ಈಗ ಹಣ ಸಂಪಾದನೆಗೆ ನಾನಾ ದಾರಿ ಇದೆ. ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಮಾತ್ರವಲ್ಲ ಸ್ನ್ಯಾಪ್ಚಾಟ್ ನಿಂದಲೂ ನೀವು ಹಣ ಸಂಪಾದನೆಗೆ ಮಾಡ್ಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ. 

ಯೂಟ್ಯೂಬ್ (YouTube), ಇನ್ಸ್ಟಾಗ್ರಾಮ್ (Instagram) ನಲ್ಲಿ ಹೇಗೆ ಹಣ ಸಂಪಾದನೆ ಮಾಡ್ಬೇಕು ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತು. ಈಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಿಕೆಯ ಉತ್ತಮ ಮೂಲವಾಗಿದೆ. ಜನರು ಹೊಸ ಹೊಸ ಕಂಟೆಂಟ್ ಕ್ರಿಯೇಟ್ ಮಾಡಿ ಪೋಸ್ಟ್ ಹಾಕ್ತಿರ್ತಾರೆ. ವೀವ್ಸ್, ಸಬ್ಸ್ಕ್ರೈಬ್ ಹೆಚ್ಚಾಗ್ತಿದ್ದಂತೆ ಆಯಾ ಪ್ಲಾಟ್ಫಾರ್ಮ್ನಿಂದ ಹಣ ಬರೋಕೆ ಶುರುವಾಗುತ್ತೆ. ಯೂಟ್ಯೂಬ್, ಇನ್ಸ್ಟಾದಲ್ಲಿ ವಿಡಿಯೋ ಪೋಸ್ಟ್ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವವರಿದ್ದಾರೆ. ಆದ್ರೆ ಸ್ನ್ಯಾಪ್ಚಾಟ್ಮೂಲಕವೂ ಹಣ ಗಳಿಸ್ಬಹುದು ಎಂಬ ಸಂಗತಿ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತು.

ಎಲ್ಲರ ಮೊಬೈಲ್ ನಲ್ಲೂ ಸ್ನ್ಯಾಪ್ಚಾಟ್ (Snapchat) ಜಾಗ ಪಡೆದಿದೆ. ಜನರು ಭಿನ್ನ ಫೋಟೋಗಳನ್ನು ಕ್ಲಿಕ್ಕಿಸಲು, ವಿಡಿಯೋ ಮಾಡಲು ಸ್ನ್ಯಾಪ್ಚಾಟ್ಬಳಸಿಕೊಳ್ಳೊದೇ ಹೆಚ್ಚು. ಅಲ್ಲಿ ನಿಮಗೆ ಫೋಟೋಕ್ಕೆ ಸಾಕಷ್ಟು ಆಯ್ಕೆಗಳಿದ್ದು, ಜನರು ಈ ಆಪ್ ಬಳಸಿ ಸುಂದರ ಫೋಟೋ ಕ್ಲಿಕ್ಕಿಸಿ, ಅದನ್ನು ಬೇರೆ ಸೈಟ್ ಗೆ ಅಪ್ ಲೋಡ್ ಮಾಡ್ತಾರೆ. ಈ ಸ್ನ್ಯಾಪ್ಚಾಟ್ಈಗ ಇಷ್ಟಕ್ಕೇ ಮೀಸಲಾಗಿಲ್ಲ. ನೀವು ಅದನ್ನು ಬಳಸಿಕೊಂಡು ಒಂದಿಷ್ಟು ಹಣ ಸಂಪಾದನೆ ಮಾಡ್ಬಹುದು.

ಸ್ನ್ಯಾಪ್ಚಾಟ್ನಿಂದ ಹಣ ಗಳಿಸೋದು ಹೇಗೆ? : ಇತ್ತೀಚಿನ ವರ್ಷಗಳಲ್ಲಿ ಕಂಟೆಂಟ್ ಕ್ರಿಯೇಟರ್ ಗೆ ಸ್ನ್ಯಾಪ್ಚಾಟ್ ವಿಶೇಷ ಸ್ಪ್ಯಾಟ್ಲೈಟ್ (Spotlight) ಫೀಚರ್ ಪ್ರಾರಂಭಿಸಿದೆ. ಇದರಲ್ಲಿ, ಯೂಟ್ಯೂಬ್ ಶಾರ್ಟ್ಸ್ ಅಥವಾ ಇನ್ಸ್ಟಾಗ್ರಾಮ್ ರೀಲ್ಸ್ ನಿಂದ ಹಣ ಗಳಿಸುವಂತೆ ವೈರಲ್ ಆದ ನಿಮ್ಮ ವಿಡಿಯೋಗಳಿಂದ ಹಣ ಸಂಪಾದನೆ ಮಾಡ್ಬಹುದು.

