ಹಣಕಾಸು ವರ್ಷ 11-12 ರಿಂದ ಹಣಕಾಸು ವರ್ಷ 21-22 ರವರೆಗೆ ಬ್ಯಾಂಕ್ ಒಟ್ಟು ₹ 1,29,088 ಕೋಟಿ ಮೌಲ್ಯದ ಕೆಟ್ಟ ಸಾಲವನ್ನು ಕೆನರಾ ಬ್ಯಾಂಕ್ ಕಂಡುಕೊಂಡಿದ್ದು, ಈ ಮೊತ್ತವನ್ನು ರೈಟ್ ಆಫ್ ಮಾಡಿದೆ. ಆದರೆ, ಪ್ರಮುಖ ಡಿಫಾಲ್ಟರ್‌ಗಳು ಯಾರು ಅನ್ನೋದನ್ನ ಬಹಿರಂಗಪಡಿಸಲು ನಿರಾಕರಿಸಿದೆ.
ನವದೆಹಲಿ (ಅ.14): ಕಳೆದ 11 ವರ್ಷಗಳಲ್ಲಿ ಕೆನರಾ ಬ್ಯಾಂಕ್ ಒಟ್ಟು 1.29 ಲಕ್ಷ ಕೋಟಿ ರೂಪಾಯಿ ಕೆಟ್ಟ ಸಾಲವನ್ನು ರೈಟ್ ಆಫ್ ಮಾಡಿದೆ ಎಂದು ಮನಿ ಲೈಫ್ ವೆಬ್‌ಸೈಟ್ ವರದಿ ಮಾಡಿದೆ. ಕೆನರಾ ಬ್ಯಾಂಕ್ ಕಳೆದ 10 ವರ್ಷಗಳಲ್ಲಿ ಎಷ್ಟು ಹಣವನ್ನು ರೈಟ್ ಆಫ್ ಮಾಡಿದೆ ಎಂದು ಆರ್‌ಟಿಐ ಪ್ರಶ್ನೆಗೆ ಸಾರ್ವಜನಿಕ ವಲಯದ ಬ್ಯಾಂಕ್ ಉತ್ತರಿಸಿದೆ. 2011-12ರ ಹಣಕಾಸು ವರ್ಷದಿಂದ 2021-22ರ ಹಣಕಾಸು ವರ್ಷದ ವರೆಗೆ ಒಟ್ಟು 1,29,088 ಕೋಟಿ ಕೆಟ್ಟ ಸಾಲವನ್ನು ರೈಟ್ ಮಾಡಿರುವುದಾಗಿ ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತ ವಿವೇಕ್ ವೇಲಂಕರ್ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಕೆನರಾ ಬ್ಯಾಂಕ್ ಉತ್ತರ ನೀಡಿದೆ. ಕೆನರಾ ಬ್ಯಾಂಕ್ ಕೆಟ್ಟ ಸಾಲದ ಮೊತ್ತವನ್ನು ಹೇಳಿದ್ದರೆ, ಡಿಫಾಲ್ಟರ್‌ಗಳು ಯಾರು ಎನ್ನುವ ಮಾಹಿತಿಯನ್ನು ನೀಡಲು ನಿರಾಕರಿಸಿದೆ. ಆರ್‌ಟಿಐ ಕಾಯ್ದೆಯ ಒಂದು ನಿಯಮವನ್ನು ಉಲ್ಲೇಖಿಸಿ ಡಿಫಾಲ್ಟರ್‌ಗಳ ಹೆಸರನ್ನು ಪ್ರಕಟಿಸದೇ ಇರಲು ತೀರ್ಮಾನ ಮಾಡಿದೆ. "ಮಾಹಿತಿಯು ಸಾಲಗಾರರ ವೈಯಕ್ತಿಕ ಮಾಹಿತಿಯಾಗಿದೆ, ಮತ್ತು ಅದರ ಬಹಿರಂಗಪಡಿಸುವಿಕೆಯು ಸಂಬಂಧಪಟ್ಟವರ ಗೌಪ್ಯತೆಗೆ ಅನಗತ್ಯವಾದ ಆಕ್ರಮಣವನ್ನು ಉಂಟುಮಾಡುತ್ತದೆ ಮತ್ತು ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಜೆ) ಅಡಿಯಲ್ಲಿ ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ನೀಡಲಾಗುತ್ತದೆ" ಎಂದು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಕೆನರಾ ಬ್ಯಾಂಕ್‌ನ (ಸಿಪಿಐಒ) ಆರ್‌ಟಿಐ ಉತ್ತರದಲ್ಲಿ ತಿಳಿಸಿದ್ದಾರೆ.
