Asianet Suvarna News Asianet Suvarna News

ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಣೆ

ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಜೂ.30ರಿಂದ ಮತ್ತಷ್ಟು ದಿನಗಳ ಕಾಲ ವಿಸ್ತರಣೆಯನ್ನು ಮಾಡಿದೆ. 

Good News for Karnataka Govt Employees Extension of Universal Transfer Period sat
Author
First Published Jun 30, 2023, 12:35 PM IST

ಬೆಂಗಳೂರು (ಜೂ.30): ರಾಜ್ಯದ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಕೊಡುತ್ತಲೇ ಬಂದಿರುವ ನೂತನ ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಣೆಯನ್ನು ಮಾಡಿದೆ. ಈ ಮೂಲಕ ವರ್ಗಾವಣೆಗೆ ಪರದಾಡುತ್ತಿರುವ ಅಧಿಕಾರಿಗಳಿಗೆ ಅನುಕೂಲ ಆಗಲಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.4 ಹೆಚ್ಚಳ ಮಾಡಿ ಸಿಹಿ ಸುದ್ದಿಯನ್ನು ನೀಡಿತ್ತು. ಇದಾದ ನಂತರ, ಹಲವು ವರ್ಷಗಳಿಂದ ವರ್ಗಾವಣೆಗೆ ಕಾದು ಕುಳಿತಿದ್ದ ಸರ್ಕಾರಿ ನೌಕರರಿಗೆ ಅನುಕೂಲ ಆಗುವಂತೆ ಸಾರ್ವತರಿಕ ವರ್ಗಾವಣೆಗೂ ಚಾಲನೆಯನ್ನು ನೀಡಿತ್ತು. ಜೂನ್ 1 ರಿಂದ 15 ರವರೆಗೆ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿತ್ತು. ಇದಾದ ನಂತರ ಸಾರ್ವತ್ರಿಕ ವರ್ಗಾವಣೆ ಅವಧಿಯಲ್ಲಿ ಜೂ.30ರವರೆಗೆ ವಿಸ್ತರಣೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ವಿಸ್ತರಣೆ ಮಾಡಿರುವ ಸರ್ಕಾರ ಜು.3ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರಿ ನೌಕರರಿಗೆ ಶೇ.4 ತುಟ್ಟಿಭತ್ಯೆ ಹೆಚ್ಚಳ: ಜನವರಿಯಿಂದ ಪೂರ್ವಾನ್ವಯ

ಇನ್ನು ರಾಜ್ಯದಲ್ಲಿ ಮುಖ್ಯವಾಗಿ ಸರ್ಕಾರಿ ನೌಕರರ ವರ್ಗಾವಣೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ಆಯಾ ಸಂಬಂಧಿತ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ. ಇನ್ನು ಆಯಾ ಇಲಾಖಾ ಸಚಿವರೇ ತಮ್ಮ ಇಲಾಖೆಗೆ ಸಂಬಂಧಿಸಿದ ವರ್ಗಾವಣಾ ಕಾರ್ಯಗಳನ್ನು ನಿರ್ವಹಣೆ ಮಾಡುವಂತೆ ಸರ್ಕಾರ ಆದೇಶವನ್ನು ಹೊರಡಿಸಿದೆ.

ತುಟ್ಟಿಭತ್ಯೆ ಹೆಚ್ಚಳ ಮಾಡಿದ್ದ ಸರ್ಕಾರ: ರಾಜ್ಯದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಭರ್ಜರಿ ಗಿಫ್ಟ್‌ ಕೊಟ್ಟಿದ್ದಾರೆ. ಸರ್ಕಾರಿ ನೌಕರರ ಬೇಡಿಕೆಯಾಗಿದ್ದ ಬಹುದಿನಗಳ ವೇತನ ಹೆಚ್ಚಳದ ಬೇಡಿಕೆಯನ್ನು ಬಿಜೆಪಿ ಸರ್ಕಾರ ಹೆಚ್ಚಳ ಮಾಡಿತ್ತು. ಆದರೆ, ಇತ್ತೀಚೆಗೆ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವೂ ಕೂಡ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡುವ ಮೂಲಕ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿಯನ್ನು ನೀಡಿತ್ತು.

