Asianet Suvarna News Asianet Suvarna News

ಎಟಿಎಂ ದೈನಂದಿನ ವಹಿವಾಟು ಮಿತಿ ಹೆಚ್ಚಿಸಿದ ಕೆನರಾ ಬ್ಯಾಂಕ್; ಡೆಬಿಟ್ ಕಾರ್ಡ್ ಬಳಕೆ ಮಿತಿ ಎಷ್ಟು?

ಕೆನರಾ ಬ್ಯಾಂಕ್  ಡೆಬಿಟ್ ಕಾರ್ಡ್, ಪಿಒಎಸ್ ಹಾಗೂ ಇ-ಕಾಮರ್ಸ್ ವಹಿವಾಟುಗಳ ದೈನಂದಿನ ಮಿತಿ ಹೆಚ್ಚಿಸಿದೆ. ಹೀಗಾಗಿ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಕೆದಾರರು ಈ ಮಿತಿ ಬಗ್ಗೆ ಮಾಹಿತಿ ಹೊಂದಿರೋದು ಉತ್ತಮ. 

Canara Bank hikes daily card transaction limit for debit cards
Author
First Published Dec 8, 2022, 2:56 PM IST

ನವದೆಹಲಿ (ಡಿ.8): ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್, ಪಿಒಎಸ್ ಹಾಗೂ ಇ-ಕಾಮರ್ಸ್ ವಹಿವಾಟುಗಳ ದೈನಂದಿನ ಮಿತಿಯನ್ನು ಹೆಚ್ಚಿಸಿದೆ. ಇದು ಈ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕೆನರಾ ಬ್ಯಾಂಕ್ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಎಟಿಎಂ ದೈನಂದಿನ ವಹಿವಾಟು ಮಿತಿಯನ್ನು 40 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಕೆನರಾ ಬ್ಯಾಂಕ್ ಹೆಚ್ಚಳ ಮಾಡಿದೆ. ಇನ್ನು ಪಿಒಎಸ್ ಮಿತಿಯನ್ನು ಒಂದು ಲಕ್ಷ ರೂ.ನಿಂದ ಎರಡು ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.  ಕೆನರಾ ಬ್ಯಾಂಕ್ ಕ್ಲಾಸಿಕ್ ಡೆಬಿಟ್ ಕಾರ್ಡ್ ಮೂಲಕ ಮಾಡುವ ಎನ್ ಎಫ್ ಸಿ ವಹಿವಾಟನ್ನು ಮಾತ್ರ ಕೆನರಾ ಬ್ಯಾಂಕ್ ಹೆಚ್ಚಳ ಮಾಡಿಲ್ಲ. ಅದು ಈ ಹಿಂದಿನಂತೆ 25 ಸಾವಿರ ರೂ. ಇದೆ. ಒಮ್ಮೆಗೆ ಐದು ಸಾವಿರ ರೂ. ನಂತೆ ಪ್ರತಿದಿನ ಐದು ವಹಿವಾಟಿಗೆ ಅವಕಾಶವಿದೆ. ಅಂದರೆ 25 ಸಾವಿರ ರೂ. ವಹಿವಾಟು ನಡೆಸಲು ಅವಕಾಶವಿದೆ. ಪ್ಲಾಟಿನಮ್, ಬ್ಯುಸಿನೆಸ್, ಸೆಲೆಕ್ಟ್ ಡೆಬಿಟ್ ಕಾರ್ಡ್ ಗಳ ನಗದು ವಹಿವಾಟಿನ ಮಿತಿಯನ್ನು ಪ್ರತಿದಿನ 50,000ರೂ.ನಿಂದ 1ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಪಿಒಎಸ್ ಮಿತಿಯನ್ನು ಎರಡು ಲಕ್ಷ ರೂ.ನಿಂದ ಐದು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಕೆನರಾ ಬ್ಯಾಂಕ್ ಭಾರತದ ಉತ್ತಮ ಬ್ಯಾಂಕ್ ಎನಿಸಿಕೊಂಡಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನದಿಂದಾಗಿ ಬ್ಯಾಂಕ್‌ ಆಫ್‌ ಬರೋಡಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕುಗಳು ಗಾತ್ರದಲ್ಲಿ ಕ್ರಮವಾಗಿ 3,4, ಮತ್ತು 5ನೇ ಸ್ಥಾನವನ್ನು ಅಲಂಕರಿಸಿವೆ. ಕೆನರಾ ಬ್ಯಾಂಕ್‌ (Canara Bank) 2021ರ ಸೆಪ್ಟಂಬರ್‌ಗೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಒಟ್ಟು 1,333ಕೋಟಿ ರು. ನಿವ್ವಳ ಲಾಭ (Profit) ಗಳಿಸಿತ್ತು ಕೂಡ. ಜಾಗತಿಕ ವ್ಯವಹಾರದ ಲಾಭದಲ್ಲೂ ಕೂಡ ಬ್ಯಾಂಕ್‌ ಮುಂದಿದ್ದು, ಒಟ್ಟು 17,15,000 ಕೋಟಿಗೂ ಹೆಚ್ಚು ಜಾಗತಿಕ ವ್ಯವಹಾರ ನಡೆಸಿ ಶೇ.7.61ರಷ್ಟುಲಾಭ ಗಳಿಸಿದೆ.