ವೇಲಂಕರ್ (Vivek Velankar) ಅವರು ತಮ್ಮ ಆರ್‌ಟಿಐನಲ್ಲಿ (RTI) 100 ಕೋಟಿಗಿಂತ ಹೆಚ್ಚಿನ ಸಾಲವನ್ನು ಹೊಂದಿರುವ ಸಾಲಗಾರರ ಒಟ್ಟು ಮೊತ್ತದ ಬಗ್ಗೆ ವಿವರಗಳನ್ನು ಕೇಳಿದರು. ಆದರೆ, ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ ಬ್ಯಾಂಕ್, ವರದಿಯ ಪ್ರಕಾರ "ಮಾಹಿತಿಯನ್ನು ಕೋರಿದ ರೀತಿಯಲ್ಲಿ ನಿರ್ವಹಿಸುವುದಿಲ್ಲ" ಎಂದು ಉತ್ತರಿಸಿದೆ. ಆರ್‌ಟಿಐ ಕಾಯಿದೆಯ ಸೆಕ್ಷನ್ 8(1)(ಜೆ) ಪ್ರಕಾರ, “ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಅಥವಾ ವ್ಯಕ್ತಿಯ ಖಾಸಗಿತನದ ಮೇಲೆ ಅನಗತ್ಯ ಆಕ್ರಮಣವನ್ನು ಉಂಟುಮಾಡುತ್ತದೆ ಸಿಪಿಐಓ ಅಥವಾ ಎಸ್‌ಪಿಐಓ ಅಥವಾ ಮೇಲ್ಮನವಿ ಪ್ರಾಧಿಕಾರವು (Canara Bank) ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯು ಅಂತಹ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು ಸಮರ್ಥಿಸುತ್ತದೆ ಮತ್ತು ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ನೀಡುತ್ತದೆ ಎಂದು ಹೇಳಿದೆ.
ಕೆನರಾ ಬ್ಯಾಂಕ್ ನಿವ್ವಳ ಲಾಭ ಶೇ. 200ರಷ್ಟು ಹೆಚ್ಚಳ
ತನ್ನ ಇನ್ನೊಂದು ಪ್ರಶ್ನೆಯಲ್ಲಿ, ಕಾರ್ಯಕರ್ತ ₹ 1 ಕೋಟಿ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಕೆಟ್ಟ ಸಾಲಕ್ಕಾಗಿ ಬ್ಯಾಂಕ್‌ನಿಂದ ರೈಟ್ ಆಫ್ (Write Off) ಆದ ಮೊತ್ತದ ಬಗ್ಗೆ ಬ್ಯಾಂಕ್‌ಗೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೆನರಾ ಬ್ಯಾಂಕ್ FY11-12 ರಿಂದ FY21-22 ರವರೆಗೆ ಸಾಲಗಾರರ ಒಟ್ಟು ಬಾಕಿ ಮೊತ್ತದ ಮಾಹಿತಿಯನ್ನು ಹಂಚಿಕೊಂಡಿದೆ ಎಂದು ಹೇಳಲಾಗಿದೆ.
ಕೋವಿಡ್ ಇದ್ರೂ ರೈತರಿಗೆ ಬ್ಯಾಂಕ್ ಸಾಲ ನೋಟಿಸ್!
ರೈಟ್ ಆಫ್-ಸಾಲಮನ್ನಾ ವತ್ಯಾಸವೇನು?: ರೈಟ್ ಆಫ್ ಮಾಡಿರುವ ಸಾಲ ಎಂದರೆ, ಕಟ್ಟುಬಾಕಿದಾರರು ಎಂದರ್ಥ. ಹೊಸ ಕಾಯಿದೆಯ ಪ್ರಕಾರ, ಇದನ್ನು ವಿವಿಧ ರೀತಿಯಲ್ಲಿ ವಸೂಲಿ ಮಾಡುವ ಅವಕಾಶವೂ ಇದೆ. ಸಾಲ ಮನ್ನಾ ಅಥವಾ ವೈವ್ ಆಫ್‌ನಲ್ಲಿ (Waive Off) ಸಾಲವನ್ನು ಮರುಪಡೆಯಲು ಸಾಲಗಾರನ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳುವುದಿಲ್ಲ. ಆದರೆ, ರೈಟ್ ಆಫ್ ಅಥವಾ ಸಾಲ ವಜಾ ಪ್ರಕ್ರಿಯೆಯು ಸಾಲದಾತರಿಂದ ಪ್ರಕ್ರಿಯೆಗೊಳಿಸಲಾದ ತೆರಿಗೆ ಹೊಣೆಗಾರಿಕೆಗಳನ್ನು ಕಡಿಮೆ ಮಾಡಲು ಕಾನೂನುಬದ್ಧ ಪ್ರಕ್ರಿಯೆಯಾಗಿದೆ. ವೈವ್ ಆಫ್ ಮಾಡಿದ್ದಲ್ಲಿ ಆ ಹಣ ಮತ್ತೆ ಬ್ಯಾಂಕ್‌ಗೆ ಮರಳುವುದಿಲ್ಲ. ರೈಟ್ ಆಫ್ ಮಾಡಿದಲ್ಲಿ ಸದ್ಯಕ್ಕೆ ಆ ಹಣ ಬ್ಯಾಂಕ್ ಬ್ಯಾಲೆನ್ಸ್ ಶೀಟ್‌ನಿಂದ ಹೊರಗಿರುತ್ತದೆ. ಆದರೆ, ವಿವಿಧ ಪ್ರಕ್ರಿಯೆಗಳ ಮೂಲಕ ಅದರಲ್ಲಿ ಒಂದಷ್ಟು ಹಣವನ್ನು ವಾಪಾಸ್ ಪಡೆಯುವ ವ್ಯವಸ್ಥೆ ಮಾಡಲಾಗಿರುತ್ತದೆ.
