ಮುಂಬೈ(ಆ.27): ಲಾಕ್‌ಡೌನ್‌ ಜಾರಿಯಾದ ನಂತರ ದೇಶದಲ್ಲಿ ಜನರು ಮನೆಯಲ್ಲಿ ನಗದು ಕೂಡಿಡುವ ಪ್ರಮಾಣ ಹಾಗೂ ಮಾರುಕಟ್ಟೆಯಲ್ಲಿ ನಗದು ವ್ಯವಹಾರ ನಡೆಸುವ ಪ್ರಮಾಣ ಶೇ.10ರಷ್ಟುಹೆಚ್ಚಾಗಿದೆ. ಅನಿಶ್ಚಯತೆಯ ಭೀತಿಯಿಂದಾಗಿ ಜನರು ನಗದು ಹಣವನ್ನೇ ಹೆಚ್ಚೆಚ್ಚು ಬಳಸುತ್ತಿದ್ದಾರೆ. ಇದರ ಪರಿಣಾಮವಾಗಿ, ಸರ್ಕಾರ ಡಿಜಿಟಲ್‌ ಹಣದ ವ್ಯವಹಾರಕ್ಕೆ ಸಾಕಷ್ಟುಪ್ರೋತ್ಸಾಹ ನೀಡುತ್ತಿದ್ದರೂ ಜಿಡಿಪಿ ಮತ್ತು ಕರೆನ್ಸಿ ನೋಟಿನ ನಡುವಿನ ಅನುಪಾತ ನೋಟು ಅಮಾನ್ಯೀಕರಣಕ್ಕಿಂತ ಮುಂಚೆ ಇದ್ದ ಶೇ.12ಕ್ಕೆ ಈಗ ಏರಿಕೆಯಾಗಿದೆ ಎಂದು ಆರ್‌ಬಿಐ ಹೇಳಿದೆ.

ಮಂಗಳವಾರ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಬಿಡುಗಡೆ ಮಾಡಿದ 2019-20ರ ವಾರ್ಷಿಕ ವರದಿಯಲ್ಲಿ ಈ ಅಂಶಗಳಿವೆ. ಅಚ್ಚರಿಯ ಸಂಗತಿಯೆಂದರೆ, ಡಿಜಿಟಲ್‌ ಹಣದ ವ್ಯವಹಾರ ಕೂಡ ಪ್ರತಿ ತಿಂಗಳು ಏರಿಕೆಯಾಗುತ್ತಲೇ ಇದೆ. ಇದು ಕಳೆದ ತಿಂಗಳು ದಾಖಲೆಯ 150 ಕೋಟಿ ರು. ತಲುಪಿದೆ. ಆದರೂ ಮನೆಯಲ್ಲಿ ನಗದು ಇರಿಸಿಕೊಳ್ಳುವ ಪ್ರಮಾಣ ಹಾಗೂ ಮಾರುಕಟ್ಟೆಯಲ್ಲಿ ನಗದು ಚಲಾವಣೆಯ ಪ್ರಮಾಣವೂ ಜಾಸ್ತಿಯಾಗಿದೆ.

ದೇಶದಲ್ಲಿ ಮಾಚ್‌ರ್‍ 20ರ ನಂತರ ಕರೆನ್ಸಿ ಚಲಾವಣೆಯ ಪ್ರಮಾಣ 26.9 ಲಕ್ಷ ಕೋಟಿ ರು.ಗಳಿಗೆ ಏರಿಕೆಯಾಗಿದೆ. ಇದು ಲಾಕ್‌ಡೌನ್‌ ಪೂರ್ವದಲ್ಲಿದ್ದ ನಗದು ಚಲಾವಣೆಯ ಪ್ರಮಾಣಕ್ಕಿಂತ ಶೇ.10ರಷ್ಟುಹೆಚ್ಚು. ದೇಶದಲ್ಲಿರುವ ಒಟ್ಟು ಕರೆನ್ಸಿಯಲ್ಲಿ ಜನರ ಕೈಲಿದ್ದ ನಗದಿನ ಪ್ರಮಾಣ ಈ ವರ್ಷದ ಫೆ.28ಕ್ಕೆ ಶೇ.11.3 ಇದ್ದುದು ಮಾಚ್‌ರ್‍ ಅಂತ್ಯಕ್ಕೆ ಶೇ.14.5ಕ್ಕೆ ಹಾಗೂ ಜೂನ್‌ ವೇಳೆಗೆ ಶೇ.21.3ಕ್ಕೆ ಏರಿಕೆಯಾಗಿದೆ. ಬ್ಯಾಂಕ್‌ನಲ್ಲಿ ಜನರು ಠೇವಣಿ ಇರಿಸುವ ಪ್ರಮಾಣ ಇದೇ ವೇಳೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಇದು ಭಾರತದಲ್ಲಿ ಮಾತ್ರ ಕಂಡುಬಂದಿರುವ ವಿದ್ಯಮಾನವಲ್ಲ. ಕೊರೋನಾ ವೈರಸ್‌ ಹಾವಳಿ ಹೆಚ್ಚಿರುವ ಎಲ್ಲಾ ದೇಶಗಳಲ್ಲೂ, ಅಂದರೆ ಬ್ರೆಜಿಲ್‌, ಚಿಲಿ, ರಷ್ಯಾ, ಟರ್ಕಿ, ಅಮೆರಿಕ, ಸ್ಪೇನ್‌, ಇಟಲಿ, ಜರ್ಮನಿ, ಫ್ರಾನ್ಸ್‌ ಮುಂತಾದ ದೇಶಗಳಲ್ಲಿ, ಜನರು ಕೈಯಲ್ಲಿ ನಗದು ಇರಿಸಿಕೊಳ್ಳುವ ಪ್ರಮಾಣ ಜಾಸ್ತಿಯಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ತಿಳಿಸಿದೆ. ಇನ್ನು, ಭಾರತದಲ್ಲಿ ಕಳೆದ ಎರಡು ವರ್ಷದಿಂದ 2000 ರು. ನೋಟಿನ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

ರೂ. 2000 ನೋಟಿನ ಕಥೆ ಮುಗೀತಾ? ಕಳೆದ ವರ್ಷ ಒಂದೇ ಒಂದು ನೋಟ್ ಪ್ರಿಂಟ್ ಆಗಿಲ್ಲ!

"