಬ್ಬದ ತಿಂಗಳ ವೇತನವನ್ನು ಮುಂಗಡವಾಗಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನವದೆಹಲಿ (ಆ.16): ಈ ಎರಡೂ ರಾಜ್ಯಗಳ ಕೆಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಉಡುಗೊರೆ ಸಿಕ್ಕಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ವೇತನ ಹಾಗೂ ಪಿಂಚಣಿ ಮುಂಗಡವಾಗಿ ಕೈಸೇರಲಿದೆ. ಕೇಂದ್ರ ಹಣಕಾಸು ಸಚಿವಾಲಯದ 2023ರ ಆಗಸ್ಟ್ 14ರ ಕಚೇರಿ ಸುತ್ತೋಲೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಕೇರಳ ರಾಜ್ಯದ ಕೇಂದ್ರ ಸರ್ಕಾರಿ ನೌಕರರಿಗೆ ಓಣಂ ಪ್ರಯುಕ್ತ ಆಗಸ್ಟ್ ತಿಂಗಳ ವೇತನ, ಪಿಂಚಣಿ ಆ. 25ರಂದೇ ಕೈಸೇರಲಿದೆ. ಇನ್ನು ಮಹಾರಾಷ್ಟ್ರದ ಕೇಂದ್ರ ಸರ್ಕಾರಿ ನೌಕರರಿಗೆ ಗಣೇಶ ಚತುರ್ಥಿ ಪ್ರಯುಕ್ತ ಸೆಪ್ಟೆಂಬರ್ ತಿಂಗಳ ವೇತನ, ಪಿಂಚಣಿ ಸೆ.27ರಂದೇ ಸಿಗಲಿದೆ. ಈ ಆದೇಶ ಈ ಎರಡು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಇಲಾಖೆ, ದೂರಸಂಪರ್ಕ ಇಲಾಖೆ, ರಕ್ಷಣಾ ಇಲಾಖೆ ಸೇರಿದಂತೆ ಎಲ್ಲ ಉದ್ಯೋಗಿಗಳಿಗೂ ಅನ್ವಯಿಸಲಿದೆ. ಇನ್ನು ಈ ಸೂಚನೆಯನ್ನು ಕೇರಳ ಹಾಗೂ ಮಹಾರಾಷ್ಟ್ರದ ಎಲ್ಲ ಬ್ಯಾಂಕ್ ಗಳ ಎಲ್ಲ ಪಾವತಿ ಶಾಖೆಗಳ ಗಮನಕ್ಕೆ ತರುವಂತೆ ಆರ್ ಬಿಐಯನ್ನು ಕೋರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೇರಳದಲ್ಲಿ ಓಣಂ ಅನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಕೇರಳದ ಜನರ ಪಾಲಿಗೆ ಇದು ಅತ್ಯಂತ ದೊಡ್ಡ ಹಬ್ಬ. ಓಣಂ ಆಗಸ್ಟ್ ತಿಂಗಳಲ್ಲೇ ಇರುವ ಕಾರಣ ಕೇರಳದ ಕೇಂದ್ರ ಸರ್ಕಾರಿ ನೌಕರರಿಗೆ ಆ ತಿಂಗಳ ವೇತನವನ್ನು ಬೇಗ ಪಾವತಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇನ್ನು ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಹೀಗಾಗಿ ಅಲ್ಲಿನ ನೌಕರರಿಗೆ ಸೆಪ್ಟೆಂಬರ್ ತಿಂಗಳ ವೇತನವನ್ನು ಬೇಗ ಪಾವತಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ 1 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳ!
ವೇತನ ಹಾಗೂ ಪಿಂಚಣಿಯನ್ನು ಬೇಗ ನೀಡಿರೋದನ್ನು ಮುಂಗಡ ಪಾವತಿ ಎಂದು ಪರಿಗಣಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ. ಇನ್ನು ಪ್ರತಿಯೊಬ್ಬ ಉದ್ಯೋಗಿಯ ವೇತನ ಅಥವಾ ಪಿಂಚಣಿಯಲ್ಲಿ ಯಾವುದೇ ವ್ಯತ್ಯಾಸವಾದರೂ ಅದನ್ನು ಹೊಂದಾಣಿಕೆ ಮಾಡಲಾಗುವುದು ಎಂದು ಕೂಡ ತಿಳಿಸಲಾಗಿದೆ. ತಕ್ಷಣ ಈ ಸಂಬಂಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಚಿವಾಲಯಗಳು/ಇಲಾಖೆಗಳು ಈ ಸೂಚನೆಗಳನ್ನು ಕೇರಳ/ಮಹಾರಾಷ್ಟ್ರದಲ್ಲಿರುವ ಸಂಬಂಧಪಟ್ಟ ಕಚೇರಿಗಳ ಗಮನಕ್ಕೆ ತರುವಂತೆ ತಕ್ಷಣದಿಂದಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕೇರಳದ ಸರ್ಕಾರಿ ನೌಕರರಿಗೆ ಓಣಂಗೆ 4 ಸಾವಿರ ರೂ. ಬೋನಸ್
ಓಣಂ ಪ್ರಯುಕ್ತ ಕೇರಳ ರಾಜ್ಯ ಸರ್ಕಾರ ಅಲ್ಲಿನ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ 4 ಸಾವಿರ ರೂ. ಬೋನಸ್ ಘೋಷಿಸಿದೆ. ಇನ್ನು ಬೋನಸ್ ಗೆ ಅರ್ಹತೆ ಹೊಂದಿರದ ಸರ್ಕಾರಿ ಉದ್ಯೋಗಿಗಳು 2,750ರೂ. ವಿಶೇಷ ಹಬ್ಬದ ಭತ್ಯೆ ಪಡೆಯಲಿದ್ದಾರೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಣೆ
ತುಟ್ಟಿ ಭತ್ಯೆ ಹೆಚ್ಚಳ ನಿರೀಕ್ಷೆ
ಕೇಂದ್ರ ಸರ್ಕಾರ ತನ್ನ ಒಂದು ಕೋಟಿಗೂ ಅಧಿಕ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು (ಡಿಎ) ಶೇಕಡಾ 42 ರಿಂದ ಶೇ. 45ಕ್ಕೆ ಅಂದರೆ ಶೇ. 3 ಪಾಯಿಂಟ್‌ಗಳಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕಾರ್ಮಿಕ ಬ್ಯೂರೋ ಪ್ರತಿ ತಿಂಗಳು ಹೊರತರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತದೆ. ಪ್ರಸ್ತುತ, ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 42 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. DA ಯಲ್ಲಿ ಕೊನೆಯ ಬಾರಿ ಮಾರ್ಚ್ 24, 2023 ರಂದು ಪರಿಷ್ಕರಣೆಯನ್ನು ಮಾಡಲಾಯಿತು ಮತ್ತು ಜನವರಿ 1, 2023 ರಿಂದ ಜಾರಿಗೆ ಬಂದಿತ್ತು.
