Asianet Suvarna News Asianet Suvarna News

ದೇಶಾದ್ಯಂತ 293 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ: ಹಲವು ರೈಲುಗಳ ಮಾರ್ಗ ಬದಲು

ದೇಶದ ಹಲವು ಭಾಗಗಳಲ್ಲಿ ದಟ್ಟವಾದ ಮಂಜಿನ ಕಾರಣ ಮತ್ತು ದುರಸ್ತಿ ಹಾಗೂ ನಿರ್ವಹಣಾ ಕಾರ್ಯದಿಂದಾಗಿಯೂ ಹಲವು ರೈಲುಗಳನ್ನು ರದ್ದುಗೊಳಿಸಿದೆ.

cancelled trains on 5 january 2023 indian railways releases list of trains cancelled diverted today ash
Author
First Published Jan 5, 2023, 7:41 PM IST

ಕೋವಿಡ್‌ (COVID - 19) ಕಾಲದಲ್ಲಿ ಬಹುತೇಕ ರೈಲುಗಳ (Railways) ಸೇವೆ ಸ್ಥಗಿತಗೊಂಡಿತ್ತು. ಅಲ್ಲದೆ, ಅಂತಾರಾಜ್ಯ ರೈಲುಗಳ ಪ್ರಯಾಣವೂ (Inter State Travel) ಬಹುತೇಕ ಬಂದ್‌ ಆಗಿತ್ತು. ನಂತರ, 2022ರಲ್ಲಿ ಒಂದೊಂದೇ ರೈಲುಗಳ ಸೇವೆ (Railway Service) ಹೆಚ್ಚುತ್ತಾ ಹೋಯಿತು. ಈಗ ಬಹುತೇಕ ರೈಲುಗಳಲ್ಲಿ ಜನ ಕಿಕ್ಕಿರಿದು ತುಂಬಿರುತ್ತಾರೆ. ಅಲ್ಲದೆ, ಭಾರತೀಯ ರೈಲ್ವೆ (Indian Railways) ಸಹ ರೈಲು ಪ್ರಯಾಣಿಕರಿಗೆ ರೈಲುಗಳನ್ನು ಹೆಚ್ಚಿಸುವ ಜತೆಗೆ ಅನೇಕ ಸೇವೆಗಳನ್ನು ನೀಡುತ್ತಿದೆ. ಕೆಲ ಕೋವಿಡ್‌ ಪೂರ್ವ ನಿಯಮಾವಳಿಗಳನ್ನು ಹಲವು ರೈಲುಗಳಿಗೆ ವಾಪಸ್‌ ತರಲಾಗಿದೆ. ಈಗ್ಯಾಕಪ್ಪಾ ಟ್ರೈನ್‌ಗಳ ಬಗ್ಗೆ ಮಾಹಿತಿ ಅಂತೀರಾ..?

ಏಕೆಂದರೆ, ಭಾರತೀಯ ರೈಲ್ವೆ ಜನವರಿ 5, 2023 ರಂದು (ಗುರುವಾರ) ದೇಶಾದ್ಯಂತ 293 ರೈಲುಗಳನ್ನು ರದ್ದುಗೊಳಿಸಿದೆ. ದೇಶದ ಹಲವು ಭಾಗಗಳಲ್ಲಿ ದಟ್ಟವಾದ ಮಂಜಿನ ಕಾರಣ ಮತ್ತು ದುರಸ್ತಿ ಹಾಗೂ ನಿರ್ವಹಣಾ ಕಾರ್ಯದಿಂದಾಗಿಯೂ ಇಂದು ಹಲವು ರೈಲುಗಳನ್ನು ರದ್ದುಗೊಳಿಸಿದೆ. ಅಲ್ಲದೆ, ರೈಲ್ವೆ ಇಲಾಖೆ ಇಂದು 40 ರೈಲುಗಳ ಮಾರ್ಗವನ್ನು ಕಡಿತಗೊಳಿಸಿದೆ. ಇದರ ಜತೆಗೆ 14 ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಿಸಲಾಗಿದ್ದರೆ ಇನ್ನು 19 ರೈಲುಗಳ ಮಾರ್ಗ ಬದಲು ಮಾಡಲಾಗಿದೆ. ಹಾಗೆ, ರದ್ದಾದ ರೈಲುಗಳ ಪಟ್ಟಿಯಲ್ಲಿ ಪ್ರಯಾಣಿಸಲು ನಿಗದಿಪಡಿಸಿದ ಪ್ರಯಾಣಿಕರಿಗೆ IRCTC ಸಂಪೂರ್ಣ ಟಿಕೆಟ್ ದರವನ್ನು ಹಿಂದಿರುಗಿಸುತ್ತದೆ ಎಂದೂ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಇದನ್ನು ಓದಿ: 4000 ಮನೆ ಧ್ವಂಸ ವಿರುದ್ಧ ನಿವಾಸಿಗಳು ಸುಪ್ರೀಂಕೋರ್ಟ್‌ಗೆ

