ಜು.31ರ ಬಳಿಕವೂ ಐಟಿಆರ್ ವೆರಿಫೈ ಮಾಡ್ಬಹುದಾ? ಹೇಗೆ? ಇಲ್ಲಿದೆ ಮಾಹಿತಿ
2022-23ನೇ ಹಣಕಾಸು ಸಾಲಿನ ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಈ ದಿನಾಂಕದ ಬಳಿಕವೂ ತೆರಿಗೆದಾರರು ತಾವು ಸಲ್ಲಿಸಿದ ಐಟಿಆರ್ ವೆರಿಫೈ ಮಾಡ್ಬಹುದಾ? ಹೇಗೆ?
Business Desk: 2022-23ನೇ ಹಣಕಾಸು ಸಾಲಿನ ಐಟಿಆರ್ ಸಲ್ಲಿಕೆಗೆ ಇಂದು (ಜು.31) ಅಂತಿಮ ಗಡುವು. ಈ ತನಕ 11.03ಲಕ್ಷ ಐಟಿಆರ್ ಗಳು ಸಲ್ಲಿಕೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಇಂದು ಮಧ್ಯಾಹ್ನ 1 ಗಂಟೆ ಹೊತ್ತಿಗೆ ಟ್ವೀಟ್ ಮಾಡಿತ್ತು. ಇನ್ನು ಈ ತನಕ ಒಟ್ಟು 6.24 ಕೋಟಿ ಐಟಿಆರ್ ಗಳು ಸಲ್ಲಿಕೆಯಾಗಿವೆ. ಇನ್ನು ಮಧ್ಯಾಹ್ನ 1 ಗಂಟೆಗೆ ಮಾಡಿರುವ ಟ್ವೀಟ್ ನಲ್ಲಿ ಆದಾಯ ತೆರಿಗ ಇಲಾಖೆ ಕಳೆದ ಒಂದು ಗಂಟೆಯಲ್ಲಿ 3.39ಲಕ್ಷ ಐಟಿಆರ್ ಗಳು ಸಲ್ಲಿಕೆಯಾಗಿವೆ ಎಂಬ ಮಾಹಿತಿ ನೀಡಿದೆ. ಇವುಗಳಲ್ಲಿ ಸುಮಾರು 5.3 ಕೋಟಿ ಐಟಿಆರ್ ಗಳ ಪರಿಶೀಲನೆ (ಇ-ವೆರಿಫಿಕೇಷನ್ಸ್) ಕೂಡ ಆಗಿದೆ. ಹಾಗಾದ್ರೆ ಈಗಾಗಲೇ ಐಟಿಆರ್ ಸಲ್ಲಿಕೆ ಮಾಡಿರೋರು ಜುಲೈ 31ರ ಬಳಿಕ ಪರಿಶೀಲನೆ (ಇ-ವೆರಿಫೈ) ಮಾಡಬಹುದಾ? ಆದಾಯ ತೆರಿಗೆ ಇಲಾಖೆ ಏನ್ ಹೇಳುತ್ತದೆ? ಇಲ್ಲಿದೆ ಮಾಹಿತಿ.
ಐಟಿಆರ್ ಇ-ವೆರಿಫೈ ಹೇಗೆ?
ಐಟಿಆರ್ ವೆರಿಫೈ ಮಾಡಲು ಅನೇಕ ವಿಧಾನಗಳಿವೆ. ಅವುಗಳಲ್ಲಿ ಇ-ವೆರಿಫೈ ಅತ್ಯಂತ ಸುಲಭವಾದ ವಿಧಾನಗಳಲ್ಲಿ ಒಂದಾಗಿದೆ. ಇದು ಆದಾಯ ತೆರಿಗೆ ರಿಟರ್ನ್ ತಕ್ಷಣ ವೆರಿಫೈ ಮಾಡಲು ನೆರವು ನೀಡುತ್ತದೆ. ಐಟಿಆರ್ ಇ-ವೆರಿಫೈ ಮಾಡಲು ಅನೇಕ ವಿಧಾನಗಳಿವೆ.