ಸ್ನ್ಯಾಪ್ಚಾಟ್ನ ಸ್ಪಾಟ್ಲೈಟ್ ಫೀಚರ್ ವೀಡಿಯೊ ಫೀಡ್ ಆಗಿದೆ. ಇಲ್ಲಿ ಸಣ್ಣ 60 ಸೆಕೆಂಡ್ ವೀಡಿಯೊಗಳನ್ನು ನೀವು ಅಪ್ಲೋಡ್ ಮಾಡಬೇಕು. ನಿಮ್ಮ ವೀಡಿಯೊ ವೈರಲ್ ಗ್ತಿದ್ದು, ಲಕ್ಷಾಂತರ ವೀವ್ಸ್ ಪಡೆದಿದೆ ಅಂದಾಗ ಸ್ನ್ಯಾಪ್ಚಾಟ್ ನಿಮಗೆ ನೇರವಾಗಿ ಹಣ ಪಾವತಿಸುತ್ತದೆ. ಅನೇಕ ಬಳಕೆದಾರರು ಒಂದೇ ವೀಡಿಯೊಗೆ ಸಾವಿರಾರು ಡಾಲರ್ ಅಂದ್ರೆ ಲಕ್ಷ ರೂಪಾಯಿಗಳವರೆಗೆ ಸಂಪಾದನೆ ಮಾಡ್ತಿದ್ದಾರೆ.

ಬರೀ ವಿಡಿಯೋ ಮಾತ್ರವಲ್ಲ ನೀವು ಬ್ರ್ಯಾಂಡ್ ಮತ್ತು ಪ್ರಚಾರದ ಮೂಲಕವೂ ಹಣ ಗಳಿಸಬಹುದು. ನೀವು ಉತ್ತಮ ಫಾಲೋವರ್ಸ್ ಹೊಂದಿದ್ದರೆ ಬ್ರ್ಯಾಂಡ್ಗಳು ತಮ್ಮ ಉತ್ಪನ್ನ ಅಥವಾ ಸೇವೆಗಳ ಪ್ರಚಾರಕ್ಕೆ ನಿಮ್ಮನ್ನು ಕಾಂಟೆಕ್ಟ್ ಮಾಡುತ್ತವೆ. ಇದಕ್ಕೆ ಪ್ರತಿಯಾಗಿ ನಿಮಗೆ ಹಣ ಅಥವಾ ಉತ್ಪನ್ನವನ್ನು ನೀಡುತ್ತವೆ.

ಅಷ್ಟೇ ಅಲ್ಲದೆ ನೀವು Snapchat ಕಾಲಕಾಲಕ್ಕೆ ಕ್ರಿಯೇಟರ್ಸ್ ಗೆ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇದ್ರಲ್ಲಿ ಪಾಲ್ಗೊಂಡು ನೀವು ನಿಯಮಿತ ಆದಾಯ ಗಳಿಸಬಹುದು. ಇದರಲ್ಲಿ, ನೀವು ನಿರಂತರವಾಗಿ ಗುಣಮಟ್ಟದ ವಿಷಯವನ್ನು ಪೋಸ್ಟ್ ಮಾಡಬೇಕು. ಸ್ಯ್ನಾಪ್ ಚಾಟ್ ಇದಕ್ಕೆ ಪ್ರತಿಯಾಗಿ ಹಣ ಪಾವತಿಸುತ್ತದೆ.

ಸ್ನ್ಯಾಪ್ಚಾಟ್ ನಿಂದ ಗಳಿಕೆ ಶುರು ಮಾಡೋದು ಹೇಗೆ? : ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಸ್ನ್ಯಾಪ್ ಚಾಟ್ ಡೌನ್ಲೋಡ್ ಮಾಡಿ. ಅಲ್ಲಿ ಪ್ರೊಫೇಷನಲ್ ಪ್ರೊಫೈಲ್ ರಚಿಸಿ. ಉತ್ತಮ ಗುಣಮಟ್ಟದ ಫೋಟೋ ಮತ್ತು ಬಯೋ ಬರೆಯಿರಿ. ಪ್ರಯಾಣ, ಫ್ಯಾಷನ್, ಶಿಕ್ಷಣ ಅಥವಾ ಹಾಸ್ಯದಂತಹ ನಿಮ್ಮ ಸಬ್ಜೆಕ್ಟ್ ಗೆ ವಿಶೇಷ ಥೀಮ್ ನೀಡಿ. ಟ್ರೆಂಡಿಂಗ್ ವಿಷಯಗಳ ಕುರಿತು ಸಣ್ಣ, ಸೃಜನಶೀಲ ಮತ್ತು ಮನರಂಜನೆಯ ವೀಡಿಯೊಗಳನ್ನು ರಚಿಸಿ. ವೀಡಿಯೊ ಹೆಚ್ಚಿನ ಜನರನ್ನು ತಲುಪುವಂತೆ ಹ್ಯಾಶ್ಟ್ಯಾಗ್ಗಳು ಮತ್ತು ಶೀರ್ಷಿಕೆಗಳನ್ನು ಸರಿಯಾಗಿ ಬಳಸಿ. ಸ್ಥಿರವಾಗಿ ಸಕ್ರಿಯರಾಗಿರಿ ವಿಡಿಯೋ ಪೋಸ್ಟ್ ಮಾಡಿ. ಕಾಮೆಂಟ್ಗಳಿಗೆ ಪ್ರತಿಕ್ರಿಯಿಸಿ. ಕಥೆಗಳನ್ನು ಪೋಸ್ಟ್ ಮಾಡಿ. ನಿಮ್ಮ ಫಾಲೋವರ್ಸ್ ಜೊತೆ ಸಂಪರ್ಕದಲ್ಲಿರಿ. ಈ ವಿಡಿಯೋಗಳನ್ನು ಇತರ ಸೋಶಿಯಲ್ ಮೀಡಿಯಾಕ್ಕೆ ಲಿಂಕ್ ಮಾಡಿ.