ಕಾಂಗ್ರೆಸ್‌ ವಿರುದ್ಧ ಕೆಲಸ ಮಾಡಿದವರಿಗೇ ಆಯಕಟ್ಟಿನ ಹುದ್ದೆ:  ಬೆಂಗಳೂರು: ಕಂದಾಯ ಇಲಾಖೆ ಸೇರಿ ಪ್ರಮುಖ ಇಲಾಖೆಗಳಲ್ಲಿ ನಿಷ್ಠಾವಂತ ಕಾಂಗ್ರೆಸ್ಸಿಗರು ಹಾಗೂ ಶಾಸಕರ ಅಭಿಪ್ರಾಯಕ್ಕೂ ಮನ್ನಣೆ ನೀಡದೆ ಬಿಜೆಪಿ ಅವಧಿಯಲ್ಲಿ ಕಾಂಗ್ರೆಸ್‌ ವಿರುದ್ಧ ಕೆಲಸ ಮಾಡಿದ ಅಧಿಕಾರಿಗಳನ್ನೇ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಕಾಂಗ್ರೆಸ್‌ ನಾಯಕರಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆಗಳ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿಷ್ಠಾವಂತ ನಾಯಕರ ಅಭಿಪ್ರಾಯ ನಿರ್ಲಕ್ಷಿಸಿ ವಸೂಲಿ ಬಾಜಿ ನಡೆಸಲು ಕುಮ್ಮಕ್ಕು ನೀಡುವವರನ್ನು ಪ್ರಮುಖ ಹುದ್ದೆಗಳಿಗೆ ತುಂಬಲಾಗುತ್ತಿದೆ ಎಂದು ರಾಜ್ಯ ನಾಯಕರಿಗೆ ದೂರು ನೀಡಿದ್ದು, ಸದ್ಯದಲ್ಲೇ ಹೈಕಮಾಂಡ್‌ಗೂ ದೂರು ಒಯ್ಯಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಸರ್ಕಾರದ ವರ್ಗಾವಣೆ 'ನೀತಿ'ಗೆ ಕಾಂಗ್ರೆಸ್ಸಿಗರೇ ಗರಂ!

ಬಿಜೆಪಿ ನಾಯಕರತ ಸಂಬಂಧಿಗಳಿಗೆ ಅವಕಾಶ: ಕಾಂಗ್ರೆಸ್‌ ನಾಯಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಸರ್ಕಾರ ಹಾಗೂ ಪಕ್ಷವನ್ನು ಬಲಿಕೊಡುವ ಕೆಲಸ ಆಗುತ್ತಿದೆ. ವಸೂಲಿಬಾಜಿತನದಿಂದ ಪಕ್ಷವನ್ನು ರಕ್ಷಿಸಬೇಕಿದೆ. ಬಿಜೆಪಿ ನಾಯಕರ ಸಂಬಂಧಿಗಳಿಗೆ ಅವಕಾಶ ನೀಡುವುದನ್ನು ಬಿಟ್ಟು ಸಂವಿಧಾನದ ಬಗ್ಗೆ ನಿಷ್ಠೆ ಇರುವವರಿಗೆ ಪ್ರಮುಖ ಅವಕಾಶಗಳು ದೊರೆಯಬೇಕು. ಕಾಂಗ್ರೆಸ್‌ ಸರ್ಕಾರದಲ್ಲೂ ಬಿಜೆಪಿ ಪ್ರಭಾವಿಗಳೇ ನೇಮಕಾತಿಗಳು ನಿಯಂತ್ರಿಸುವುದಾದರೆ ನಮ್ಮ ಸರ್ಕಾರ ಯಾಕೆ ಬೇಕಿತ್ತು ಎಂದು ತೀಕ್ಷ್ಣವಾಗಿ ದೂರಿರುವುದಾಗಿ ತಿಳಿದುಬಂದಿದೆ.

Follow Us:
Download App:
  • android
  • ios