1.ಆಧಾರ್ ಒಟಿಪಿ ಮೂಲಕ: ಐಟಿಆರ್ ವೆರಿಫೈ ಮಾಡಲು ಮೊದಲ ವಿಧಾನ ಆಧಾರ್ ಒಟಿಪಿ. ಈ ವಿಧಾನ ಬಳಸಲು ನೀವು ನಿಮ್ಮ ಆದಾಯ ತೆರಿಗೆ ಇ-ಫೈಲಿಂಗ್ ಖಾತೆಗೆ ಭೇಟಿ ನೀಡಿ ಹಾಗೂ ಅಲ್ಲಿಂದ ಇ-ಫೈಲ್ ಟ್ಯಾಬ್ ಗೆ ತೆರಳಿ. ಆದಾಯ ತೆರಿಗೆ ರಿಟರ್ನ್ ಆಯ್ಕೆ ಆರಿಸಿ ಹಾಗೂ ಇ-ವೆರಿಫೈ ರಿಟರ್ನ್ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಆಧಾರ್ ಒಟಿಪಿ ನಮೂದಿಸಿ ಹಾಗೂ ಪ್ರಕ್ರಿಯೆ ಪೂರ್ಣಗೊಳಿಸಲು 'Continue'ಮೇಲೆ ಕ್ಲಿಕ್ ಮಾಡಿ.
ITR Filing:ಜು. 31ರೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಬೀಳುತ್ತೆ 5 ಸಾವಿರ ರೂ. ದಂಡ; ತೆರಿಗೆ ರೀಫಂಡ್ ಕೂಡ ಇಲ್ಲ!
2. ನೆಟ್ ಬ್ಯಾಂಕಿಂಗ್ ಮೂಲಕ: ನೆಟ್ ಬ್ಯಾಂಕಿಂಗ್ ಮೂಲಕ ಕೂಡ ಇ-ವೆರಿಫಿಕೇಷನ್ ಮಾಡಬಹುದು. 'through net banking' ಆಯ್ಕೆ ಮಾಡಿ ಹಾಗೂ ನಿಮ್ಮ ಬ್ಯಾಂಕ್ ಆರಿಸಿ. ಈಗ ನೀವು ನೇರವಾಗಿ ನೆಟ್ ಬ್ಯಾಂಕಿಂಗ್ ಲಾಗಿನ್ ಪೇಜ್ ಗೆ ತೆರಳುತ್ತೀರಿ. ಇಲ್ಲಿ ನೀವು ನಿಮ್ಮ ಕ್ರೆಡೆನ್ಷಿಯಲ್ ನಮೂದಿಸಬೇಕು. ಒಮ್ಮೆ ಲಾಗಿನ್ ಆದ ಬಳಿಕ ನಿಮ್ಮ ರಿಟರ್ನ್ ವೆರಿಫೈ ಮಾಡುವ ಆಯ್ಕೆ ಆರಿಸಿ. ಈಗ ನೀವು ನೇರವಾಗಿ ಇ-ಫೈಲಿಂಗ್ ಪೋರ್ಟಲ್ ಗೆ ತೆರೆದುಕೊಳ್ಳುತ್ತೀರಿ. ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಂಬಂಧಪಟ್ಟ ಐಟಿಆರ್ ಫಾರ್ಮ್ ಮೇಲೆ ವೆರಿಫೈ ಆಯ್ಕೆ ಮೇಲೆ ಕ್ಲಿಕ್ ಮಾಡಿ.
3.ಡಿಮ್ಯಾಟ್ ಖಾತೆ ಮೂಲಕ: ನಿಮ್ಮ ಬಳಿ ಡಿಮ್ಯಾಟ್ ಖಾತೆ ಇದ್ದರೆ, ನೀವು ಇದರ ಮೂಲಕ ಕೂಡ ಇ-ವೆರಿಫೈ ಮಾಡಬಹುದು. ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿಗೆ ಎಲೆಕ್ಟ್ರಾನಿಕ್ ವೆರಿಫಿಕೇಷನ್ ಕೋಡ್ (ಇವಿಸಿ) ಕಳುಹಿಸಲಾಗುತ್ತದೆ. ಇನ್ನು ಇ-ವೆರಿಫೈ ಪುಟದಲ್ಲಿ ಡಿಮ್ಯಾಟ್ ಖಾತೆ ಆಯ್ಕೆ ಮಾಡಿ ಹಾಗೂ ಇವಿಸಿ ನಮೂದಿಸಿ. ಆ ಬಳಿಕ ಪ್ರಕ್ರಿಯೆ ಪೂರ್ಣಗೊಳಿಸಲು ಇ-ವೆರಿಫೈ ಬಟನ್ ಮೇಲೆ ಕ್ಲಿಕ್ ಮಾಡಿ.