ಪಿಎನ್ ಬಿ ಡೆಬಿಟ್ ಕಾರ್ಡ್ ಮಿತಿ ಹೆಚ್ಚಳ?
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಕೂಡ ಡೆಬಿಟ್ ಕಾರ್ಡ್ ಮಿತಿ ಹೆಚ್ಚಳಕ್ಕೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಪ್ಲಾಟಿನಂ ಮಾಸ್ಟರ್ ಕಾರ್ಡ್, ರುಪೇ, ವೀಸಾ ಗೋಲ್ಡ್ ಡೆಬಿಟ್ ಕಾರ್ಡ್ ಮಿತಿ  ಹೆಚ್ಚಳಕ್ಕೆ ಪಿಎನ್ ಬಿ ಆಲೋಚಿಸಿದೆ. ಅದೇರೀತಿ ರುಪೇ ಸೆಲೆಕ್ಟ್ ಹಾಗೂ ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್ ಮಿತಿ ಹೆಚ್ಚಳಕ್ಕೆ ಕೂಡ ಯೋಚಿಸಿದೆ. 

ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಥವಾ ಪಿಎನ್ ಬಿ (PNB) ಪ್ರಮುಖ ನಗರಗಳಲ್ಲಿ ತಿಂಗಳಿಗೆ 3 ಉಚಿತ ಎಟಿಎಂ ವಿತ್ ಡ್ರಾಗಳಿಗೆ ಅವಕಾಶ ಕಲ್ಪಿಸಿದೆ. ಇನ್ನು ಇತರ ಪ್ರದೇಶಗಳಲ್ಲಿ ಎಸ್ ಬಿಐ ಮಾದರಿಯಲ್ಲೇ ಎಟಿಎಂ 3 ಉಚಿತ ವಹಿವಾಟುಗಳಿಗೆ ಅವಕಾಶ ಕಲ್ಪಿಸಿದೆ. ಇದಾದ ಬಳಿಕ ಬ್ಯಾಂಕ್ ಎಟಿಎಂ ವಿತ್ ಡ್ರಾಗಳ ಮೇಲೆ  10ರೂ. ಶುಲ್ಕ ವಿಧಿಸಿದೆ. ಬ್ಯಾಂಕಿನ ನಿತ್ಯದ ವಹಿವಾಟು ಮಿತಿ ಕ್ಲಾಸಿಕ್ ಕಾರ್ಡ್ ಗಳ ಬಳಕೆದಾರರಿಗೆ 25,000ರೂ. ಹಾಗೂ ಗೋಲ್ಡ್ ಹಾಗೂ ಪ್ಲಾಟಿನಂ ಕಾರ್ಡ್ ಗಳನ್ನು ಹೊಂದಿರೋರಿಗೆ 50,000ರೂ.

ಎಚ್ ಡಿಎಫ್ ಸಿ ಬ್ಯಾಂಕ್
ಎಚ್ ಡಿಎಫ್ ಸಿ ಬ್ಯಾಂಕ್ ಕೂಡ ಬಾಡಿಗೆ ಪಾವತಿ ಮಾಡಲು ವಿಧಿಸುವ ವೆಚ್ಚವನ್ನು ಪರಿಷ್ಕರಣೆ ಮಾಡಿದೆ. ಎಚ್ ಡಿಎಫ್ ಸಿ ಬ್ಯಾಂಕ್ ವೆಬ್ ಸೈಟ್ ಪ್ರಕಾರ ಥರ್ಡ್ ಪಾರ್ಟಿ ಮರ್ಚೆಂಟ್ ಬಾಡಿಗೆ ಪಾವತಿಗೆ ಶೇ.10ರಷ್ಟು ಬಾಡಿಗೆ ಮೊತ್ತವನ್ನು ಶುಲ್ಕದ ರೂಪದಲ್ಲಿ ಪಾವತಿಸಬೇಕು. 
 

Follow Us:
Download App:
  • android
  • ios