ನವದೆಹಲಿಯಿಂದ ಕಾನ್ಪುರ ಶತಾಬ್ದಿ, ಹೌರಾದಿಂದ ನ್ಯೂ ಜಲ್ಪೈಗುರಿ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಜಯನಗರದಿಂದ ನವದೆಹಲಿಗೆ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಸೇರಿದಂತೆ 293 ರೈಲುಗಳನ್ನು ಇಂದು, ಗುರುವಾರ, ಜನವರಿ 5 ರಂದು ಭಾರತೀಯ ರೈಲ್ವೆ ಸಂಪೂರ್ಣವಾಗಿ ರದ್ದುಗೊಳಿಸಿದೆ. ಇದರ ಜತೆಗೆ, ಭಾರತೀಯ ರೈಲ್ವೆಯು 40 ರೈಲುಗಳನ್ನು ಮೂಲ ಬದಲಾಯಿಸಿದ್ದರೆ ಮತ್ತು 40 ರೈಲುಗಳನ್ನು ಅಲ್ಪಾವಧಿಗೆ ಕೊನೆಗೊಳಿಸಿದೆ. ಹೆಚ್ಚುವರಿಯಾಗಿ, ಹೌರಾದಿಂದ ಪುಣೆ ಡುರೊಂಟೊ ಎಕ್ಸ್‌ಪ್ರೆಸ್ ಮತ್ತು ದೆಹಲಿಯಿಂದ ಕೋಟ್ದ್ವಾರ ಸಿದ್ಧಬಲಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ಸೇರಿದಂತೆ ಭಾರತೀಯ ರೈಲ್ವೆ ಇಲಾಖೆ 17 ರೈಲುಗಳನ್ನು ಮರುಹೊಂದಿಸಲಾಗಿದೆ. ಅಲ್ಲದೆ, 19 ರೈಲುಗಳ ಮಾರ್ಗ ಬದಲಿಸಲಾಗಿದೆ.

ಆನ್‌ಲೈನ್ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ತಮ್ಮ ಮೂಲ ಅಕೌಂಟ್‌ನಲ್ಲಿ ಪೂರ್ಣ ಮರುಪಾವತಿ ಪಡೆಯುತ್ತಾರೆ ಮತ್ತು ಕೌಂಟರ್ ಟಿಕೆಟ್‌ಗಳನ್ನು ಹೊಂದಿರುವವರು ಮರುಪಾವತಿ ಪಡೆಯಲು ರಿಸರ್ವೇಶನ್‌ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ ಎಂದೂ ರೈಲ್ವೆ ಇಲಾಖೆ ತಿಳಿಸಿದೆ. 

ಇದನ್ನೂ ಓದಿ: Yashwanthpur Railway Station: ಡ್ರಮ್‌ನಲ್ಲಿ ಯುವತಿ ಶವ ಪತ್ತೆ: ಬೆಚ್ಚಿಬಿದ್ದ ಪ್ರಯಾಣಿಕರು

ರಾಜ್ಯದ ಯಾವ ರೈಲುಗಳು ರದ್ದು..? 
ಅರಸೀಕೆರೆಯಿಂದ ಹುಬ್ಬಳ್ಳಿಗೆ ಬೆಳಗ್ಗೆ 5: 45ಕ್ಕೆ ಹೊರಡಬೇಕಿದ್ದ ರೈಲು ಸಂಖ್ಯೆ 16213  ರದ್ದಾಗಿದೆ. ಜತೆಗೆ, ಯಶೌಂತಪುರ ಜಂಕ್ಷನ್‌ನಿಂದ ವಾಸ್ಕೋ ಡ ಗಾಮಾಗೆ ಮಧ್ಯಾಹ್ನ 3 ಗಂಟೆಗೆ ಹೊರಡಬೇಕಿದ್ದ  17309 ಎಕ್ಸ್‌ಪ್ರೆಸ್‌ ರೈಲು ಗಾಡಿ ಸಹ ರದ್ದಾಗಿದೆ. ಅಲ್ಲದೆ, ವಾಸ್ಕೋ ಡ ಗಾಮಾದಿಂದ ಯಶವಂತಪುರಕ್ಕೆ ರಾತ್ರಿ 10 ಗಂಟೆ 55 ನಿಮಿಷಕ್ಕೆ ಹೊರಡಬೇಕಿದ್ದ ರೈಲು ಸಂಖ್ಯೆ 17310 ಸಹ ರದ್ದಾಗಿದೆ. ಇನ್ನು, ಹುಬ್ಬಳ್ಳಿಯಿಂದ ಚಿತ್ರದುರ್ಗಕ್ಕೆ ಬೆಳಗ್ಗೆ 7: 10 ಕ್ಕೆ ಹೊರಡಬೇಕಿದ್ದ ರೈಲು ಸಂಖ್ಯೆ 17347 ಸಹ ಕ್ಯಾನ್ಸಲ್‌ ಆಗಿದೆ. ಇನ್ನು, ಇದೇ ರೀತಿ ಚಿತ್ರದುರ್ಗದಿಂದ ಹುಬ್ಬಳ್ಳಿಗೆ  ಮಧ್ಯಾಹ್ನ 2 ಗಂಟೆಗೆ ಹೊರಡಬೇಕಿದ್ದ ರೈಲು ಸಂಖ್ಯೆ 17348 ಸಹ ರದ್ದಾಗಿದೆ. 

ಇದನ್ನೂ ಓದಿ: Chitradurga: ನೇರ ರೈಲು ಮಾರ್ಗ ಕಾಮಗಾರಿ ವೇಳೆ ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ತಾರತಮ್ಯ

Follow Us:
Download App:
  • android
  • ios