Asianet Suvarna News Asianet Suvarna News

Chitradurga: ನೇರ ರೈಲು ಮಾರ್ಗ ಕಾಮಗಾರಿ ವೇಳೆ ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ತಾರತಮ್ಯ

ಇರೋದು ಎರಡು ಎಕರೆ ಜಮೀನು ಮಾತ್ರ. ರೈಲು ಮಾರ್ಗಕ್ಕಾಗಿ ಆ ಜಮೀನಿನ 20 ಗುಂಟೆ ಜಮೀನನ್ನು ಭೂ ಸ್ವಾಧೀನ ಅಧಿಕಾರಿಗಳು ವಶಪಡಿಸಿ ಕೊಂಡಿದ್ದರು. ಇದೀಗ ನಮಗೆ ಅನ್ಯಾಯ ಆಗಿದೆ ಸೂಕ್ತ ಪರಿಹಾರ ಒದಗಿಸಿ ಕೊಡಿ ಎಂದು ನ್ಯಾಯ ಕೋರಿ ಲೋಕಾಯುಕ್ತಗೆ ರೈತ ಪತ್ರ ಬರೆದಿದ್ದಾನೆ.

officials Discrimination  giving compensation to the farmers  in construction  direct railway line at Chitradurga  gow
Author
First Published Jan 2, 2023, 6:30 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.2): ಆ ರೈತನದ್ದು ಇರೋದು ಎರಡು ಎಕರೆ ಜಮೀನು ಮಾತ್ರ. ರೈಲು ಮಾರ್ಗಕ್ಕಾಗಿ ಆ ಜಮೀನಿನ 20 ಗುಂಟೆ ಜಮೀನನ್ನು ಭೂ ಸ್ವಾಧೀನ ಅಧಿಕಾರಿಗಳು ವಶಪಡಿಸಿ ಕೊಂಡಿದ್ದರು. ಆದರೆ, ಪರಿಹಾರ ನೀಡಿದ್ದು ಅಷ್ಟಕ್ಕಷ್ಟೇ. ಇದ್ರಿಂದ ಬೇಸರಗೊಂಡ ರೈತ ನ್ಯಾಯ ಕೊಡಿಸಿ ಸ್ವಾಮಿ ಎಂದು ಲೋಕಾಯುಕ್ತ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾನೆ.   ಹೀಗೆ ಹಸಿರು ತುಂಬಿರೋ ಜಮೀನು ; ಅದರಲ್ಲಿ ಕೆಲಸ ಮಾಡ್ತಿರೋ ಕುಟುಂಬ. ಇದು ಚಿತ್ರದುರ್ಗ ಜಿಲ್ಲೆ ಭರಮಸಾಗರ ಬಳಿಯ ಹೆಗ್ಗೆರೆ ಗ್ರಾಮದ ಹೊನ್ನಪ್ಪ ಅವರ ಕುಟುಂಬ. ಇವರ ಈ ಎರಡು ಎಕರೆ ಜಮೀನಿನಲ್ಲಿ ಭೂ ಸ್ವಾಧೀನಾಧಿಕಾರಿಗಳು ರೈಲ್ವೆ ಮಾರ್ಗ ನಿರ್ಮಾಣಕ್ಕೆ 25 ಗುಂಟೆ ಜಮೀನನ್ನು ವಶಪಡಿಸಿಕೊಂಡಿದ್ದರು. ಆದರೆ ನೀಡಿದ ಪರಿಹಾರ ಬಹಳ ಕಡಿಮೆ ಎಂಬುದು ರೈತ ಹೊನ್ನಪ್ಪ ಅವರ ಮಾತು. ನನ್ನಷ್ಟೇ ಜಮೀನು ಹೋದವರು ನನಗಿಂತ ಹೆಚ್ಚು ಪರಿಹಾರ ಪಡೆದುಕೊಂಡಿದ್ದಾರೆ. ಅವರೆಲ್ಲ ಲಂಚ ನೀಡಿದ್ದಕ್ಕೆ ಅವರಿಗೆ ಹಾಗೇ ಪರಿಹಾರ ನೀಡಲಾಗಿದೆ. ನನ್ನ ತೋಟದ ಗಿಡಗಳಷ್ಟೇ ಉಳಿದವರ ಗಿಡಗಳು ನಾಶವಾಗಿವೆ. ಹೀಗಾಗಿ ನಾನು ಈ ಬಗ್ಗೆ ಲೋಕಾಯುಕ್ತಕ್ಕು ದೂರು ಸಲ್ಲಿಸಿದ್ದೇನೆ ಎಂದು ಹೊನ್ನಪ್ಪ ಆರೋಪಿಸುತ್ತಾರೆ‌. 

'ಗೋವಾ-ಯಶವಂತಪುರ ನೇರ ರೈಲು ಮೆಜೆಸ್ಟಿಕ್‌ವರೆಗೂ ಹೋಗಲಿ'

ಇನ್ನು ಈ ಬಗ್ಗೆ ರೈತ ಹೊನ್ನಪ್ಪ ಅವರು ಜಿಲ್ಲಾಧಿಕಾರಿಗಳನ್ನು ಕೇಳಿದರೆ ಕೋರ್ಟಿಗೆ ಹೋಗಿ ಎನ್ನುತ್ತಾರಂತೆ. ಹಾಗಾಗಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಅವರಿಗೆ ಸಂಬಂಧಿಸಿದ ಇಲಾಖೆಗೆ ಸೇರಿದೆ.‌ ಈಗಾಗಲೇ ಇದರ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಭೂ ಸ್ವಾಧೀನ‌ ಪ್ರಕ್ರಿಯೆ ವೇಗದಿಂದ ನಡೆದಿದೆ. ಉಳಿದ ಬೇಡಿಕೆ ಹಣವನ್ನು ಸ್ವಲ್ಪದಿನದಲ್ಲಿ ಕೊಡಿಸುತ್ತೇನೆ. ಆದರೆ ಈ ವಿಚಾರವಾಗಿ ರೈತರು ಪರಿಹಾರದಲ್ಲಿ ತಾರತಮ್ಯವಾಗಿದೆ ಎಂದು ಲೋಕಾಯುಕ್ತರಿಗೆ ದೂರು ನೀಡಿರುವುದು ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ.

Indian Railway Service: ಗುಡ್ ನ್ಯೂಸ್ : ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು

 ಒಂದು ಕಡೆ ಜಮೀನು ಕಳೆದುಕೊಂಡ ರೈತನ ಆರೋಪ. ಇನ್ನೊಂದು ಕಡೆ ಕೆಲಸ ಭರದಿಂದ ಸಾಗಿದೆ ಎಂಬ ಸಬೂಬು. ಆದರೆ ತನ್ನಷ್ಟೇ ಜಮೀನು ಕಳೆದು ಕೊಂಡಿರುವ ರೈತರು ತನಗಿಂತ ಹೆಚ್ಚು ಪರಿಹಾರ ಹಣ ಪಡೆದಿದ್ದಾರೆ. ನನಗೆ ಅನ್ಯಾಯವಾಗಿದೆ ಎಂಬ ರೈತನ ದಾರಿಗೆ ಅಧಿಕಾರಿಗಳ ಸ್ಪಂದನೆ ಸಿಗಬೇಕಿದೆ.

Follow Us:
Download App:
  • android
  • ios