ನೆಟ್ಟಿಗರ ಮನಗೆದ್ದ ಕ್ಯಾಡ್‌ಬರಿ ಜಾಹೀರಾತು..! ಅಷ್ಟಕ್ಕೂ ಏನಿದೆ ಇದರಲ್ಲಿ ?

90ರ ದಶಕದಲ್ಲಿ ದೇಶಾದ್ಯಂತ ಮನೆಮಾತಾಗಿದ್ದ ಕ್ಯಾಡ್‌ಬರಿ ಜಾಹೀರಾತನ್ನು ಲಿಂಗ ಸಮಾನತೆಯ ಹೊಸ ಸ್ಪರ್ಷದೊಂದಿಗೆ ಕ್ಯಾಡ್‌ಬರಿ ಕಂಪನಿ ಮತ್ತೆ ಬಿಡುಗಡೆ ಮಾಡಿದೆ. ಈ ಬಾರಿಯೂ ಜಾಹೀರಾತು ನೋಡಿ ಚಪ್ಪಾಳೆ ತಟ್ಟಿದ್ದಾರೆ ನೆಟ್ಟಿಗರು

Cadburys modern twist to their 90s iconic advertisement wins hearts dpl

ದೆಹಲಿ(ಸೆ.18): 1990 ರ ದಶಕದಲ್ಲಿ ಚಾಕಲೇಟ್ ಪ್ರಿಯರ ಹಾಟ್‌ ಫೇವರೇಟ್ ಕ್ಯಾಡ್‌ಬರಿ ಮಾಡೆಲ್ ಶಿಮೋನಾ ರಾಶಿಯವರನ್ನು ಒಳಗೊಂಡ ಒಂದು ಜಾಹೀರಾತನ್ನು ಪ್ರಾರಂಭಿಸಿತು. ಫ್ಲೋರಲ್ ಪ್ರಿಂಟ್ ಇದ್ದ ಉಡುಪನ್ನು ಧರಿಸಿದ್ದ ಯುವತಿ ಕ್ರಿಕೆಟ್ ಪಂದ್ಯ ನಡೆಯುವಾಗ ಬದಿಯಲ್ಲಿ ಕುಳಿತು, ಕ್ಯಾಡ್‌ಬರಿ ಡೈರಿ ಮಿಲ್ಕ್ ಬಾರ್ ಅನ್ನು ತಿನ್ನುತ್ತಿದ್ದಳು.

ಆಕೆಯ ಗೆಳೆಯನಾಗಿರೋ ಕ್ರಿಕೆಟಿಗ ಗೆದ್ದಾಗ ಆಕೆ ಮೈದಾನದಲ್ಲಿ ಡ್ಯಾನ್ಸ್ ಮಾಡುತ್ತಾ ಸಂಭ್ರಮಾಚರಿಸಲು ಸೆಕ್ಯುರಿಟಿಯನ್ನು ತಳ್ಳಿ ಮೈದಾನಕ್ಕೆ ಬರುತ್ತಾರೆ. ಬದುಕಿನ ನಿಜವಾದ ಸ್ವಾದವಿದು ಎಂಬ ಟ್ಯಾಗ್‌ಲೈನ್ ಹಿನ್ನೆಲೆಯಲ್ಲಿ ಪ್ಲೇ ಆಗುತ್ತದೆ. ಜಾಹೀರಾತು ಏಜೆನ್ಸಿ ಒಗಿಲ್ವಿ ಅವರಿಂದ ನಿರ್ಮಿಸಲ್ಪಟ್ಟ ಈ ಜಾಹೀರಾತು ಚಾಕೊಲೇಟ್‌ಗಳು ಕೇವಲ ಮಕ್ಕಳಿಗಾಗಿ ಮಾತ್ರ ಎಂಬ ಒಂದು ಹಳೆಯ ಗ್ರಹಿಕೆಯನ್ನು ಬದಲಿಸಿದ ಕೀರ್ತಿಗೆ ಪಾತ್ರವಾಗಿತ್ತು.

ಹಲವು ವರ್ಷಗಳ ನಂತರ ಕ್ಯಾಡ್‌ಬರಿ ತನ್ನ ಪ್ರಸಿದ್ಧ ಜಾಹೀರಾತನ್ನು ಮರುರೂಪಿಸಿಕೊಂಡಿದೆ. ಈ ಬಾರಿ ಮಹಿಳಾ ಕ್ರಿಕೆಟ್ ಪಂದ್ಯವು ಪ್ರಗತಿಯಲ್ಲಿದೆ. ಇದನ್ನು ಡೈರಿ ಮಿಲ್ಕ್ ಅನ್ನು ತಿನ್ನುತ್ತಿರುವ ಒಬ್ಬ ಯುವಕ ಗಮನಿಸುತ್ತಿರುತ್ತಾನೆ. ಅವನ ಗೆಳತಿ ಸಿಕ್ಸ್ ಬಾರಿಸಿ ಗೆದ್ದಾಗ ಅವನು ಸಂಭ್ರಮದಿಂದ ಡ್ಯಾನ್ಸ್ ಮಾಡುತ್ತಾನೆ. ಅವಳನ್ನು ತಬ್ಬಿಕೊಳ್ಳಲು ಮೈದಾನಕ್ಕೆ ಓಡಿ ಬರುತ್ತಾನೆ.

ಕ್ಯಾಡ್‌ಬರಿ ಸಂಸ್ಥೆಯಿಂದ 71 ಟನ್‌ ಬಿಸ್ಕಟ್‌, ಚಾಕಲೇಟ್‌ ವಿತರಣೆ!

ದಶಕಗಳಿಂದ ಕ್ರಿಕೆಟ್ ಪುರುಷರ ಗೇಮ್ ಎಂದೇ ಬಿಂಬಿತವಾಗಿರುವ ದೇಶದಲ್ಲಿ ಈ ಜಾಹೀರಾತು ಹೊಸ ಅರ್ಥವನ್ನು ನೀಡಿದೆ. ಕ್ರಿಕೆಟ್ ಕುರಿತ ದೊಡ್ಡ ತಪ್ಪು ಗ್ರಹಿಕೆಯಲ್ಲಿ ಬದಲಾವಣೆಯನ್ನು ಗುರುತಿಸಲಾಗಿದೆ. ನೆಟ್ಟಿಗರು ಕ್ಯಾಡ್‌ಬರಿಯ ಲಿಂಗ ಸಮಾನತೆಯ ಕಾನ್ಸೆಪ್ಟ್ ಇರೋ ಈ ಜಾಹೀರಾತನ್ನು ಅತಿಯಾಗಿ ಮೆಚ್ಚಿಕೊಂಡಿದ್ದಾರೆ.

ಕ್ಯಾಡ್‌ಬರಿ ಡೈರಿ ಮಿಲ್ಕ್ ಮತ್ತು ಒಗಿಲ್ವಿ, ಇದನ್ನು ಪ್ರೋತ್ಸಾಹಿಸಿ ಎಂದು ಎರಡು ಜಾಹೀರಾತು ಫೋಟೋ ಹಂಚಿಕೊಳ್ಳುವಾಗ ಸಂವಹನ ಸಲಹೆಗಾರ ಕಾರ್ತಿಕ್ ಶ್ರೀನಿವಾಸನ್ ಬರೆದಿದ್ದಾರೆ.

Latest Videos
Follow Us:
Download App:
  • android
  • ios