ವಿದ್ಯಾರ್ಥಿನಿಯರಿಗೆ ಸ್ಕೂಟರ್‌, SCSTಗೆ 12 ಲಕ್ಷ: ಮತ್ತಷ್ಟು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಜಯಗಳಿಸಿದರೆ 18 ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌, ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ 12 ಲಕ್ಷ ರು. ಆರ್ಥಿಕ ನೆರವು ನೀಡುವುದಾಗಿ ಕಾಂಗ್ರೆಸ್‌ ಬುಧವಾರ ಘೋಷಿಸಿದೆ.

Telangana Assembly Election Scooter for girl students 12 lakhs for SCST Congress announced further guarantee akb

ಹೈದರಾಬಾದ್‌: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಜಯಗಳಿಸಿದರೆ 18 ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌, ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ 12 ಲಕ್ಷ ರು. ಆರ್ಥಿಕ ನೆರವು ನೀಡುವುದಾಗಿ ಕಾಂಗ್ರೆಸ್‌ ಬುಧವಾರ ಘೋಷಿಸಿದೆ.

ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಗೆ ಪ್ರಚಾರ ಆರಂಭಿಸಿರುವ ಕಾಂಗ್ರೆಸ್‌ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyankha Gandhi) ‘ಅಂಬೇಡ್ಕರ್‌ ಅಭಯ ಹಸ್ತ ಯೋಜನೆಯಡಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 12 ಲಕ್ಷ ರು.ವರೆಗೆ ಆರ್ಥಿಕ ಸಹಾಯ ನೀಡುವುದರೊಂದಿಗೆ ಎಸ್‌ಸಿ ಸಮುದಾಯಕ್ಕೆ ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ.18ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

2008ರ ಪತ್ರಕರ್ತೆ ಸೌಮ್ಯ ವಿಶ್ವನಾಥನ್‌ ಹತ್ಯೆ ಪ್ರಕರಣದಲ್ಲಿ ಐವರು ದೋಷಿ: ದೆಹಲಿ ಹೈಕೋರ್ಟ್‌

ಅಲ್ಲದೇ ಪ್ರತಿಯೊಂದು ಅಡವಿ ಗ್ರಾಮ ಪಂಚಾಯತ್‌ಗಳಿಗೆ 25 ಲಕ್ಷ ರು. ಆರ್ಥಿಕ ನೆರವು, 1 ವರ್ಷದಲ್ಲಿ 2 ಲಕ್ಷ ನೇಮಕಾತಿ, ನಿರುದ್ಯೋಗಿಗಳಿಗೆ 4 ಸಾವಿರ ರು. ಮಾಸಿಕ ಭತ್ಯೆ, ಹುತಾತ್ಮರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ, ಗಲ್ಫ್‌ (Galf) ದೇಶಗಳಲ್ಲಿ ಯುವಕರಿಗೆ ಕೆಲಸ ದೊರಕಿಸುವುದಕ್ಕಾಗಿ ಗಲ್ಫ್‌ ಸೆಂಟರ್‌ ಸ್ಥಾಪನೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಇದಕ್ಕೂ ಮೊದಲು 500 ರು.ಗೆ ಗ್ಯಾಸ್‌ ಸಿಲಿಂಡರ್‌, ರೈತರ 2 ಲಕ್ಷ ರು. ಸಾಲ ಮನ್ನಾ, ಮಹಿಳೆಯರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ರು. ನೆರವು, ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಮಾಸಿಕ 4 ಸಾವಿರ ರು. ನೆರವು ಮತ್ತು ರೈತರಿಗೆ ವಾರ್ಷಿಕ 15 ಸಾವಿರ ರು. ಆರ್ಥಿಕ ನೆರವು ನೀಡುವ ಭರವಸೆಯನ್ನು ಕಾಂಗ್ರೆಸ್‌ ನೀಡಿತ್ತು.

ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್‌: ಶೇ.4 ರಷ್ಟು ಡಿಎ ಹೆಚ್ಚಳಕ್ಕೆ ಸಂಪುಟ ನಿರ್ಧಾರ

ಈ ವರ್ಷ 34 ಲಕ್ಷ ಮದುವೆಯಿಂದ 4 ಲಕ್ಷ ಕೋಟಿ ವಹಿವಾಟು ನಿರೀಕ್ಷೆ

ನವದೆಹಲಿ: ಉತ್ಥಾನ ದ್ವಾದಶಿಯಿಂದ ಪ್ರಾರಂಭವಾಗುವ ಮದುವೆ ಸೀಸನ್‌ನಲ್ಲಿ ಭಾರತದಲ್ಲಿ 4.25ಲಕ್ಷ ಕೋಟಿ ರು. ವಹಿವಾಟು ನಡೆಯಬಹುದು ಎಂದು ಅಖಿಲ ಭಾರತ ವ್ಯಾಪಾರಸ್ಥರ ಒಕ್ಕೂಟ (Traders Association) ಅಂದಾಜಿಸಿದೆ. ಭಾರತದಲ್ಲಿ ನ.23 ಹಾಗೂ ಡಿ.15ರ ನಡುವೆ ಸುಮಾರು 34 ಲಕ್ಷ ಮದುವೆಗಳು ನಡೆಯುವ ನಿರೀಕ್ಷೆಯಿದ್ದು, ಅದರಿಂದ ವಿವಿಧ ಆತಿಥ್ಯ ವಲಯದ ಉದ್ಯಮಗಳಿಗೆ ಭಾರೀ ಪ್ರಮಾಣದ ವಹಿವಾಟು ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. 

ಇಸ್ರೇಲ್‌ ಹಮಾಸ್‌ ಮಧ್ಯೆ ಇದೇ ಇದುವರೆಗಿನ ಭೀಕರ ಯುದ್ಧ: 7400ಕ್ಕೂ ಹೆಚ್ಚು ಬಲಿ

ದೆಹಲಿಯೊಂದರಲ್ಲೇ ಸುಮಾರು 3.5 ಲಕ್ಷ ವಿವಾಹಗಳು (Wedding) ಸೆಟ್ಟೇರುವ ನಿರೀಕ್ಷೆಯಿದ್ದು, ಅದರಿಂದ 1 ಲಕ್ಷ ಕೋಟಿ ರು. ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿದೆ. ವಿವಾಹವನ್ನು ತಮ್ಮ ಶಕ್ತ್ಯಾನುಸಾರ 3ಲಕ್ಷ ರು. ಇಂದ 1 ಕೋಟಿ ರು.ವರೆಗೂ ಖರ್ಚು ಮಾಡುವವರಿದ್ದು, ಅದರಿಂದ ಆತಿಥ್ಯವಲಯವಲ್ಲದೆ ಕೆಲವು ಸೇವಾ ವಲಯದ ಉದ್ಯಮಗಳಿಗೂ ಭರ್ಜರಿ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಕಳೆದ ಹೋಳಿ ಸಮಯದಲ್ಲೂ ಕರಾರುವಕ್ಕಾಗಿ ಅಂದಾಜಿಸಿದ್ದ ಸಂಸ್ಥೆಯು, 3 ಲಕ್ಷ ಕೋಟಿ ರು. ವಹಿವಾಟು ನಡೆಯುವ ಮೂಲಕ ಕಳೆದ ಬಾರಿಗಿಂತ ಶೇ.25ರಷ್ಟು ವಹಿವಾಟಿನಲ್ಲಿ ಹೆಚ್ಚಳ ಆಗಲಿದೆ ಎಂದು ತಿಳಿಸಿತ್ತು.

Latest Videos
Follow Us:
Download App:
  • android
  • ios