4.ಎಟಿಎಂ ಮೂಲಕ: ಬ್ಯಾಂಕ್ ಎಟಿಎಂ ಮೂಲಕ ಇ-ವೆರಿಫಿಕೇಷನ್ ಮಾಡೋದು ಇನ್ನೊಂದು ವಿಧಾನ. ನಿಮ್ಮ ಎಟಿಎಂ ಕಾರ್ಡ್ ಹಾಕಿ, ಎಟಿಎಂ ಪಿನ್ ನಮೂದಿಸಿ. ಆದಾಯ ತೆರಿಗೆ ಫೈಲ್ ಮಾಡಲು ಇವಿಸಿ ಸೃಷ್ಟಿಸುವ ಆಯ್ಕೆ ಆರಿಸಿ. ನಿಮ್ಮ ನೋಂದಾಯಿತ ಇ-ಮೇಲ್ ಹಾಗೂ ಮೊಬೈಲ್ ಸಂಖ್ಯೆಗೆ ಇವಿಸಿ ಕಳುಹಿಸಲಾಗುತ್ತದೆ. ನಿಮ್ಮ ಇ-ಫೈಲಿಂಗ್ ಖಾತೆಗೆ ಲಾಗಿನ್ ಆಗಿ, ಇವಿಸಿ ಈಗಾಗಲೇ ಇರುವ ಆಯ್ಕೆ ಮಾಡಿ ಹಾಗೂ ಅದನ್ನು ಪರಿಶೀಲಿಸಿ.
ಐಟಿಆರ್ ಸಲ್ಲಿಕೆ ಮಾಡೋರಿಗೆ ಈ ನಿಯಮ ತಿಳಿದಿರಲಿ;ಬ್ಯಾಂಕ್ ನಗದು ವಿತ್ ಡ್ರಾಗೂ ಶೇ.2ರಷ್ಟುTDS ಕಡಿತ
5.ಬ್ಯಾಂಕ್ ಖಾತೆ ಮೂಲಕ: ಆದಾಯ ತೆರಿಗೆ ರೀಫಂಡ್ ಮಾಡಲು ನಿಮ್ಮ ಬಳಿ ಈ ಮೊದಲೇ ಪ್ರಿ ವ್ಯಾಲಿಡೇಟೆಡ್ ಬ್ಯಾಂಕ್ ಖಾತೆ ಇದ್ದರೆ, ನೀವು ಇ-ವೆರಿಫಿಕೇಷನ್ ಅನ್ನು ಬ್ಯಾಂಕ್ ಖಾತೆ ಮೂಲಕ ಮಾಡಬಹುದು. ಇವಿಸಿ ಸೃಷ್ಟಿಯಾಗುತ್ತದೆ ಹಾಗೂ ಅದನ್ನು ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿಗೆ ಕಳುಹಿಸಲಾಗುತ್ತದೆ. ವೆರಿಫೈ ಪುಟದ ಮೇಲೆ ಕ್ಲಿಕ್ ಮಾಡಿ ಹಾಗೂ ಬ್ಯಾಂಕ್ ಖಾತೆ ಆಯ್ಕೆ ಆರಿಸಿ. ಆ ಬಳಿಕ ನಿಮಗೆ ದೊರಕಿರುವ ಇವಿಸಿ ನಮೂದಿಸಿ. ಪ್ರಕ್ರಿಯೆ ಪೂರ್ಣಗೊಳಿಸಲು 'e-verify'ಬಟನ್ ಮೇಲೆ ಕ್ಲಿಕ್ ಮಾಡಿ.